ನವದೆಹಲಿ : ಟೆಲಿಕಾಂ ಕ್ಷೇತ್ರದಲ್ಲಿ ರಿಲಯನ್ಸ್ ಜಿಯೋ(Reliance Jio) ಬಂದ ನಂತರ ಇತರ ಎಲ್ಲ ಕಂಪನಿಗಳೂ ನಾ ಮುಂದು, ತಾ ಮುಂದು ಅಂತಾ ಸಿಕ್ಕಾಪಟ್ಟೆ ಆಫರ್ ಕೊಡ್ತಾ ಇರೋದು ಎಲ್ಲರಿಗೂ ತಿಳಿದ ವಿಷಯ. ಅದರಲ್ಲಿ ಏರ್ಟೆಲ್(Airtel) ಇದುವರೆಗೆ ಇದ್ದ 199, 349, 448 ಮತ್ತು 509 ರೂ. ಪ್ಲಾನ್ಗಳನ್ನು ಪರಿಷ್ಕರಿಸುವ ಮೂಲಕ, ಜಿಯೋಗೆ ಸೆಡ್ಡು ಹೊಡೆಯಲು ಮುಂದಾಗಿದೆ.
ಇದನ್ನು ನೋಡಿದರೆ, ಟೆಲಿಕಾಂ ಕಂಪನಿಗಳ ನಡುವೆ ನಡೆಯುತ್ತಿದ್ದ ಬೆಲೆ ಸಮರ ಇನ್ನೂ ಕಡಿಮೆಯಾಗಿಲ್ಲ ಅನ್ನೋದಂತೂ ಖಂಡಿತ. ಅಷ್ಟೇ ಅಲ್ಲ, ಇತ್ತೀಚೆಗೆ, ಏರ್ಟೆಲ್ ಕಂಪನಿ 199, 448 ಮತ್ತು 509 ರೂಪಾಯಿಗಳ ಯೋಜನೆಯಲ್ಲಿ ಡೇಟಾ ಪ್ಯಾಕೇಜ್ಗಿಂತ ಹೆಚ್ಚಿನ ಲಾಭವನ್ನು ನೀಡಿದೆ. ಅದರ ಫುಲ್ ಡೀಟೇಲ್ಸ್ ಇಲ್ಲಿದೆ...
ಪ್ರತಿದಿನ 1.4 ಜಿಬಿ ಡೇಟಾ
ಏರ್ಟೆಲ್ ನೀಡಿರೋ ಈ ಹೊಸ ಪ್ಲಾನ್'ನಲ್ಲಿ 199 ರೂ.ಗಳಿಗೆ ಪ್ರತಿನಿತ್ಯ 1.4ಜಿಬಿ ಡೇಟಾ, 100 ಉಚಿತ ಎಸ್ಎಂಎಸ್ ಮತ್ತು ಅನಿಯಮಿತ ಕರೆಗಳನ್ನು 28 ದಿನಗಳವರೆಗೆ ಪಡೆಯಬಹುದು. ಹಾಗೇ, 448 ರೂ. ಪ್ಲಾನ್'ನಲ್ಲಿ ಪ್ರತಿನಿತ್ಯ 1.4ಜಿಬಿ ಡೇಟಾ, 100 ಉಚಿತ ಎಸ್ಎಂಎಸ್ ಮತ್ತು ಅನಿಯಮಿತ ಕರೆಗಳನ್ನು 82 ದಿನಗಳವರೆಗೆ ಮತ್ತು 509 ರೂ. ಪ್ಲಾನ್'ನಲ್ಲಿ 90 ದಿನಗಳವರೆಗೆ ಪಡೆಯಬಹುದು.
ಅಪ್ಗ್ರೇಡ್ ಆಗಿದೆ 349 ರೂ. ಪ್ಲಾನ್
ಏರ್ಟೆಲ್ ಅದರ 349 ರೂ. ಯೋಜನೆಯನ್ನು ಪರಿಷ್ಕರಿಸಿದ್ದು, ಈ ಮೊದಲು ಪ್ರತಿನಿತ್ಯ ನೀಡುತ್ತಿದ್ದ 2 ಜಿಬಿ ಡೇಟಾ ಬದಲಾಗಿ 2.5ಜಿಬಿ ಡೇಟಾ ದೊರೆಯುತ್ತದೆ. ಇದರೊಂದಿಗೆ ಮೊದಲಿನಂತೆ ಪ್ರತಿನಿತ್ಯ ಉಚಿತ 100 ಎಸ್ಎಂಎಸ್ ಸೌಲಭ್ಯವೂ ದೊರೆಯಲಿದೆ. ಏರ್ಟೆಲ್ನ ಈ ಮೊದಲಿನ 399 ರೂ. ಪ್ಲಾನ್'ನಲ್ಲಿ ದಿನಕ್ಕೆ 1 ಜಿಬಿ ಡೇಟಾವನ್ನು ಕಂಪನಿಯು ನೀಡುತ್ತಿದ್ದು, ಈ ಪ್ಯಾಕ್'ನ ವ್ಯಾಲಿಡಿಟಿ 70 ದಿನಗಳಾಗಿದೆ.
ಇನ್ನು, ಏರ್ಟೆಲ್ 448 ರೂ. ಪ್ಲಾನ್'ನಲ್ಲಿ 82 ದಿನಗಳ ಅವಧಿಗೆ ಪ್ರತಿನಿತ್ಯ 1.4ಜಿಬಿ ಡೇಟಾ ದೊರೆಯಲಿದ್ದು, ಒಟ್ಟು 114.8 ಜಿಬಿ ಡೇಟಾ ದೊರೆಯಲಿದೆ. ಹಾಗೇ 509ರೂ. ಪ್ಲಾನ್'ನಲ್ಲಿ ಒಟ್ಟು 126ಜಿಬಿ ಡೇಟಾ ನೀಡುತ್ತಿದ್ದು, 90 ದಿನಗಳವರೆಗೆ ಪ್ರತಿನಿತ್ಯ 1.4ಜಿಬಿ ಡೇಟಾ ದೊರೆಯಲಿದೆ.