Facebook Inc, ಕಂಪನಿಯನ್ನು ಹೊಸ ಹೆಸರಿನೊಂದಿಗೆ ಮರುಬ್ರಾಂಡ್ (Facebook Rebranding)ಮಾಡಲು ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ. ಈ ವಿಷಯದ ಬಗ್ಗೆ ಜ್ಞಾನ ಹೊಂದಿರುವ ಮೂಲವನ್ನು ಉಲ್ಲೇಖಿಸಿ, ಮುಂದಿನ ವಾರ ಫೇಸ್ಬುಕ್ ತನ್ನ ಕಂಪನಿಯ ಹೆಸರನ್ನು ಬದಲಾಯಿಸಲು ಯೋಜಿಸುತ್ತಿದೆ ಎಂದು ವರದಿಯಾಗಿದೆ. ಸಿಇಒ ಮಾರ್ಕ್ ಜುಕರ್‌ಬರ್ಗ್ ಅಕ್ಟೋಬರ್ 28 ರಂದು ಕಂಪನಿಯ ವಾರ್ಷಿಕ ಸಂಪರ್ಕ ಸಮಾವೇಶದಲ್ಲಿ ಹೆಸರು ಬದಲಾವಣೆಯ ಕುರಿತು ಮಾತನಾಡಲು ಯೋಚಿಸುತ್ತಿದ್ದಾರೆ ಎನ್ನಲಾಗಿದೆ.
ಈ ಕುರಿತು ಬಂದ ವರದಿಗಳನ್ನು ನಂಬುವುದಾದರೆ, ಫೇಸ್ ಬುಕ್ ಅನ್ನು ಸಾಮಾಜಿಕ ವೇದಿಕೆಗಿಂತ ಹೆಚ್ಚಿನ ಸ್ಥಾನಮಾನವನ್ನು ಒದಗಿಸಲು ಕಂಪನಿ ಈ ನಿರ್ಣಯ ಕೈಗೊಳ್ಳುತ್ತಿದೆ ಎನ್ನಲಾಗಿದೆ. ಆದರೆ, 'ಕಂಪನಿ ಊಹಾಪೋಹಗಳಿಗೆ ಅಥವಾ ವದಂತಿಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ' ಎಂದು ಹೇಳುತ್ತಾ ಫೇಸ್ ಬುಕ್ ಅಧಿಕಾರಿಯೊಬ್ಬರು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ಕಳೆದ ಜುಲೈ ತಿಂಗಳಿನಲ್ಲಿ ನಡೆದ Earing Callನಲ್ಲಿ ಮಾತನಾಡಿದ ಕಂಪನಿಯ ಸಂಸ್ಥಾಪಕ ಮುಖ್ಯಸ್ಥ ಮಾರ್ಕ್ ಜುಕರ್ಬರ್ಗ್ (Mark Zuckerberg), ಕಂಪನಿಯ ಭವಿಷ್ಯ Metaverse ಆಗಿದೆ. ಫೇಸ್ ಬುಕ್ ಗುರಿ ಇಟ್ಟಿರುವ ಕಂಪನಿ ಅಲ್ಫಾಬೆಟ್ ಇನ್ಕಾರ್ಪೋರೇಶನ್ ನಂತಹ ಬೃಹತ್ ಹೋಲ್ಡಿಂಗ್ ಕಂಪನಿಯಾಗಿದೆ. ಇದು ಒಂದು ಸಂಘಟನೆಯ ಅಡಿ ಇನ್ಸ್ಟಾಗ್ರಾಮ್, ವಾಟ್ಸ್ ಆಪ್, ಒಕುಲಾಸ್ ಹಾಗೂ ಮೆಸೆಂಜರ್ ಗಳಂತಹ ಸಾಮಾಜಿಕ ಜಾಲತಾಣಗಳ ಆಪ್ ಗಳಲ್ಲಿ ಒಂದು ಎಂದು ಅವರು ಹೇಳಿದ್ದರು.
ಇದನ್ನೂ ಓದಿ-Facebook : ರಾಜಕಾರಣಿಗಳಿಗೆ 'ಬಿಗ್ ಶಾಕ್' ನೀಡಲು ಮುಂದಾದ 'ಫೇಸ್ ಬುಕ್'..!
ಪ್ರಸ್ತುತ ಕಂಪನಿಯು ತನ್ನ ವ್ಯವಹಾರ ಪದ್ಧತಿಗಳ ಮೇಲೆ ಯುಎಸ್ ಸರ್ಕಾರದಿಂದ ಹೆಚ್ಚಿನ ಪರಿಶೀಲನೆಯನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಈ ಸುದ್ದಿ ಪ್ರಕಟಗೊಂಡಿದ್ದು, ಭಾರಿ ಮಹತ್ವ ಪಡೆದುಕೊಂಡಿದೆ. ಎರಡೂ ಪಕ್ಷಗಳ ಸಂಸದರು ಕಂಪನಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಫೇಸ್ ಬುಕ್ ಕುರಿತು ಯುಎಸ್ ಕಾಂಗ್ರೆಸ್ ನಲ್ಲಿ ಹೆಚ್ಚಾಗುತ್ತಿರುವ ಆಕ್ರೋಶವೆ ಇದಕ್ಕೆ ಕಾರಣ ಎನ್ನಲಾಗಿದೆ.
ಇದನ್ನೂ ಓದಿ-Facebook Data Leak: 53 ಕೋಟಿಗೂ ಅಧಿಕ ಬಳಕೆದಾರರ ಫೋನ್ ನಂಬರ್ ಡಾಟಾ ಲೀಕ್
ಅಕ್ಟೋಬರ್ 18 ರಂದು, ಫೇಸ್‌ಬುಕ್ ಮುಂದಿನ ಐದು ವರ್ಷಗಳಲ್ಲಿ 10,000 ಜನರನ್ನು ನೇಮಿಸಿಕೊಳ್ಳಲು ಯೋಜಿಸುತ್ತಿದೆ ಎಂದು ಹೇಳಿತ್ತು. metaverse - ಹೊಸ ಆನ್‌ಲೈನ್ ಜಗತ್ತು, ಅಲ್ಲಿ ಜನರು ಅಸ್ತಿತ್ವದಲ್ಲಿದ್ದಾರೆ ಮತ್ತು ಹಂಚಿಕೆಯ ವರ್ಚುವಲ್ ಜಾಗದಲ್ಲಿ ಸಂವಹನ ನಡೆಸುತ್ತಾರೆ. Virtual Reality (VR) ಮತ್ತು Augmented Reality (AR) ವಿಭಾಗಗಳಲ್ಲಿ ಫೇಸ್‌ಬುಕ್ ಭಾರಿ ಹೂಡಿಕೆ ಮಾಡಿದೆ ಮತ್ತು ತನ್ನ ಸುಮಾರು ಮೂರು ಬಿಲಿಯನ್ ಬಳಕೆದಾರರನ್ನು ಬಹು ಸಾಧನಗಳು ಮತ್ತು ಆಪ್‌ಗಳಲ್ಲಿ ಸಂಪರ್ಕಿಸಲು ಉದ್ದೇಶಿಸಿದೆ.
ಇದನ್ನೂ ಓದಿ-ಫೇಸ್‌ಬುಕ್ ನೌಕರರು ಪ್ರಧಾನಿ ಮೋದಿಯನ್ನು ನಿಂದಿಸುತ್ತಿದ್ದಾರೆ- ಮಾರ್ಕ್ ಜುಕರ್‌ಬರ್ಗ್‌ಗೆ ಕೇಂದ್ರ ಪತ್ರ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ