NEFT ಮೂಲಕ ಹಣ ವರ್ಗಾವಣೆ ಮಾಡುವವರಿಗೆ ಗುಡ್ ನ್ಯೂಸ್!

NEFT ಯಶಸ್ವಿಯಾಗಲು ಬ್ಯಾಂಕುಗಳು ಇದಕ್ಕಾಗಿ ಸಾಕಷ್ಟು ಹಣವನ್ನು ಇಟ್ಟುಕೊಳ್ಳುವಂತೆ ಕೇಳಿಕೊಳ್ಳಲಾಗಿದೆ.

Last Updated : Dec 7, 2019, 10:57 AM IST
NEFT ಮೂಲಕ ಹಣ ವರ್ಗಾವಣೆ ಮಾಡುವವರಿಗೆ ಗುಡ್ ನ್ಯೂಸ್! title=

ನವದೆಹಲಿ: ಇನ್ಮುಂದೆ  24x7 NEFT ಮೂಲಕ ಹಣ ವರ್ಗಾವಣೆ ಸೌಲಭ್ಯ ಸಿಗಲಿದೆ. ಈ ಬಗ್ಗೆ ಆರ್‌ಬಿಐ(RBI) ಆದೇಶ ಹೊರಡಿಸಿದ್ದು,  ಡಿಸೆಂಬರ್ 15 ರ ರಾತ್ರಿಯಿಂದ/ಡಿಸೆಂಬರ್ 16 ರ ಬೆಳಿಗ್ಗೆಯಿಂದ, ಎಲ್ಲಾ ಏಳು ದಿನಗಳು 24 ಗಂಟೆಗಳ ಕಾಲ ನೆಫ್ಟ್(NEFT) ಸೇವೆ ಒದಗಿಸಲಿವೆ ಎಂದು ತಿಳಿಸಿದೆ. NEFT ಮೂಲಕ ವರ್ಗಾವಣೆ ಮಾಡಲಾದ ಹಣ 2 ಗಂಟೆಗಳಲ್ಲಿ ಖಾತೆಗೆ ತಲುಪಲಿದೆ ಎಂದು ಇದೇ ವೇಳೆ ಭರವಸೆ ನೀಡಲಾಗಿದೆ. ಅಷ್ಟೇ ಅಲ್ಲ NEFT ಮೂಲಕ ರಿಟರ್ನ್ ಸಹ ಸಲ್ಲಿಸಬಹುದಾಗಿದೆ.  ಇದಕ್ಕಾಗಿ ಆರ್‌ಬಿಐ ಬ್ಯಾಂಕ್‌ಗಳಿಗೆ ವಿಶೇಷ ಸೂಚನೆಗಳನ್ನು ನೀಡಿದೆ. 

ಯಾವಾಗಲೂ ಅರ್ಧ ಘಂಟೆಯ 4 ಬ್ಯಾಚ್‌ಗಳು ಇರುತ್ತವೆ ಮತ್ತು ಅದಕ್ಕೆ ತಕ್ಕಂತೆ ಕೆಲಸ ಮಾಡಬೇಕಾಗುತ್ತದೆ. ಮೊದಲ ಬ್ಯಾಚ್ ಡಿಸೆಂಬರ್ 15 ರ ರಾತ್ರಿ 12 ಕ್ಕೆ ಪ್ರಾರಂಭವಾಗುತ್ತದೆ, ಅಂದರೆ ಡಿಸೆಂಬರ್ 16 ರ ಬೆಳಗ್ಗೆ 12: 00 ಕ್ಕೆ ಪ್ರಾರಂಭವಾಗುತ್ತದೆ. ರಜಾದಿನಗಳಲ್ಲಿ ಸಹ  ನೆಫ್ಟ್ ಕಾರ್ಯನಿರ್ವಹಿಸುತ್ತದೆ ಎಂಬುದು ಗಮನಾರ್ಹವಾಗಿದೆ. ಸಾಮಾನ್ಯ ಕೆಲಸದ ವೇಳೆ ನಂತರ NEFT ನೇರವಾಗಿ ಸಂಸ್ಕರಣಾ ಮೋಡ್ ಮೂಲಕ ಕಾರ್ಯನಿರ್ವಹಿಸುತ್ತದೆ ಎಂದು ಹೇಳಲಾಗಿದೆ.

RTGS, NEFT ಬ್ಯಾಂಕ್ ವಹಿವಾಟಿನ ಮೇಲಿನ ಶುಲ್ಕ ರದ್ದು

ಎಲ್ಲೆಲ್ಲಿ ನೆಫ್ಟ್(NEFT) ಕ್ರೆಡಿಟ್ ಇರುತ್ತದೆ, ಸದಸ್ಯ ಬ್ಯಾಂಕ್ ನೆಫ್ಟ್ ಮಾಡಲಾಗಿದೆ ಎಂದು ದೃಡೀಕರಣ ನೀಡುತ್ತವೆ. ನೆಫ್ಟ್‌(NEFT) ಯಶಸ್ವಿಯಾಗಲು ಬ್ಯಾಂಕುಗಳು ಇದಕ್ಕಾಗಿ ಸಾಕಷ್ಟು ಹಣವನ್ನು ಇಟ್ಟುಕೊಳ್ಳುವಂತೆ ಕೇಳಿಕೊಳ್ಳಲಾಗಿದೆ. ಇದಕ್ಕಾಗಿ ಯಾವುದೇ ಮೂಲಸೌಕರ್ಯಗಳು ಬೇಕಾದರೂ ಅದನ್ನು ತಕ್ಷಣ ಸಿದ್ಧಪಡಿಸಬೇಕು ಎಂದು ಬ್ಯಾಂಕುಗಳಿಗೆ ಸೂಚನೆ ನೀಡಲಾಗಿದೆ. ವ್ಯಾಪಾರ ಮತ್ತು ಸಣ್ಣ ಗ್ರಾಹಕರಲ್ಲಿ ನೆಫ್ಟ್(NEFT) ಸೌಲಭ್ಯ ಜನಪ್ರಿಯವಾಗಿದೆ ಎಂದು ಹೇಳಲಾಗಿದ್ದು, 2017-18ನೇ ಸಾಲಿನಲ್ಲಿ 1.9 ಬಿಲಿಯನ್ ವಹಿವಾಟಿನಲ್ಲಿ 1,72,229 ಬಿಲಿಯನ್ ಮೌಲ್ಯದ ವಹಿವಾಟು ಎನ್‌ಇಎಫ್‌ಟಿ(NEFT) ಮೂಲಕ ನಡೆದಿದೆ ಎನ್ನಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಅದರ ಜನಪ್ರಿಯತೆಯು ಹೆಚ್ಚಾಗುವ ಸಾಧ್ಯತೆಯಿದೆ. ಉದ್ಯಮಿಗಳ ಜೊತೆಗೆ ಗ್ರಾಹಕರಿಗೆಇದರಿಂದಾಗಿ ದೊಡ್ಡ ಪರಿಹಾರ ಸಿಗುತ್ತದೆ ಎಂದು ನಂಬಲಾಗಿದೆ.

ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸಲು ಕೇಂದ್ರ ಸರಕಾರ ಮುಂದಾಗಿದ್ದು, ಜನವರಿ 2020 ರಿಂದ ಜಾರಿಗೆ ಬರುವಂತೆ ನೆಫ್ಟ್ ಅಥವಾ ನ್ಯಾಷನಲ್ ಎಲೆಕ್ಟ್ರಾನಿಕ್ ಫಂಡ್ ವರ್ಗಾವಣೆ ವ್ಯವಸ್ಥೆಯಲ್ಲಿ ಆನ್‌ಲೈನ್ ವಹಿವಾಟುಗಾಗಿ ಉಳಿತಾಯ ಬ್ಯಾಂಕ್ ಖಾತೆ ಗ್ರಾಹಕರಿಗೆ ಶುಲ್ಕ ವಿಧಿಸಬಾರದು ಎಂದು ಆರ್‌ಬಿಐ ಬ್ಯಾಂಕುಗಳಿಗೆ ಈಗಾಗಲೇ ಮಾಹಿತಿ ನೀಡಿದೆ.

Trending News