ಇನ್ನು ಮುಂದೆ ಮುಂಬೈ ಮಹಿಳೆಯರ ರಕ್ಷಣೆಗೆ ಬರಲಿವೆ ಡ್ರೋನ್ ಕ್ಯಾಮರಾಗಳು!

   

Last Updated : May 28, 2018, 02:24 PM IST
ಇನ್ನು ಮುಂದೆ ಮುಂಬೈ ಮಹಿಳೆಯರ ರಕ್ಷಣೆಗೆ ಬರಲಿವೆ ಡ್ರೋನ್ ಕ್ಯಾಮರಾಗಳು! title=

ಮುಂಬೈ: ಮಹಾರಾಷ್ಟ್ರ ಸರ್ಕಾರವು ಮಹಿಳೆಯರ ರಕ್ಷಣೆ ನಿಟ್ಟಿನಲ್ಲಿ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಮುಂಬೈ ನಗರದಲ್ಲಿ ಮಹಿಳೆಯರ ರಕ್ಷಣೆಗೆ ಸಂಬಂಧಿಸಿದ ಹಾಗೆ 250 ಕೋಟಿ ರೂ ಯೋಜನೆಯಡಿಯಲ್ಲಿ ಇನ್ನು ಮುಂದೆ ಡ್ರೋನ್ ಕ್ಯಾಮರಾಗಳು ಮಹಿಳೆಯರ ರಕ್ಷಣೆಗೆ ಹದ್ದಿನ ಕಣ್ಣಿಡಲಿವೆ.

ಇನ್ನು ಮುಂದೆ ಯಾವುದೇ ಘಟನೆಗಳು ನಡೆದರೆ ತಮ್ಮ ಮೊಬೈಲ್ ನಲ್ಲಿರುವ ಆಪ್ ನಲ್ಲಿರುವ ಬಟನ್ ಒತ್ತಿದ  ತಕ್ಷಣವೇ ಸ್ಥಳಕ್ಕೆ ಧಾವಿಸಿ ಅಲ್ಲಿನ ಘಟನೆಯನ್ನು ಲೈವ್ ಮೂಲಕ ಪೊಲೀಸರಿಗೆ ತಿಳಿಸಲಿದೆ. ಆ ಮೂಲಕ ಕ್ರೈಂ ನಿಯಂತ್ರಣಕ್ಕೆ ಸರ್ಕಾರ ಮುಂದಾಗಲಿದೆ.

ಇದರಿಂದ ಡ್ರೋನ್ ಗಳು ಮಹಿಳೆಯರ ರಕ್ಷಣಾ ಸಾಧನಗಳಾಗಿ ಇನ್ನು ಮುಂದೆ ಕಾರ್ಯನಿರ್ವಹಿಸಲಿವೆ ಎಂದು ತಿಳಿದುಬಂದಿದೆ. ಇದರ ಜೊತೆಗೆ ಜನಸಂದಣಿ ಇರುವ ಸ್ಥಳಗಳನ್ನು ನಿರ್ವಹಿಸುವ ನಿಟ್ಟಿನಲ್ಲಿಯೂ ಅವು ಮಹತ್ವದ ಪಾತ್ರ ವಹಿಸಲಿವೆ ಎಂದು  ಮುಂಬೈ  ಪೋಲಿಸ್ ಡಿಸಿಪಿ  ದೀಪಕ್ ದೇವರಾಜ್ ಆವರು ತಿಳಿಸಿದ್ದಾರೆ. 

 

Trending News