Big Update: ವಾಹನ ಪಾರ್ಕಿಂಗ್ ಬಗ್ಗೆ ನಿತಿನ್ ಗಡ್ಕರಿ ಮಹತ್ವದ ಘೋಷಣೆ! ಈ ರೂಲ್ಸ್ ಫಾಲೋ ಮಾಡಿದ್ರೆ ಸಿಗುತ್ತೆ ರೂ. 500 ಬಹುಮಾನ!

Nitin Gadkari Announcement on Vehicle Parking: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರ ಮಾತು ಕೇಳಿ ಎಲ್ಲರೂ ಬೆಚ್ಚಿಬಿದ್ದಿದ್ದಾರೆ. ರಸ್ತೆಯಲ್ಲಿ ತಪ್ಪಾಗಿ ಪಾರ್ಕ್ ಮಾಡಿರುವ ವಾಹನದ ಚಿತ್ರ ಕಳುಹಿಸಿದರೆ 500 ರೂಪಾಯಿ ಬಹುಮಾನ ನೀಡುವುದಾಗಿ ಕೇಂದ್ರ ಸಚಿವರು ಕಾರ್ಯಕ್ರಮವೊಂದರಲ್ಲಿ ಘೋಷಿಸಿದ್ದಾರೆ.

Written by - Bhavishya Shetty | Last Updated : Mar 25, 2023, 06:48 PM IST
    • ಈ ನಿಯಮವನ್ನು ಕೇಳಿ ಚಾಲಕರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.
    • ಆದರೆ ಇದು ಜಾರಿಯಾದ ನಂತರ ನಗರಗಳಲ್ಲಿನ ಟ್ರಾಫಿಕ್ ಜಾಮ್‌’ಗಳಿಂದ ಮುಕ್ತಿ ದೊರೆಯಲಿದೆ.
    • ತಪ್ಪಾಗಿ ವಾಹನ ಪಾರ್ಕ್ ಮಾಡಿದರೆ 1000 ರೂಪಾಯಿ ದಂಡ ವಿಧಿಸಲಾಗುವುದು ಎಂದು ತಿಳಿಸಿದರು.
Big Update: ವಾಹನ ಪಾರ್ಕಿಂಗ್ ಬಗ್ಗೆ ನಿತಿನ್ ಗಡ್ಕರಿ ಮಹತ್ವದ ಘೋಷಣೆ! ಈ ರೂಲ್ಸ್ ಫಾಲೋ ಮಾಡಿದ್ರೆ ಸಿಗುತ್ತೆ ರೂ. 500 ಬಹುಮಾನ!
Nitin Gadkari

Nitin Gadkari Announcement on Vehicle Parking: ತಮ್ಮ ಕಾರ್ಯಶೈಲಿಯಿಂದ ಪ್ರಸಿದ್ಧರಾಗಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ರಸ್ತೆಗಳಲ್ಲಿ ತಪ್ಪಾಗಿ ನಿಲ್ಲಿಸುವ ವಾಹನಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ಮಾತನಾಡಿದ್ದಾರೆ. ಅಡ್ಡಾದಿಡ್ಡಿಯಾಗಿ ನಿಲ್ಲಿಸುವ ವಾಹನಗಳಿಂದ ಆಗುವ ಟ್ರಾಫಿಕ್ ಜಾಮ್‌’ನಿಂದ ಮುಕ್ತಿ ಪಡೆಯಲು ಗಡ್ಕರಿ ಹೊಸ ಘೋಷಣೆ ಮಾಡಿದ್ದಾರೆ.

ಇದನ್ನೂ ಓದಿ: Most Valuable Celebrity: 2022ರ ಭಾರತದ ಅತ್ಯಮೂಲ್ಯ ಸೆಲೆಬ್ರಿಟಿ ಯಾರು ಗೊತ್ತಾ? ರಶ್ಮಿಕಾ, ಕೊಹ್ಲಿಗೆ ಠಕ್ಕರ್ ಕೊಟ್ಟ ಸ್ಟಾರ್ ನಟ!

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರ ಮಾತು ಕೇಳಿ ಎಲ್ಲರೂ ಬೆಚ್ಚಿಬಿದ್ದಿದ್ದಾರೆ. ರಸ್ತೆಯಲ್ಲಿ ತಪ್ಪಾಗಿ ಪಾರ್ಕ್ ಮಾಡಿರುವ ವಾಹನದ ಚಿತ್ರ ಕಳುಹಿಸಿದರೆ 500 ರೂಪಾಯಿ ಬಹುಮಾನ ನೀಡುವುದಾಗಿ ಕೇಂದ್ರ ಸಚಿವರು ಕಾರ್ಯಕ್ರಮವೊಂದರಲ್ಲಿ ಘೋಷಿಸಿದ್ದಾರೆ.

ಕೇಂದ್ರ ಸಚಿವರ ಈ ಘೋಷಣೆ ಕೇಳಿ ಕಾರು, ಬೈಕ್ ಹಾಗೂ ಇತರೆ ವಾಹನ ಚಾಲಕರ ಜತೆಗೆ ಜನಸಾಮಾನ್ಯರೂ ಬೆಚ್ಚಿಬಿದ್ದಿದ್ದಾರೆ. ಶೀಘ್ರವೇ ಈ ಕಾನೂನು ತರಲು ಸರಕಾರ ಚಿಂತನೆ ನಡೆಸಿದೆ ಎಂದರು.

ಈ ನಿಯಮವನ್ನು ಕೇಳಿ ಚಾಲಕರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ. ಆದರೆ ಇದು ಜಾರಿಯಾದ ನಂತರ ನಗರಗಳಲ್ಲಿನ ಟ್ರಾಫಿಕ್ ಜಾಮ್‌’ಗಳಿಂದ ಮುಕ್ತಿ ದೊರೆಯಲಿದೆ. ತಪ್ಪಾಗಿ ವಾಹನ ಪಾರ್ಕ್ ಮಾಡಿದರೆ 1000 ರೂಪಾಯಿ ದಂಡ ವಿಧಿಸಲಾಗುವುದು ಎಂದು ತಿಳಿಸಿದರು.

ಚಿತ್ರ ಕಳುಹಿಸಿದವರಿಗೆ 500 ರೂಪಾಯಿ ಬಹುಮಾನ

ತಪ್ಪಾಗಿ ವಾಹನ ಪಾರ್ಕ್ ಮಾಡುವ ಅಭ್ಯಾಸವನ್ನು ನಿಲ್ಲಿಸುವುದು ಈ ಕಾನೂನು ತರುವ ಉದ್ದೇಶವಾಗಿದೆ ಎಂದು ಗಡ್ಕರಿ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು. 'ನಾನು ಕಾನೂನು ತರಲಿದ್ದೇನೆ. ಅದರ ಪ್ರಕಾರ ರಸ್ತೆಬದಿಯಲ್ಲಿ ವಾಹನವನ್ನು ನಿಲ್ಲಿಸುವವರಿಗೆ 1,000 ರೂ.ದಂಡ ವಿಧಿಸಲಾಗುತ್ತದೆ. ಇದಲ್ಲದೆ, ತಪ್ಪಾಗಿ ನಿಲ್ಲಿಸಿದ ವಾಹನದ ಚಿತ್ರವನ್ನು ಕಳುಹಿಸಿದ ವ್ಯಕ್ತಿಗೆ 500 ರೂಪಾಯಿ ಬಹುಮಾನವನ್ನು ನೀಡಲಾಗುತ್ತದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಕಾರ್ಯಕ್ರಮದಲ್ಲಿ ದೀಪದ ಬೆಡಗಿ; ಹರ್ಷಿತಾ ಪೊಣಚ್ಚ

“ಜನರು ಲಕ್ಷ ಕೋಟಿ ಖರ್ಚು ಮಾಡಿ ಕಾರು, ವಾಹನ ಖರೀದಿಸುತ್ತಾರೆ. ಆದರೆ ರಸ್ತೆಯಲ್ಲೇ ವಾಹನ ನಿಲ್ಲಿಸುತ್ತಾರೆ. ನನ್ನ ಅಡುಗೆಯವರು ನಾಗ್ಪುರದಲ್ಲಿ ಎರಡು ಹಳೆಯ ಕಾರುಗಳನ್ನು ತೆಗೆದುಕೊಂಡಿದ್ದಾರೆ. ಇಂದು ನಾಲ್ಕು ಜನರ ಕುಟುಂಬವು ಆರು ಕಾರುಗಳನ್ನು ಖರೀದಿ ಮಾಡುತ್ತಿದೆ. ನನ್ನ ಪ್ರಕಾರ ದಿಲ್ಲಿಯ ಜನರಿಗೆ ವಾಹನ ನಿಲ್ಲಿಸಲೆಂದೇ ರಸ್ತೆ ಮಾಡಿದ್ದೇವೆ ಏನೋ!” ಎಂದು ವ್ಯಂಗ್ಯವಾಡಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News