Internet In Flight: ಈಗ ನೀವು ವಿಮಾನದಲ್ಲೂ ಫೋನಿನಲ್ಲಿ ಮಾತನಾಡಬಹುದು, ತಡೆರಹಿತವಾಗಿ ಬಳಸಿ ಹೈ ಸ್ಪೀಡ್ ನೆಟ್

Internet In Flight: ಈ ಸೇವೆಗೆ ಶುಲ್ಕವನ್ನು ಇನ್ನೂ ನಿರ್ಧರಿಸಲಾಗಿಲ್ಲ ಎಂದು BSNL ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ PK ಪುರವಾರ್ ತಿಳಿಸಿದ್ದಾರೆ. BSNL ನವೆಂಬರ್ ನಿಂದ ಈ ಸೇವೆಗಳನ್ನು ಆರಂಭಿಸಬಹುದು.

Written by - Yashaswini V | Last Updated : Oct 21, 2021, 06:35 AM IST
  • ವಿಮಾನದಲ್ಲೂ ಇಂಟರ್ನೆಟ್ ಸೌಲಭ್ಯ ಲಭ್ಯವಿರುತ್ತದೆ
  • ಪ್ರಯಾಣದ ಸಮಯದಲ್ಲಿ ಫೋನಿನಲ್ಲಿ ಮಾತನಾಡಬಹುದು
  • ನವೆಂಬರ್ ನಿಂದ ಸೇವೆ ಆರಂಭವಾಗುವ ನಿರೀಕ್ಷೆ
Internet In Flight: ಈಗ ನೀವು ವಿಮಾನದಲ್ಲೂ ಫೋನಿನಲ್ಲಿ ಮಾತನಾಡಬಹುದು, ತಡೆರಹಿತವಾಗಿ ಬಳಸಿ ಹೈ ಸ್ಪೀಡ್ ನೆಟ್  title=
Internet In Flight (Image courtesy: Reuters)

Internet In Flight: ಈಗ ಮೊಬೈಲ್‌ನಲ್ಲಿ 'ಫ್ಲೈಟ್ ಮೋಡ್' ಆಯ್ಕೆಯು ಹಳೆಯ ವಿಷಯವಾಗಿದೆ. ಏಕೆಂದರೆ ಈಗ ನೀವು ವಿಮಾನದಲ್ಲಿಯೂ ಸಹ ಅತಿ ವೇಗದ ಇಂಟರ್ನೆಟ್  (High Speed Internet) ಅನ್ನು ಬಳಸಲು ಸಾಧ್ಯವಾಗುತ್ತದೆ. ಅಂದರೆ, ವಿಮಾನದಲ್ಲಿ ಕುಳಿತಾಗ, ನೀವು ಇ-ಮೇಲ್ ನಿಂದ ಅಗತ್ಯವಾದ ಕೆಲಸವನ್ನು ನಿಭಾಯಿಸಲು ಸಾಧ್ಯವಾಗುತ್ತದೆ. ಇದು ಮಾತ್ರವಲ್ಲ, ಹಾರಾಟದ ಸಮಯದಲ್ಲಿ ನೀವು ಕರೆಗಳನ್ನು ಮಾಡಲು ಸಹ ಸಾಧ್ಯವಾಗುತ್ತದೆ.

BSNL ಕಂಪನಿಗೆ ಪರವಾನಗಿ:
ಸಾರ್ವಜನಿಕ ವಲಯದ ಟೆಲಿಕಾಂ ಕಂಪನಿ ಬಿಎಸ್‌ಎನ್‌ಎಲ್  (BSNL) ದೇಶದಲ್ಲಿ ಇನ್ಮಾರ್ಸಾಟ್ ನ ಗ್ಲೋಬಲ್ ಎಕ್ಸ್ ಪ್ರೆಸ್ (GX) ಮೊಬೈಲ್ ಬ್ರಾಡ್ ಬ್ಯಾಂಡ್ ಸೇವೆಗಳಿಗೆ ಪರವಾನಗಿ ಪಡೆದಿದೆ. ಇದರೊಂದಿಗೆ, ಇನ್ಮಾರ್ಸ್ಯಾಟ್ ಟರ್ಮಿನಲ್ ಬಳಸಿ, ವಿಮಾನಯಾನದ ಸಮಯದಲ್ಲಿ ಮತ್ತು ಹಡಗುಗಳಿಗೆ ಹೆಚ್ಚಿನ ವೇಗದ ನೆಟ್ ಸೌಲಭ್ಯವನ್ನು ಒದಗಿಸಲಾಗುವುದು. ಯುಕೆ ಮೂಲದ ಮೊಬೈಲ್ ಸ್ಯಾಟಲೈಟ್ ಕಮ್ಯುನಿಕೇಶನ್ ಕಂಪನಿ ಇನ್ಮಾರ್ಸಾಟ್ ನ ವ್ಯವಸ್ಥಾಪಕ ನಿರ್ದೇಶಕ ಗೌತಮ್ ಶರ್ಮಾ, ಸ್ಪೈಸ್ ಜೆಟ್ ಮತ್ತು ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಈಗಾಗಲೇ ಹೊಸ ಜಿಎಕ್ಸ್ ಸೇವೆಗಾಗಿ ಒಪ್ಪಂದಗಳಿಗೆ ಸಹಿ ಹಾಕಿವೆ. ಇದರೊಂದಿಗೆ, 50 Mbps ವೇಗವು ಲಭ್ಯವಿರುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ- Goa: ಗೋವಾ ಶ್ರೀಮಂತ ಪ್ರವಾಸಿಗರನ್ನು ಬಯಸುತ್ತದೆ, ಬಸ್‌ಗಳಲ್ಲಿ ಅಡುಗೆ ಮಾಡುವವರನ್ನಲ್ಲ- ಪ್ರವಾಸೋದ್ಯಮ ಸಚಿವ

ಸ್ಪೈಸ್ ಜೆಟ್ ಜೊತೆಗೆ ಒಪ್ಪಂದ:
ಗೌತಮ್ ಶರ್ಮಾ ಪ್ರಕಾರ, ಜಿಎಕ್ಸ್ ಸೇವೆಯ ಪರಿಚಯದೊಂದಿಗೆ, ಭಾರತೀಯ ದೇಶೀಯ ವಿಮಾನಯಾನ ಸಂಸ್ಥೆಗಳು ಮತ್ತು ಅಂತರಾಷ್ಟ್ರೀಯ ವಿಮಾನಯಾನ ಕಂಪನಿಗಳು ದೇಶದಾದ್ಯಂತ ಹಾರಾಟದ ಸಮಯದಲ್ಲಿ ಹೆಚ್ಚಿನ ವೇಗದ ನೆಟ್ (High Speed Internet) ಸೌಲಭ್ಯವನ್ನು ಒದಗಿಸಲು ಸಾಧ್ಯವಾಗುತ್ತದೆ. ಈ ವರ್ಷದ ಅಂತ್ಯದ ವೇಳೆಗೆ ಹೊಸ ಬೋಯಿಂಗ್ 737 ಮ್ಯಾಕ್ಸ್ ವಿಮಾನವನ್ನು ಪರಿಚಯಿಸುವ ಮೂಲಕ ಸ್ಪೈಸ್ ಜೆಟ್ ತನ್ನ ಪ್ರಯಾಣಿಕರಿಗೆ ಅಗತ್ಯ ಸಂವಹನ ಸೇವೆಗಳನ್ನು ಒದಗಿಸಲು ಸಿದ್ಧವಾಗಿದೆ ಎಂದು ಇನ್ಮಾರ್ಸಾಟ್ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ. ಹೇಳಿಕೆಯ ಪ್ರಕಾರ,  ಬಿಎಸ್‌ಎನ್‌ಎಲ್ ಐಒಎಫ್‌ಸಿ ಅಡಿಯಲ್ಲಿ ಡೋಟಿ ಮತ್ತು ಜಿಎಕ್ಸ್ ಸೇವೆಗಳನ್ನು ಸ್ವೀಕರಿಸಿದ ವಿಮಾನಗಳಲ್ಲಿ ಎಲ್ಲಾ ಭಾರತೀಯ ಗ್ರಾಹಕರಿಗೆ ಈ ಸೌಲಭ್ಯ ಲಭ್ಯವಿರುತ್ತವೆ ಎನ್ನಲಾಗಿದೆ.

ಇದನ್ನೂ ಓದಿ- Indian Railways : ರೈಲ್ವೆ ಪ್ರಯಾಣಿಕರಿಗೆ ಸಿಹಿ ಸುದ್ದಿ! ಒಂದು ದೊಡ್ಡ ಹೆಜ್ಜೆ ಇಟ್ಟಿದೆ ರೈಲ್ವೆ ಇಲಾಖೆ, ಇದರಿಂದ ಈಗ ನಿಮಗಾಗಲಿದೆ ಭರ್ಜರಿ ಲಾಭ

ಸೇವೆ ಯಾವಾಗ ಆರಂಭವಾಗುತ್ತದೆ?
ಇದರರ್ಥ ಭಾರತೀಯ ವಿಮಾನಯಾನ ಕಂಪನಿಗಳು ದೇಶ ಮತ್ತು ವಿದೇಶಗಳಲ್ಲಿ ವಿಮಾನದಲ್ಲಿ ಸಂವಹನ ಸೌಲಭ್ಯಕ್ಕಾಗಿ GX ಅನ್ನು ಬಳಸಲು ಸಾಧ್ಯವಾಗುತ್ತದೆ. ಇದರೊಂದಿಗೆ, ಭಾರತೀಯ ಸಮುದ್ರ ಪ್ರದೇಶದಲ್ಲಿ ಕೆಲಸ ಮಾಡುವ ದೇಶದ ವಾಣಿಜ್ಯ ಕಂಪನಿಗಳು ತಮ್ಮ ಹಡಗುಗಳಲ್ಲಿ ಡಿಜಿಟಲೀಕರಣವನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ ಮತ್ತು ಹಡಗುಗಳ ಉತ್ತಮ ಕಾರ್ಯಾಚರಣೆ ಮತ್ತು ಸಿಬ್ಬಂದಿ ಸದಸ್ಯರಿಗೆ ಸಂಬಂಧಿಸಿದ ಸೇವೆಗಳಿಗೆ ಅನುಕೂಲವಾಗಲಿದೆ. ಈ ಸೇವೆಗೆ ಶುಲ್ಕವನ್ನು ಇನ್ನೂ ನಿರ್ಧರಿಸಲಾಗಿಲ್ಲ ಎಂದು BSNL ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ PK ಪುರವಾರ್ ತಿಳಿಸಿದ್ದಾರೆ. BSNL ನವೆಂಬರ್ ನಿಂದ ಈ ಸೇವೆಗಳನ್ನು ಆರಂಭಿಸಬಹುದು ಎಂದು ನಿರೀಕ್ಷಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News