ಇನ್ನು ಮುಂದೆ ಕರಕುಶಲ ವಸ್ತುಗಳಿಗಿಲ್ಲ ಜಿಎಸ್ಟಿ ತೆರಿಗೆ

     

Last Updated : Jan 18, 2018, 08:15 PM IST
ಇನ್ನು ಮುಂದೆ ಕರಕುಶಲ ವಸ್ತುಗಳಿಗಿಲ್ಲ ಜಿಎಸ್ಟಿ ತೆರಿಗೆ title=

ನವದೆಹಲಿ: ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್ಟಿ) ಕೌನ್ಸಿಲ್ ಗುರುವಾರದಂದು 29 ವಸ್ತುಗಳ ಮೇಲೆ ಇದ್ದಂತಹ ತೆರಿಗೆಯನ್ನು ಶೂನ್ಯಕ್ಕೆ ಇಳಿಸಲು ಸರ್ಕಾರ ನಿರ್ಧರಿಸಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.

ಇದರಿಂದಾಗಿ ಕರಕುಶಲ ವಸ್ತುಗಳ ಮೇಲೆ ಇದ್ದಂತಹ ತೆರಿಗೆಯನ್ನು ಇನ್ನು ಮುಂದೆ ಅನ್ವಯವಾಗುವುದಿಲ್ಲ ಎಂದು ತಿಳಿದು ಬಂದಿದೆ. ಇದೆ ಸಂದರ್ಭದಲ್ಲಿ ಜಿಎಸ್ಟಿ ರಿಟರ್ನ್ ಫೈಲಿಂಗ್ ನ್ನು ಸರಳಗೊಳಿಸುವ ಬಗ್ಗೆ  ಸರ್ಕಾರ  ಇನ್ನು ಯಾವುದೇ ಸ್ಪಷ್ಟ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ಅವರು ತಿಳಿಸಿದರು.

10 ದಿನಗಳ ಬಳಿಕ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಜಿಸ್ ಎಸ್ ಟಿ ಸಭೆಯನ್ನು ಕರೆದು ಇನ್ನು ವಿಸ್ತೃತವಾಗಿ ಚರ್ಚಿಸಲಾಗುವುದು ಜೇಟ್ಲಿ ತಿಳಿಸಿದ್ದಾರೆ 

Trending News