ನವದೆಹಲಿ: ಭಾರತದ ಸುಮಾರು 7 ಕೋಟಿ ದಿನಸಿ ಅಂಗಡಿಗಳು ಮುಂಬರುವ ದಿನಗಳಲ್ಲಿ ಮಾರುಕಟ್ಟೆಯಲ್ಲಿ ವರ್ಚಸ್ಸು ಸಾಧಿಸಲು ತಮ್ಮ ತಮ್ಮ ಮೈದಾನಗಳನ್ನು ಬದಲಿಸುವ ಕಾಲ ಬರಲಿದೆ. ಈ ದಿನಸಿ ವ್ಯಾಪಾರಸ್ಥರ ಬಳಿ ತಲುಪಲು ರಿಲಯನ್ಸ್ ಮಾಲೀಕತ್ವದ ಜಿಯೋ ಜಿಯೋ ಮಾರ್ಟ್ ಸೇವೆಯನ್ನು ಆರಂಭಿಸಿದೆ. ಏತನ್ಮಧ್ಯೆ ಲಾಕ್ ಡೌನ್ ನಡುವೆ ಅಮೆಜಾನ್ ಇಂಡಿಯಾ ಕೂಡ ತನ್ನ 'ಲೋಕಲ್ ಶಾಪ್ಸ್ ಆನ್ ಅಮೆಜಾನ್' ಪ್ರೊಗ್ರಾಮ್ ಆರಂಭಿಸಿದೆ.
ಸ್ಥಳೀಯ ದಿನಸಿ ವ್ಯಾಪಾರಷ್ಟರು ಹಾಗೋ ಚಿಲ್ಲರೆ ಮಾರಾತಗಾರರಿಗಾಗಿ ಅಮೆಜಾನ್ ಇಂಡಿಯಾ ಭಾನುವಾರ 'ಲೋಕಲ್ ಶಾಪ್ಸ್ ಆನ್ ಅಮೆಜಾನ್' ಪ್ರೊಗ್ರಾಮ್ ಬಿಡುಗಡೆಗೊಳಿಸಿದೆ. ಇದಕ್ಕೆ ಸಂಬಂಧಿಸಿದಂತೆ PTI ಸುದ್ದಿಸಂಸ್ಥೆಗೆ ಮಾಹಿತಿ ನೀಡಿರುವ ಅಮೆಜಾನ್ ಇಂಡಿಯಾದ ಸೇಲ್ಸ್ ಸರ್ವಿಸ್ ನ ಉಪಾಧ್ಯಕ್ಷ ಗೋಪಾಲ್ ಪಿಲ್ಲೈ, "ಲೋಕಲ್ ಶಾಪ್ಸ್ ಆನ್ ಅಮೆಜಾನ್ ಪ್ಲಾಟ್ ಫಾರ್ಮ್ ಮೂಲಕ ದೇಶದ ಪ್ರತ್ಯೇಕ ಮಾರಾಟಗಾರರನ್ನು ಭಾರತ ಹಾಗೂ ವಿಶ್ವದ ಗ್ರಾಹಕರವರೆಗೆ ತಲುಪಿಸುವುದು ನಮ್ಮ ಪ್ರಯತ್ನವಾಗಿದೆ" ಎಂದು ಹೇಳಿದ್ದಾರೆ.
ಇತ್ತೀಚೆಗಷ್ಟೇ ವಿಶ್ವದ ಸಾಮಾಜಿಕ ಜಾಲತಾಣಗಳ ದೈತ್ಯ ಕಂಪನಿ ಫೇಸ್ ಬುಕ್, ಭಾರತೀಯ ಕಂಪನಿಯಾಗಿರುವ ರಿಲಯನ್ಸ್ ಜೊತೆ ಡೀಲ್ ಮಾಡಿಕೊಂಡಿದೆ. ಫೇಸ್ ಬುಕ್ ಮತ್ತು ರಿಲಯನ್ಸ್ ಮಧ್ಯೆ ನಡೆದ ಈ ಡೀಲ್ ಹಿನ್ನೆಲೆ ವಾಟ್ಸ್ ಆಪ್ ಹಾಗೂ ರಿಲಯನ್ಸ್ ಜಿಯೋ ಮಧ್ಯೆ ವಾಣಿಜ್ಯಾತ್ಮಕ ಒಪ್ಪಂದವೊಂದಕ್ಕೆ ಸಹಿ ಹಾಕಲಾಗಿದೆ. ಈ ಒಪ್ಪಂದ ರಿಲಯನ್ಸ್ ತನ್ನ ಜಿಯೋ ಮಾರ್ಟ್ ಗಾಗಿ ಮಾಡಿಕೊಂಡಿದೆ. ಸದ್ಯ ಜಿಯೋ ಮಾರ್ಟ್ ಅನ್ನು ಟ್ರಯಲ್ ಬೇಸಿಸ್ ಮೇಲೆ ಬಿಡುಗಡೆ ಮಾಡಲಾಗಿದೆ. ಇದು ರಿಲಯನ್ಸ್ ರಿಟೇಲ್ ನ ಇ-ಕಾಮರ್ಸ್ ವೆಂಚರ್ ಆಗಿರಲಿದ್ದು, ಆರಂಭದಲ್ಲಿ ಮುಂಬೈನಲ್ಲಿ ಬಿಡುಗಡೆಗೊಳಿಸಲಾಗಿದೆ. ಜಿಯೋ ಮಾರ್ಟ್ ವಾಟ್ಸ್ ಆಪ್ ಬೇಸ್ಡ್ ಆನ್ಲೈನ್ ಪೋರ್ಟಲ್ ಆಗಿದ್ದು, ಇದರಲ್ಲಿ ರಿಲಯನ್ಸ್ ಗೆ ವಾಟ್ಸ್ ಆಪ್ ಬಳಕೆದಾರರ ಬೇಸ್ ನ ಲಾಭ ಸಿಗಲಿದೆ.
ಈ ಕುರಿತು ಹೇಳಿಕೆ ನೀಡಿರುವ ಅಮೆಜಾನ್ ತನ್ನ ಪ್ರೊಗ್ರಾಮ್ ಸ್ಥಳೀಯ ಅಂಗಡಿಗಳು ಹಾಗೂ ದಿನಸಿ ವ್ಯಾಪಾರಿಗಳ ಬಲವರ್ಧನೆ ಮಾಡಲಿದೆ ಎಂದು ಹೇಳಿದೆ. ಇದಕ್ಕಾಗಿ ಕಂಪನಿ ಒಂದು ವಿಶೇಷ ಡಿಲೆವರಿ ಆಪ್ ಸಿದ್ಧಪಡಿಸಿದೆ ಎಂದಿದೆ. ಕಳೆದ ಆರು ತಿಂಗಳಲ್ಲಿ ಈ ಪ್ರೋಗ್ರಾಮ್ ಮೂಲಕ ಸುಮಾರು 5000 ಕ್ಕೂ ಅಧಿಕ ಲೋಕಲ್ ಅಂಗಡಿಗಳು ಹಾಗೂ ಆನ್ಲೈನ್ ರೀಟೇಲರ್ ಗಳ ಮೂಲಕ ಬೆಂಗಳೂರು, ಮುಂಬೈ, ದೆಹಲಿ, ಹೈದರಾಬಾದ್, ಪುಣೆ, ಜೈಪುರ್, ಅಹ್ಮದಾಬಾದ್, ಕೊಯಮತ್ತೂರು, ಸುರತ್, ಇಂದೋರ್, ಲಖನೌ, ಸಹಾರನ್ ಪುರ್, ಫರಿದಾಬಾದ್, ಕೋಟಾ ಹಾಗೂ ವಾರಾಣಾಸಿ ಇತ್ಯಾದಿ ನಗರಗಳಲ್ಲಿ ಒಂದು ಪಾಯ್ಲೆಟ್ ಪ್ರಾಜೆಕ್ಟ್ ಕೂಡ ಆರಂಭಿಸಿರುವುದಾಗಿ ಕೂಡ ಹೇಳಿದೆ.