WhatsApp Pay ಸೇವೆಗೆ NPCI ಗ್ರೀನ್ ಸಿಗ್ನಲ್, ಶೀಘ್ರವೇ ಭಾರತದಲ್ಲಿ ಸೇವೆ ಆರಂಭ

ವಿಶ್ವದ ಖ್ಯಾತ ಮೆಸ್ಸೇಜಿಂಗ್ ಆಪ್ ಆಗಿರುವ WhatsAppಗೆ ಕೊನೆಗೂ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಹಸಿರು ಹಿಶಾನೆ ದೊರೆತಿದೆ.

Last Updated : Feb 7, 2020, 07:46 PM IST
WhatsApp Pay ಸೇವೆಗೆ NPCI ಗ್ರೀನ್ ಸಿಗ್ನಲ್, ಶೀಘ್ರವೇ ಭಾರತದಲ್ಲಿ ಸೇವೆ ಆರಂಭ title=

ನವದೆಹಲಿ: ವಿಶ್ವದ ಖ್ಯಾತ ಮೆಸ್ಸೇಜಿಂಗ್ ಆಪ್ ಆಗಿರುವ WhatsAppಗೆ ಕೊನೆಗೂ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಹಸಿರು ಹಿಶಾನೆ ದೊರೆತಿದೆ. ಹೀಗಾಗಿ ಶೀಘ್ರವೇ ಫೇಸ್ ಬುಕ್ ಸಂಸ್ಥೆ ಭಾರತದಲ್ಲಿ ತನ್ನ WhatsApp Pay ಸೇವೆಯನ್ನು ಆರಂಭಿಸಲಿದೆ. ಕಳೆದ ಎರಡು ವರ್ಷಗಳಿಂದ ತನ್ನ ಪೇಮೆಂಟ್ಸ್ ವೈಶಿಷ್ಟ್ಯವನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಕೆಲಸ ಮಾಡುತ್ತಿದೆ. ಈಗಾಗಲೇ ಭಾರತೀಯ ರಿಸರ್ವ್ ಬ್ಯಾಂಕ್ ಕಂಪನಿಗೆ ತನ್ನ WhatsApp Pay ಬಿಡುಗಡೆಗೊಳಿಸಲು ಲೈಸನ್ಸ್ ನೀಡಿದೆ. ಇದೀಗ NCPI ಕೂಡ WhatsApp Pay ಸೇವೆ ಬಿಡುಗಡೆಗೆ ತನ್ನ ಒಪ್ಪಿಗೆ ಸೂಚಿಸಿದೆ.

ಹಲವು ಹಂತಗಳಲ್ಲಿ ಈ ಸೇವೆ ಬಿಡುಗಡೆ ಮಾಡಲಾಗುವುದು
ವಾಟ್ಸ್ ಆಪ್ ನ ಈ ವೈಶಿಷ್ಟ್ಯ ಹಲವು ಹಂತಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಮೊದಲ ಹಂತದಲ್ಲಿ ಸುಮಾರು 10 ಮಿಲಿಯನ್ ಬಳಕೆದಾರರಿಗೆ ಈ ವೈಶಿಷ್ಟ್ಯ ಬಳಸುವ ಸೌಕರ್ಯ ನೀಡಲಾಗುತ್ತಿದೆ. ನಂತರದ ಹಂತಗಳಲ್ಲಿ ಇತರೆ ಬಳಕೆದಾರರನ್ನೂ ಕೂಡ ಇದಕ್ಕೆ ಜೋಡಿಸಲಾಗುವುದು ಎಂದು ಕಂಪನಿ ಹೇಳಿದೆ. ಫೆಬ್ರುವರಿ 2018ರಲ್ಲಿ ಈಗಾಗಲೇ ಕೆಲ ಆಯ್ದ ಬಳಕೆದಾರರಿಗೆ ಟ್ರೈಲ್ ರನ್ ರೂಪದಲ್ಲಿ ಈ ಆಯ್ಕೆಯನ್ನು ನೀಡಲಾಗಿದೆ. ಈ ವೇಳೆ ಕಂಪನಿ ಖಾಸಗಿ ವಲಯದ ಅತಿ ದೊಡ್ಡ ಬ್ಯಾಂಕ್ ಐಸಿಐಸಿಐ ಬ್ಯಾಂಕ್ ಜೊತೆ ಒಪ್ಪಂದಕ್ಕೆ ಸಹಿ ಹಾಕಿತ್ತು. ಆದರೆ, ಈ ಸೇವೆಯನ್ನು ಕಂಪನಿ ಅಧಿಕೃತವಾಗಿ ಬಿಡುಗಡೆಗೊಳಿಸಿರಲಿಲ್ಲ. ಏಕೆಂದರೆ ಸರ್ಕಾರದ ವತಿಯಿಂದ ಈ ಸೇವೆಗೆ ಅಧಿಕೃತ ಅನುಮತಿ ನೀಡಲಾಗಿರಲಿಲ್ಲ.

ಈ ಸೇವೆಗೆ ವಿಳಂಬವಾಗಿದ್ದೇಕೆ?
WhatsApp Pay ಸೇವೆಗೆ ಸಂಬಂದಿಸಿದಂತೆ ಈ ಮೊದಲು ಹೇಳಿಕೆ ನೀಡಿದ್ದ Facebook ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾರ್ಕ್ ಜಕರ್ಬರ್ಗ್, ಡೇಟಾಗೆ ಸಂಬಂಧಿಸಿದ ಕೆಲ ನಿಯಮಗಳ ಕಾರಣ ಈ ಸೇವೆಯ ಬಿಡುಗಡೆಯನ್ನು ತಡೆಯಲಾಗಿದೆ ಎಂದಿದ್ದರು. ಭಾರತದಲ್ಲಿ ಸದ್ಯ ನಾವು ಈ ಸೇವೆಯ ಪರೀಕ್ಷೆಗಳನ್ನು ನಡೆಸುತ್ತಿದ್ದು, ಈ ಸೇವೆಯನ್ನು ಹಲವು ಬಳಕೆದಾರರು ನಿರೀಕ್ಷಿಸುತ್ತಿದ್ದಾರೆ. ಹೀಗಾಗಿ ಶೀಘ್ರವೇ ಈ ಸೇವೆಯನ್ನು ನಾವು ಭಾರತೀಯ ಬಳಕೆದಾರರಿಗೆ ಪರಿಚಯಿಸಲು ನಮ್ಮ ಪ್ರಯತ್ನ ಮುಂದುವರೆಸಿದ್ದೇವೆ ಎಂದು ಮಾರ್ಕ್ ಹೇಳಿದ್ದರು. ಈ ಸೇವೆ ಭಾರತದಲ್ಲಿ ಬಿಡುಗಡೆಯಲ್ಲಿ ಆದ ವಿಳಂಬದ ಮುಖ್ಯ ಕಾರಣ ದತ್ತಾಂಶ ಸ್ಥಳೀಕರಣದ ಮಾನದಂಡಗಳು ಎನ್ನಲಾಗಿದೆ. ಈ ಸೇವೆಯ ಡೇಟಾ ಸೆಕ್ಯೂರಿಟಿ ಹಾಗೂ ಪ್ರವೈಸಿ ಕುರಿತು ಭಾರತ ಸರ್ಕಾರ ಆತಂಕ ವ್ಯಕ್ತಪಡಿಸಿತ್ತು. ಭಾರತೀಯ ಬಳಕೆದಾರರ ಎಲ್ಲ ಮಾಹಿತಿ ಭಾರತದಲ್ಲಿಯೇ ಶೇಖರಣೆಯಾಗಬೇಕು ಎಂದು ಸರ್ಕಾರ ಬಯಸಿತ್ತು. ಇದೇ ಒಂದು ದೊಡ್ಡ ಕಾರಣದಿಂದ ಭಾರತದಲ್ಲಿ ಈ ಸೇವೆ ಬಿಡುಗಡೆಯಾಗುತ್ತಿರಲಿಲ್ಲ ಎನ್ನಲಾಗಿದೆ. ಸದ್ಯ ಈ ಕುರಿತಾತ ಎಲ್ಲ ಅಡೆತಡೆಗಳು ದೂರವಾಗಿದ್ದು, ಶೀಘ್ರವೇ ಸಂಸ್ಥೆ ತನ್ನ ಈ ಸೇವೆಯನ್ನು ಕೋಟ್ಯಂತರ ಭಾರತೀಯ ಬಳಕೆದಾರರಿಗೆ ಬಿಡುಗಡೆಗೊಳಿಸುತ್ತಿದೆ ಎಂಬುದು ಮಾತ್ರ ಸಂತಸದ ಸುದ್ದಿ.

Trending News