ಬ್ಯಾಂಕ್ ಗ್ರಾಹಕರಿಗೆ ಹೊಸ ಉಡುಗೊರೆ ನೀಡಿದ RBI, ಸಾಲ ಸೆಟಲ್ಮೆಂಟ್ ಗೆ ಬಂತು ನೂತನ ಯೋಜನೆ

ಈ ಬಾರಿ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ಗ್ರಾಹಕರಿಗೆ EMI ಪಾವತಿಸುವುದರಿಂದ ರಿಯಾಯಿತಿ ನೀಡಲು ನಿರಾಕರಿಸಿದ್ದಾರೆ. ಇದಕ್ಕೂ ಮೊದಲು ಕೊರೊನಾ ವೈರಸ್ ಮಹಾಮಾರಿಯನ್ನು ಗಮನದಲ್ಲಿಟ್ಟುಕೊಂಡು RBI, EMI ಪಾವತಿಯಲ್ಲಿ ರಿಯಾಯಿತಿ ನೀಡುವುದಾಗಿ ಘೋಷಿಸಿತ್ತು.

Last Updated : Aug 9, 2020, 08:09 PM IST
ಬ್ಯಾಂಕ್ ಗ್ರಾಹಕರಿಗೆ ಹೊಸ ಉಡುಗೊರೆ ನೀಡಿದ RBI, ಸಾಲ ಸೆಟಲ್ಮೆಂಟ್ ಗೆ ಬಂತು ನೂತನ ಯೋಜನೆ title=

ನವದೆಹಲಿ: ಈ ಬಾರಿ ಭಾರತೀಯ ರಿಸರ್ವ್ ಬ್ಯಾಂಕ್(RBI) ಗವರ್ನರ್ ಶಕ್ತಿಕಾಂತ್ ದಾಸ್ ಗ್ರಾಹಕರಿಗೆ EMI ಪಾವತಿಸುವುದರಿಂದ ರಿಯಾಯಿತಿ ನೀಡಲು ನಿರಾಕರಿಸಿದ್ದಾರೆ. ಇದಕ್ಕೂ ಮೊದಲು ಕೊರೊನಾ ವೈರಸ್ ಮಹಾಮಾರಿಯನ್ನು ಗಮನದಲ್ಲಿಟ್ಟುಕೊಂಡು RBI, EMI ಪಾವತಿಯಲ್ಲಿ ರಿಯಾಯಿತಿ ನೀಡುವುದಾಗಿ ಘೋಷಿಸಿತ್ತು. ಹೀಗಾಗಿ ಮೂರು ತಿಂಗಳ ಅವಧಿಯವರೆಗೆ ಗ್ರಾಹಕರು ಮೊರೆಟೋರಿಯಂ ಸಾಲ (Moratorium Loan) ಲಾಭ ಪಡೆಯುತ್ತಿದ್ದರು. ಆದರೆ, ಇದೀಗ ಸೆಪ್ಟೆಂಬರ್ ನಿಂದ ಮತ್ತೇ EMI ಪಾವತಿಸಬೇಕಾಗಲಿದೆ. ಒಂದು ವೇಳೆ ಪಾವತಿಸದೇ ಹೋದಲ್ಲಿ ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪ್ರಭಾವ ಉಂಟಾಗಲಿದೆ. ಆದರೆ, ಇದರೊಂದಿಗೆ ಕೇಂದ್ರೀಯ ಬ್ಯಾಂಕ್ ತನ್ನ ಗ್ರಾಹಕರಿಗೆ ನೂತನ ಯೋಜನೆಯೊಂದನ್ನು ಜಾರಿಗೊಳಿಸಿದೆ.

ಏನಿದು ಲೋನ್ ರೀಸ್ಟ್ರಕ್ಚರಿಂಗ್ ಸ್ಕೀಮ್?
ತನ್ನ ಘೋಷಣೆಯಲ್ಲಿ ರಿಸರ್ವ್ ಬ್ಯಾಂಕ್ ಗ ಗವರ್ನರ್ ಶಕ್ತಿಕಾಂತ್ ದಾಸ್ ಸಾಲ ಸೆಟಲ್ಮೆಂಟ್ ಗಾಗಿ ಹೊಸದೊಂದು ಯೋಜನೆಯ ಕುರಿತು ಉಲ್ಲೇಖಿಸಿದ್ದಾರೆ. ಈ ಯೋಜನೆಯ ಲಾಭ ಪಡೆದು ಗ್ರಾಹನರು ತಮ್ಮ ಸಾಲದ ಸೆಟಲ್ಮೆಂಟ್ ಮಾಡಬಹುದಾಗಿದೆ. ಇದರ ವಿಶೇಷತೆ ಎಂದರೆ ಈ ಯೋಜನೆಯ ಲಾಭ ಪಡೆದು ಗ್ರಾಹಕರು ಡಿಪಾಲ್ಟರ್ ಪಟ್ಟಿಯಿಂದ ಹೊರಬೀಳಬಹುದು. ವಿತ್ತೀಯ ಪರಿಶೀಲನಾ ನೀತಿಯ ಸಭೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಸಾಲ ಪುನರ್ರಚನೆ ಸೌಲಭ್ಯವನ್ನು ಘೋಷಿಸಿದ್ದಾರೆ. ಸಾಲ ಪುನರ್ರಚನೆಯ ಅನುಮೋದನೆ ಪಡೆದ ನಂತರ, ಈಗ ಬ್ಯಾಂಕುಗಳು ತಮ್ಮ ಸಾಲ ಮರುಪಾವತಿ ವೇಳಾಪಟ್ಟಿಯನ್ನು ಮರುಹೊಂದಿಸಬಹುದು. ಇದರ ಅಡಿಯಲ್ಲಿ, ಬ್ಯಾಂಕುಗಳು ಮರುಪಾವತಿ ಅವಧಿಯನ್ನು ಹೆಚ್ಚಿಸಬಹುದು ಅಥವಾ ಪಾವತಿಯಲ್ಲಿ ಪರಿಹಾರವನ್ನು ನೀಡಬಹುದು. ಈ ಪುನರ್ರಚನೆಯಡಿಯಲ್ಲಿ, ಬ್ಯಾಂಕುಗಳು ಇಎಂಐ ಅನ್ನು ಕಡಿಮೆ ಮಾಡಬೇಕೆ? ಸಾಲದ ಅವಧಿಯನ್ನು ಹೆಚ್ಚಿಸಬೇಕೇ? ಅಥವಾ ಬಡ್ಡಿಯನ್ನು ವಿಧಿಸಬೇಕೇ? ಎಂಬುದನ್ನು ನಿರ್ಧರಿಸಲು ಸಾಧ್ಯವಾಗಲಿದೆ.

ಆದರೆ ಈ ಪುನರ್ರಚನೆಯು 2019 ರ ಜೂನ್ 7 ರಂದು ರಿಸರ್ವ್ ಬ್ಯಾಂಕ್ ಹೊರಡಿಸಿದ ಮಿತವ್ಯಯದ ವಿನ್ಯಾಸ ಚೌಕಟ್ಟಿನ (Frugal design framework)ಅನುಸಾರ ನಡೆಯಲಿದೆ ಎಂದು ರಿಸರ್ವ್ ಬ್ಯಾಂಕ್ ಸ್ಪಷ್ಟಪಡಿಸಿದೆ. ಕರೋನಾ ವೈರಸ್ ಪೀಡಿತ ಕೈಗಾರಿಕೆಗಳಿಗೆ ಸಹಾಯ ಮಾಡಲು ಸಾಲಗಳನ್ನು ಪುನರ್ರಚಿಸುವ ಅಗತ್ಯತೆಯ ಬಗ್ಗೆ ಸರ್ಕಾರವು ರಿಸರ್ವ್ ಬ್ಯಾಂಕಿನೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಈ ಹಿಂದೆ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದು ಇಲ್ಲಿ ಉಲ್ಲೇಖನೀಯ.

ಈ ಸ್ಕೀಮ್ ನಿಂದ ಯಾರಿಗೆ ಲಾಭ ಸಿಗಲಿದೆ?
ವಿಮಾನಯಾನ ಕಂಪನಿಗಳು, ಹೋಟೆಲ್‌ಗಳು ಮತ್ತು ಸ್ಟೀಲ್-ಸಿಮೆಂಟ್ ಕಂಪನಿಗಳು ಬ್ಯಾಂಕ್ ಜಾರಿಗೊಳಿಸಿರುವ ಈ ಹೊಸ ಯೋಜನೆಯ ಮೂಲಕ ಲಾಭ ಪಡೆಯಬಹುದು. ಗೃಹ ಸಾಲ ತೆಗೆದುಕೊಳ್ಳುವ ಗ್ರಾಹಕರು ಇದಕ್ಕಾಗಿ ಬ್ಯಾಂಕಿನ ಪ್ರಕಟಣೆಗಾಗಿ ಕಾಯಬೇಕಾಗಲಿದೆ. ಬ್ಯಾಂಕ್ ಕಡಿಮೆಗೊಳಿಸಿದ ಬಡ್ಡಿದರಕ್ಕೆ ಸಂಬಂಧಿಸಿದಂತೆ, ಆರ್‌ಬಿಐ ಬಡ್ಡಿದರವನ್ನು ಕಡಿಮೆ ಮಾಡುತ್ತದೆ. ಪ್ರಸ್ತುತ ಆರ್‌ಬಿಐ ತನ್ನ ರೆಪೊ ದರವನ್ನು ಶೇ. 4 ಮತ್ತು ರಿವರ್ಸ್ ರೆಪೊ ದರವನ್ನು ಶೇ.3.35% ರಷ್ಟಕ್ಕೆ ನಿಗದಿಪಡಿಸಿದೆ.

Trending News