ಮುಂಬೈ: ಕೊರೊನಾ ವೈರಸ್ ನ ಪ್ರಕೋಪ ಹರಡುವಿಕೆಯನ್ನು ತಡೆಗಟ್ಟಲು ಮತ್ತು ಜನರ ತಪಾಸಣೆಯ ಉದ್ದೇಶದಿಂದ ಭಾರತೀಯ ನೌಕಾಪಡೆಯ ಡಾಕ್ ವೊಂದು ಕಡಿಮೆ ಬೆಲೆಯ ಒಂದು ಚಿಕ್ಕ ಉಷ್ಣಾಂಶ ಮಾಪಕ ಸೆನ್ಸರ್ ವೊಂದನ್ನು ವಿಕಸಿತಗೊಳಿಸಿದೆ. ಈ ಕುರಿತು ಅಧಿಕಾರಿಯೊಬ್ಬರು ಗುರುವಾರ ಮಾಹಿತಿ ನೀಡಿದ್ದಾರೆ. ಮುಂಬೈನಲ್ಲಿರುವ ಪಶ್ಚಿಮ ನೌಕಾಪಡೆಯ ವಿಂಗ್ ಹಾಗೂ ಸುಮಾರು 285 ವರ್ಷಗಳಷ್ಟು ಹಳೆಯ ನೌಕಾಪಡೆಯ ಡಾಕ್ ಯಾರ್ಡ್ ನಲ್ಲಿ ನಿತ್ಯ ಸುಮಾರು 20,000 ಜನರು ಪ್ರವೇಶಿಸುತ್ತಾರೆ.
ಇದಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿರುವ ಅಧಿಕಾರಿ, ಇಲ್ಲಿನ ಕಾರ್ಮಿಕರಿಗೆ ಪ್ರವೇಶ ದ್ವಾರದ ಬಳಿಯೇ ತಪಾಸಣೆ ನಡೆಸಲಾಗುತ್ತದೆ ಎಂದಿದ್ದಾರೆ. ಆ ಬಳಿಕ ಮಾತ್ರವೇ ಅವರಿಗೆ ಒಳಗೆ ಪ್ರವೇಶ ನೀಡಲಾಗುತ್ತದೆ. ಇನ್ಫ್ರಾರೆಡ್ ರಿಸರ್ಚ್ ಆಧರಿಸಿ ಕಾರ್ಯನಿರ್ವಹಿಸುವ ಈ ಉಪಕರಣ ತಯಾರಿಕೆಗೆ ಕೇವಲ ರೂ.1000 ಖರ್ಚಾಗಲಿದೆ ಎಂದು ಹೇಳಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅಹಿಕಾರಿ ಕೊವಿಡ್-19 ಮಹಾಮಾರಿಯ ಹಿನ್ನೆಲೆ, ವೆಸ್ಟೆರ್ನ್ ಫ್ಲೀಟ್ ಹಾಗೂ ಡಾಕ್ ಯಾರ್ಡ್ ಒಳಗಡೆ ವೈರಸ್ ನ ಹರಡುವಿಕೆಯನ್ನು ತಡೆಗಟ್ಟಲು ತನಿಖೆ ನಡೆಸುವುದು ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಅವರು, "ಮಾರುಕಟ್ಟೆಯಲ್ಲಿ ಥರ್ಮಾಮೀಟರ್ ಕೊರತೆ ಇದ್ದು, ಅವುಗಳ ಬೆಲೆ ಕೂಡ ಅಧಿಕವಾಗಿದೆ. ಅದರಲ್ಲೂ ವಿಶೇಷವಾಗಿ ಮಹಾಮಾರಿ ಪಸರಿಸಿದ ಹಿನ್ನೆಲೆ ಮಾರುಕಟ್ಟೆಯಲ್ಲಿ ಇವುಗಳ ಕೊರತೆ ಎದುರಾಗಿದೆ" ಎಂದು ಹೇಳಿದ್ದಾರೆ.
ಈ ಹಿನ್ನೆಲಯಲ್ಲಿ "ನೌಕಾಸೇನೆಯ ಡಾಕ್ ಯಾರ್ಡ್ ತನ್ನದೇ ಆದ IR ಆಧಾರಿತ ಉಷ್ಣಾಂಶ ಅಳೆಯುವ ಸೆನ್ಸರ್ ವಿಕಸಿತಗೊಳಿಸಿದೆ. ಈ ಉಪಕರಣದಲ್ಲಿ ಒಂದು ಇನ್ಫ್ರಾರೆಡ್ ಸೆನ್ಸರ್, ಒಂದು LED ಡಿಸ್ಪ್ಲೇ ಹಾಗೂ ಒಂದು ಮೈಕ್ರೋಕಂಟ್ರೋಲರ್ ಅಳವಡಿಸಲಾಗಿದ್ದು, ಇದು 9 ವೋಲ್ಟ್ ಬ್ಯಾಟರಿ ಪವರ್ ಮೇಲೆ ಕಾರ್ಯನಿರ್ವಹಿಸುತ್ತದೆ" ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.