Gold Price: ಕೇವಲ 2 ದಿನಗಳಲ್ಲಿ ಸಾರ್ವಕಾಲಿಕ ಗರಿಷ್ಟ ಮಟ್ಟ ತಲುಪಲಿದೆ ಚಿನ್ನ! ಇಂದೇ ಈ ಕೆಲಸ ಮಾಡಿದ್ರೆ ಬಚಾವ್ ಅಂತಿದ್ದಾರೆ ತಜ್ಞರು

Today Gold Price: ಮಲ್ಟಿ ಕಮಾಡಿಟಿ ಇಂಡೆಕ್ಸ್ (MCX) ನಲ್ಲಿ ಏಪ್ರಿಲ್ 2023 ರ ಚಿನ್ನದ ಭವಿಷ್ಯದ ಒಪ್ಪಂದವು 10 ಗ್ರಾಂಗೆ 59,310 ರೂ. 0.18 ರಷ್ಟು ವಾರದ ನಷ್ಟವನ್ನು ದಾಖಲಿಸಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ನೋಡಿದರೆ, ಸ್ಪಾಟ್ ಚಿನ್ನದ ದರವು ಪ್ರತಿ ಔನ್ಸ್‌ಗೆ 1976 ಡಾಲರ್‌ನಲ್ಲಿ ವಹಿವಾಟು ನಡೆಸುತ್ತಿದೆ. ಇದು ಹಿಂದಿನ ಸೆಶನ್ 1988 ಡಾಲರ್‌’ಗಿಂತ 0.58 ಶೇಕಡಾ ಗಮನಾರ್ಹ ಇಳಿಕೆಯಾಗಿದೆ.

Written by - Bhavishya Shetty | Last Updated : Mar 25, 2023, 06:08 PM IST
    • ಮುಂದಿನ ಕೆಲವು ದಿನಗಳಲ್ಲಿ ಚಿನ್ನವು ಪ್ರತಿ ಔನ್ಸ್‌ಗೆ 1920-2010 ಡಾಲರ್‌’ಗಳ ನಡುವೆ ವಹಿವಾಟು ನಡೆಸಬಹುದು.
    • ಆದ್ದರಿಂದ ಚಿನ್ನದ ಹೂಡಿಕೆದಾರರು ಜಾಗರೂಕರಾಗಿರಬೇಕೆಂದು ತಜ್ಞರು ಸಲಹೆ ನೀಡುತ್ತಾರೆ.
    • ಅಮೆರಿಕದಲ್ಲಿ ಪ್ರಸ್ತುತ ಬ್ಯಾಂಕಿಂಗ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಚಿನ್ನವನ್ನು ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಲಾಗಿದೆ.
Gold Price: ಕೇವಲ 2 ದಿನಗಳಲ್ಲಿ ಸಾರ್ವಕಾಲಿಕ ಗರಿಷ್ಟ ಮಟ್ಟ ತಲುಪಲಿದೆ ಚಿನ್ನ! ಇಂದೇ ಈ ಕೆಲಸ ಮಾಡಿದ್ರೆ ಬಚಾವ್ ಅಂತಿದ್ದಾರೆ ತಜ್ಞರು
Gold Rate

Today Gold Price: US ಕರೆನ್ಸಿ ಡಾಲರ್ 7 ವಾರಗಳ ಕನಿಷ್ಠ ಮಟ್ಟದಿಂದ ಚೇತರಿಸಿಕೊಂಡಿದ್ದರಿಂದ ಚಿನ್ನದ ಬೆಲೆ ಕುಸಿಯಿತು. ಡಾಲರ್ ಸೂಚ್ಯಂಕವು 102 ಮಟ್ಟಕ್ಕಿಂತ ಹೆಚ್ಚು ವಹಿವಾಟು ನಡೆಸುತ್ತಿದ್ದಂತೆ, ಹೂಡಿಕೆದಾರರು ಲಾಭದ ತೆಗೆದುಕೊಂಡಿದ್ದರಿಂದ ಚಿನ್ನದ ಬೆಲೆ ಕುಸಿದಿದೆ.

ಇದನ್ನೂ ಓದಿ: Most Valuable Celebrity: 2022ರ ಭಾರತದ ಅತ್ಯಮೂಲ್ಯ ಸೆಲೆಬ್ರಿಟಿ ಯಾರು ಗೊತ್ತಾ? ರಶ್ಮಿಕಾ, ಕೊಹ್ಲಿಗೆ ಠಕ್ಕರ್ ಕೊಟ್ಟ ಸ್ಟಾರ್ ನಟ!

ಮಲ್ಟಿ ಕಮಾಡಿಟಿ ಇಂಡೆಕ್ಸ್ (MCX) ನಲ್ಲಿ ಏಪ್ರಿಲ್ 2023 ರ ಚಿನ್ನದ ಭವಿಷ್ಯದ ಒಪ್ಪಂದವು 10 ಗ್ರಾಂಗೆ 59,310 ರೂ. 0.18 ರಷ್ಟು ವಾರದ ನಷ್ಟವನ್ನು ದಾಖಲಿಸಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ನೋಡಿದರೆ, ಸ್ಪಾಟ್ ಚಿನ್ನದ ದರವು ಪ್ರತಿ ಔನ್ಸ್‌ಗೆ 1976 ಡಾಲರ್‌ನಲ್ಲಿ ವಹಿವಾಟು ನಡೆಸುತ್ತಿದೆ. ಇದು ಹಿಂದಿನ ಸೆಶನ್ 1988 ಡಾಲರ್‌’ಗಿಂತ 0.58 ಶೇಕಡಾ ಗಮನಾರ್ಹ ಇಳಿಕೆಯಾಗಿದೆ.

ಯುಎಸ್ ಡಾಲರ್ ಇತ್ತೀಚೆಗೆ 7 ವಾರಗಳ ಕನಿಷ್ಠ ಮಟ್ಟದಿಂದ ಚೇತರಿಸಿಕೊಂಡಿದೆ ಎಂದು ಸರಕು ಮಾರುಕಟ್ಟೆ ತಜ್ಞರು ಹೇಳುತ್ತಾರೆ.. ಚಿನ್ನದ ಬೆಲೆ ಕಡಿಮೆಯಾಗಿರಬಹುದು. ಅಮೆರಿಕದ ಕರೆಂಟ್ ಅಕೌಂಟ್ ಕೊರತೆ ಉತ್ತಮವಾಗಿದ್ದು, ಹೊಸ ಮನೆ ಮಾರಾಟದ ಡೇಟಾ ಕೂಡ ಉತ್ತಮ ಮಟ್ಟದಲ್ಲಿರುವುದರಿಂದ ಡಾಲರ್ ಚೇತರಿಸಿಕೊಂಡಿರಬಹುದು ಎನ್ನಲಾಗಿದೆ. ಹಣದುಬ್ಬರಕ್ಕೆ ಕಡಿವಾಣ ಹಾಕಲು ಅಮೆರಿಕ ಫೆಡ್ ಬಡ್ಡಿ ದರ ಹೆಚ್ಚಿಸುವ ಪ್ರವೃತ್ತಿ ಹಾಗೂ ತನ್ನ ನಿರ್ಧಾರಕ್ಕೆ ಬದ್ಧವಾಗಿರುವುದು ಕೂಡ ಈ ಪರಿಸ್ಥಿತಿಗೆ ಕಾರಣವಾಗಿರಬಹುದು ಎಂದು ಹೇಳಲಾಗುತ್ತಿದೆ.

ಮುಂದಿನ ಕೆಲವು ದಿನಗಳಲ್ಲಿ ಚಿನ್ನವು ಪ್ರತಿ ಔನ್ಸ್‌ಗೆ 1920-2010 ಡಾಲರ್‌’ಗಳ ನಡುವೆ ವಹಿವಾಟು ನಡೆಸಬಹುದು. ಆದ್ದರಿಂದ ಚಿನ್ನದ ಹೂಡಿಕೆದಾರರು ಜಾಗರೂಕರಾಗಿರಬೇಕೆಂದು ತಜ್ಞರು ಸಲಹೆ ನೀಡುತ್ತಾರೆ.

ಸದ್ಯದಲ್ಲಿಯೇ ರೂಪಾಯಿ ಮೌಲ್ಯ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ. ಅಮೆರಿಕದಲ್ಲಿ ಪ್ರಸ್ತುತ ಬ್ಯಾಂಕಿಂಗ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಚಿನ್ನವನ್ನು ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಲಾಗಿದೆ. ಈ ಕಾರಣಕ್ಕಾಗಿ, ಮುಂದಿನ ದಿನಗಳಲ್ಲಿ ಚಿನ್ನದ ಬೆಲೆಗಳು ಹೆಚ್ಚಾಗುವ ಸಾಧ್ಯತೆಯಿದೆ ಎಂದು ತಜ್ಞರು ಸೂಚಿಸುತ್ತಾರೆ. ಆದ್ದರಿಂದ ನಿಗಾ ವಹಿಸಬೇಕು ಎಂದು ಹೇಳಿದರು.

ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯ ವಿಷಯಕ್ಕೆ ಬಂದರೆ, ಇತ್ತೀಚೆಗೆ ಯುಎಸ್ ಫೆಡ್ ಬಡ್ಡಿದರಗಳನ್ನು ಹೆಚ್ಚಿಸಿದ ನಂತರ, ದರಗಳು ತೀವ್ರವಾಗಿ ಕುಸಿದಿವೆ. ಆದರೆ ಎರಡು ದಿನಗಳಲ್ಲಿ ಮತ್ತೊಮ್ಮೆ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪುವ ಸಾಧ್ಯತೆ ಇದೆ.

ಇದನ್ನೂ ಓದಿ: Anushka Sharma : ಬಾಡಿಕಾನ್ ಗೌನ್​ನಲ್ಲಿ ಅನುಷ್ಕಾ! ಬಾಲಿವುಡ್‌ ಪವರ್‌ ಕಪಲ್‌ ಎಂದ ಫ್ಯಾನ್ಸ್..‌

ಸದ್ಯ ಹೈದರಾಬಾದ್‌’ನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 150 ರೂಪಾಯಿ ಇಳಿಕೆಯಾಗಿದ್ದು ರೂ.54,850ರಷ್ಟಿದ್ದರೆ, 24 ಕ್ಯಾರೆಟ್ ಚಿನ್ನದ ಬೆಲೆ ರೂ.59,840ಕ್ಕೆ ತಲುಪಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News