Omicron Testing Kit: Omicron ಟೆಸ್ಟ್ ಗೆ ಬಂತು ಮೊದಲ ಕಿಟ್, ICMRನಿಂದ ಅನುಮೋದನೆ

Omicron Testing Kit: ಭಾರತದಲ್ಲಿ ಓಮಿಕ್ರಾನ್ ಅಂಕಿ-ಅಂಶಗಳು 1800 ಗಡಿ ದಾಟಿದೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಒಮಿಕ್ರಾನ್ (Omicron) ಪ್ರಕರಣಗಳು ಪತ್ತೆಯಾಗಿವೆ. ಇದೇ ವೇಳೆ, ಒಮಿಕ್ರಾನ್ ನ ಅತಿ ಹೆಚ್ಚು ಪ್ರಕರಣಗಳನ್ನು ಹೊಂದಿರುವ ರಾಜ್ಯ ದೆಹಲಿಯಾಗಿದೆ. 

Written by - Nitin Tabib | Last Updated : Jan 4, 2022, 12:58 PM IST
  • ಓಮಿಕ್ರಾನ್ ಪರೀಕ್ಷಾ ಕಿಟ್ ಗೆ ಸಿಕ್ತು ಅನುಮೋದನೆ.
  • ICMR ನಿಂದ ಮಹತ್ವದ ನಿರ್ಧಾರ.
  • ICMR ಡಿಸೆಂಬರ್ 30 ರಂದು ಕಿಟ್ ಗೆ ಅನುಮೋದನೆ ನೀಡಿದೆ.
Omicron Testing Kit: Omicron ಟೆಸ್ಟ್ ಗೆ ಬಂತು ಮೊದಲ ಕಿಟ್, ICMRನಿಂದ ಅನುಮೋದನೆ title=
Omicron Testing Kit (File Photo)

ನವದೆಹಲಿ: Omicron Testing Kit - ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಕೊರೊನಾವೈರಸ್‌ನ (Coronavirus) ಹೊಸ ರೂಪಾಂತರವಾದ ಓಮಿಕ್ರಾನ್ (New Variant Of Coronavirus) ಅನ್ನು ಪರೀಕ್ಷಿಸಲು ಒಮಿಸ್ಯೂರ್ ಕಿಟ್ (Omicron Kit) ಅನ್ನು ಅನುಮೋದಿಸಿದೆ. OmiSure ಕಿಟ್ ಅನ್ನು ಟಾಟಾ ಮೆಡಿಕಲ್ (Tata Medical Diagnostics Limited) ಅಭಿವೃದ್ಧಿಪಡಿಸಿದೆ.

OmiSureಗೆ ಅನುಮೋದನೆ ನೀಡಿದ ICMR 
ಟಾಟಾ ಮೆಡಿಕಲ್ ಅಂಡ್ ಡಯಾಗ್ನೋಸ್ಟಿಕ್ಸ್ ಲಿಮಿಟೆಡ್‌ನ TATA MD CHECK RT-PCR OmiSure ಅನ್ನು ಡಿಸೆಂಬರ್ 30 ರಂದು ಐಸಿಎಂಆರ್ ಅನುಮೋದಿಸಿದೆ. ಆದರೆ ಅದರ ಮಾಹಿತಿಯನ್ನು ಇಂದು (ಮಂಗಳವಾರ) ಹಂಚಿಕೊಳ್ಳಲಾಗಿದೆ.

ದೇಶದಲ್ಲಿ 1800 ಕ್ಕೂ ಹೆಚ್ಚು ಒಮಿಕ್ರಾನ್ ಪ್ರಕರಣಗಳು ಪತ್ತೆ
ದೇಶದ 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೊರೊನಾವೈರಸ್‌ನ ಹೊಸ ರೂಪಾಂತರವಾದ ಓಮಿಕ್ರಾನ್‌ನ ಇದುವರೆಗೆ 1,892 ಪ್ರಕರಣಗಳು ವರದಿಯಾಗಿವೆ, ಅದರಲ್ಲಿ 766 ಸೋಂಕಿತರು ಚೇತರಿಸಿಕೊಂಡಿದ್ದಾರೆ. ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಮಹಾರಾಷ್ಟ್ರದಲ್ಲಿ ಹೊಸ ರೂಪಾಂತರದ (Coronavirus New Variant)  ಗರಿಷ್ಠ 568 ಪ್ರಕರಣಗಳು ವರದಿಯಾಗಿದ್ದು, ದೆಹಲಿಯಲ್ಲಿ 382, ​​ಕೇರಳದಲ್ಲಿ 185, ರಾಜಸ್ಥಾನದಲ್ಲಿ 174, ಗುಜರಾತ್‌ನಲ್ಲಿ 152 ಮತ್ತು ತಮಿಳುನಾಡಿನಲ್ಲಿ 121 ಪ್ರಕರಣಗಳು ವರದಿಯಾಗಿವೆ.

ಭಾರತದಲ್ಲಿ 1 ದಿನದಲ್ಲಿ 37 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ
ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 37,379 ಹೊಸ ಕೋವಿಡ್ -19 (Coronavirus) ಪ್ರಕರಣಗಳು ಬಂದ ನಂತರ, ದೇಶದಲ್ಲಿ ಸೋಂಕಿತರ ಸಂಖ್ಯೆ 3 ಕೋಟಿ 49 ಲಕ್ಷ 60 ಸಾವಿರದ 261 ಕ್ಕೆ ಏರಿದೆ ಮತ್ತು ಸಕ್ರಿಯ ಪ್ರಕರಣಗಳ ಸಂಖ್ಯೆ 1 ಲಕ್ಷ 71 ಸಾವಿರ 830 ಕ್ಕೆ ಏರಿದೆ. 

ಅಂಕಿ-ಅಂಶಗಳ ಪ್ರಕಾರ, ಇನ್ನೂ 124 ಸೋಂಕಿತರ ಮರಣದ ನಂತರ, ದೇಶದಲ್ಲಿ ಕರೋನಾದಿಂದ (Delta) ಸಾವನ್ನಪ್ಪಿದವರ ಸಂಖ್ಯೆ 4 ಲಕ್ಷ 82 ಸಾವಿರ 17 ಕ್ಕೆ ಏರಿದೆ. ಪ್ರಸ್ತುತ, ದೇಶದಲ್ಲಿ ಚೇತರಿಕೆಯ ಪ್ರಮಾಣವು ಶೇ. 98.13 ರಷ್ಟಿದೆ. ಕಳೆದ 24 ಗಂಟೆಗಳಲ್ಲಿ ಕೋವಿಡ್-19 ಸಕ್ರಿಯ ಪ್ರಕರಣಗಳಲ್ಲಿ 26 ಸಾವಿರದ 248 ಪ್ರಕರಣಗಳು ಏರಿಕೆಯಾಗಿವೆ. 

ಇದನ್ನೂ ಓದಿ-Offline Digital Payments: ಈಗ ಇಂಟರ್ನೆಟ್ ಇಲ್ಲದೆ ಸಾಧ್ಯ ಹಣ ವರ್ಗಾವಣೆ! ಪಾವತಿ ಮಿತಿಯನ್ನು ನಿಗದಿಪಡಿಸಿದ RBI

ಆರೋಗ್ಯ ಸಚಿವಾಲಯದ ಪ್ರಕಾರ, ಪ್ರಸ್ತುತ ದೇಶದಲ್ಲಿ ದೈನಂದಿನ ಸಕಾರಾತ್ಮಕತೆಯ ಪ್ರಮಾಣವು ಶೇ.3.24ರಷ್ಟಿದ್ದು, ಸಾಪ್ತಾಹಿಕ ಸಕಾರಾತ್ಮಕತೆಯ ದರವು ಶೇ.2.05 ರಷ್ಟಿದೆ. ಇದುವರೆಗೆ ದೇಶದಲ್ಲಿ ಒಟ್ಟು 3,43,06,414 ಜನರು ಕರೋನಾದಿಂದ ಚೇತರಿಸಿಕೊಂಡಿದ್ದಾರೆ. ಭಾರತದಲ್ಲಿ ಕೋವಿಡ್-19 (Covid-19) ಸಾವಿನ ಪ್ರಮಾಣ ಶೇ.1.38 ರಷ್ಟಿದೆ.

ಇದನ್ನೂ ಓದಿ-Bangalore Lockdown:ಕೊರೊನಾ 3ನೇ ಅಲೆಯ ಬಲೆಯೊಳಗೆ ಬೆಂಗಳೂರು! ಲಾಕ್ ಆಗೋದು ಫಿಕ್ಸ್!?

ಕರೋನಾ (Third Wave) ತಡೆಗಟ್ಟುವಿಕೆಗಾಗಿ ಭಾರತದಲ್ಲಿ ಲಸಿಕೆ ಅಭಿಯಾನವನ್ನು (Vaccination) ವೇಗವಾಗಿ ನಡೆಸಲಾಗುತ್ತಿದೆ. ಇದುವರೆಗೆ ದೇಶದಲ್ಲಿ 146.70 ಕೋಟಿಗೂ ಹೆಚ್ಚು ಲಸಿಕೆ ಡೋಸ್‌ಗಳನ್ನು(Vaccine) ನೀಡಲಾಗಿದೆ ಎಂಬುದು ಇಲ್ಲಿ ಗಮನಾರ್ಹ ಸಂಗತಿ.

ಇದನ್ನೂ ಓದಿ-'ಸಂವಿಧಾನವನ್ನೇ ಗೌರವಿಸದ ಕಾಂಗ್ರೆಸ್ಸಿಗರದು ಗೂಂಡಾಗಳ ಪಾರ್ಟಿ' 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News