ಅಭಿನಂದನ್ ತಾಯ್ನಾಡಿಗೆ ಮರಳುವುದು ತಡವಾದದ್ದು ಏಕೆ ಗೊತ್ತಾ?

ಭಾರತದ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಶುಕ್ರವಾರ ಅತ್ತಾರಿ-ವಾಘಾ ಗಡಿ ಮೂಲಕ ಭಾರತಕ್ಕೆ ಮರಳಿದರು.  

Last Updated : Mar 2, 2019, 09:58 AM IST
ಅಭಿನಂದನ್ ತಾಯ್ನಾಡಿಗೆ ಮರಳುವುದು ತಡವಾದದ್ದು ಏಕೆ ಗೊತ್ತಾ? title=
Pic Courtesy: Reuters

ಲಾಹೋರ್: ಭಾರತದ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಶುಕ್ರವಾರ ಅತ್ತಾರಿ-ವಾಘಾ ಗಡಿ ಮೂಲಕ ಭಾರತಕ್ಕೆ ಮರಳಿದರು.. ಸುಮಾರು 4 ಗಂಟೆಗೆ ಪಾಕಿಸ್ತಾನದ ಅಧಿಕಾರಿಗಳೊಂದಿಗೆ ವಾಘಾ ಗಡಿಯನ್ನು ತಲುಪಿದ 'ಅಭಿನಂದನ್'ರನ್ನು ರಾತ್ರಿ 9 ಗಂಟೆಯ ನಂತರ ಭಾರತಕ್ಕೆ ಹಸ್ತಾಂತರಿಸಿದರು. ಅಂತಹ ಸಂದರ್ಭದಲ್ಲಿ, ವಾಘಾ ಗಡಿಯಿಂದ ಅತ್ತಾರಿ ಗಡಿಗೆ ಬರಲು 5 ಗಂಟೆಗಳ ಸಮಯ ತೆಗೆದುಕೊಳ್ಳಲಾಗಿದೆ. ಈ ವಿಳಂಬಕ್ಕೆ ಕಾರಣ ಏನೆಂಬುದು ಈಗ ಬೆಳಕಿಗೆ ಬಂದಿದೆ. 

ವಾಸ್ತವವಾಗಿ, ಪಾಕಿಸ್ತಾನದ ಅಧಿಕಾರಿಗಳು ಅಭಿನಂದನ್ ಅವರಿಗೆ ಕ್ಯಾಮರಾದಲ್ಲಿ ಹೇಳಿಕೆ ಸಲ್ಲಿಸಲು ಸೂಚಿಸಿದ್ದಾರೆ. ಇದರ ನಂತರವಷ್ಟೇ ಗಡಿ ದಾಟಿ ಸ್ವದೇಶಕ್ಕೆ ಮರಳಲು ಅವಕಾಶ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅಭಿನಂದನ್ ಅವರಿಗೆ ಕ್ಯಾಮರಾ ಮುಂದೆ ಹೇಳಿಕೆ ನೀಡಲು ಕೇಳಲಾಯಿತು ಎನ್ನಲಾಗಿದೆ. ಅದಾಗ್ಯೂ ಇದು ಅಸ್ಪಷ್ಟವಾಗಿದೆ. ಈ ವಿಡಿಯೋವನ್ನು ಮಧ್ಯ ಮಧ್ಯದಲ್ಲಿ ಕಟ್ ಮಾಡಲಾಗಿದ್ದು, ಇದು ಪಾಕಿಸ್ತಾನದ ನಿಲುವನ್ನು ಪರೋಕ್ಷವಾಗಿ ಸೂಚಿಸುತ್ತದೆ.

ಪಾಕಿಸ್ತಾನದ ಎಫ್ -16 ಯುದ್ಧ ವಿಮಾನವನ್ನು ಅಭಿನಂದನ್ ಪತನಗೊಳಿಸಿರುವ ಬಗ್ಗೆ ರೆಕಾರ್ಡ್ ವೀಡಿಯೋ ಸಂದೇಶದಲ್ಲಿ ಅವರ ಬಿಡುಗಡೆಯ ಮೊದಲು ಯಾವುದೇ ಉಲ್ಲೇಖವಿಲ್ಲ ಎಂದು ಭಾರತೀಯ ಏರ್ ಫೋರ್ಸ್ ಹೇಳಿದೆ.  ಪಾಕಿಸ್ತಾನದ ಸರ್ಕಾರ ಬೆಳಗ್ಗೆ ಎಂಟು ಗಂಟೆಗಳ ಸ್ಥಳೀಯ ಸಮಯದಲ್ಲಿ ಪೈಲಟ್ನ ವೀಡಿಯೊ ಸಂದೇಶವನ್ನು ಬಿಡುಗಡೆ ಮಾಡಿತು. ಈ ವಿಡಿಯೋದಲ್ಲಿ ಅವರು ಹೇಗೆ ಪಾಕಿಸ್ತಾನದ ವಶದಲ್ಲಿ ಸಿಲುಕಿದರು ಎಂಬುದರ ಬಗ್ಗೆ ತಿಳಿಸಿದ್ದಾರೆ.

"ವಿಡಿಯೋ ಸಂದೇಶ ರೆಕಾರ್ಡ್ ಮಾಡುವ ಕಾರಣದಿಂದಾಗಿ ಅಭಿನಂದನ್ ಅವರನ್ನು ಭಾರತಕ್ಕೆ ಹಸ್ತಾಂತರಿಸುವುದು ವಿಳಂಬವಾಯಿತು" ಎಂದು ಒಂದು ಮೂಲ ಹೇಳಿದೆ. ಫೆಬ್ರವರಿ 27 ರಂದುಜಮ್ಮು ಮತ್ತು ಕಾಶ್ಮೀರದ ಪೂಂಚ್‌ ಹಾಗೂ ನೌಶೆರಾ ಪ್ರದೇಶಗಳಲ್ಲಿನ ಭಾರತದ ವಾಯು ವಲಯ ದಾಟಿ ಬುಧವಾರ ಒಳನುಸುಳಿದ್ದ ಪಾಕಿಸ್ತಾನ ಯುದ್ಧ ವಿಮಾನಗಳನ್ನು ದೇಶದ ಯುದ್ಧ ವಿಮಾನಗಳು ಯಶಸ್ವಿಯಾಗಿ ಹಿಮ್ಮೆಟ್ಟಿಸಿದ್ದವು. ಇದೇ ಕಾರ್ಯಾಚರಣೆಯಲ್ಲಿ ಭಾರತದ ಒಂದು ಮಿಗ್‌ 21 ಯುದ್ಧ ವಿಮಾನ ಪತನಗೊಂಡಿತ್ತು. ಅದರ ಫೈಲಟ್‌ ಅಭಿನಂದನ್‌ ಪಾಕ್‌ ಗಡಿಯಲ್ಲಿ ಇಳಿದಿದ್ದರು. ಅದಕ್ಕೂ ಒಂದು ದಿನ ಮುಂಚೆ, ಪಾಕಿಸ್ತಾನದ ಬಾಲಾಕೋಟ್ನಲ್ಲಿ ಭಾರತವು ಭಯೋತ್ಪಾದನಾ ಅಭಿಯಾನವನ್ನು ಆರಂಭಿಸಿತು.

ವಿಮಾನ ಪತನಗೊಂಡ ವೇಳೆ ಅಭಿನಂದನ್ ಪ್ಯಾರಾಚೂಟ್ ಬಳಸಿ ಹೊರಬಂದರು. ಆದರೆ ಅವರು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಬಿದ್ದಿದ್ದರಿಂದ ಪಾಕಿಸ್ತಾನ ಸೈನ್ಯ ಅವರನ್ನು ವಶಕ್ಕೆ ತೆಗೆದುಕೊಂಡಿತು. ವಾಘಾ ಗಡಿಯಲ್ಲಿ ಅಭಿನಂದನ್ ಅವರ ದಾಖಲೆ ಪ್ರಕ್ರಿಯೆ ಹಿನ್ನೆಲೆಯಲ್ಲಿ ಅವರನ್ನು ಭಾರತಕ್ಕೆ ಹಸ್ತಾಂತರಿಸುವಲ್ಲಿ ವಿಳಂಬವಾಯಿತು ಎಂದು ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿವೆ.

ವಾಘಾ ಗಡಿ ತಲುಪಿದ ನಂತರ ವಿಂಗ್ ಕಮಾಂಡರ್ ಮನೆಗೆ ಮರಳಲು ನಾನು ಖುಷಿಯಾಗಿದ್ದೇನೆ ಎಂಬುದು ಅಭಿನಂದನ್ ಅವರ ಮೊದಲ ಪ್ರತಿಕ್ರಿಯೆಯಾಗಿತ್ತು. ಆದಾಗ್ಯೂ, ಅವರು ದೀರ್ಘ ವೈದ್ಯಕೀಯ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಈ ಸಮಯದಲ್ಲಿ, ವೈದ್ಯರು ಅವರ ಮೇಲ್ವಿಚಾರಣೆ ನಡೆಸುತ್ತಾರೆ. ಬಳಿಕವಷ್ಟೇ ಅವರು ಮನೆಗೆ ಹಿಂದಿರುಗಲು ಸಾಧ್ಯವಾಗುತ್ತದೆ ಎಂದು ವಾಯುಸೇನೆ ಮೂಲಗಳು ತಿಳಿಸಿವೆ.

ಅತ್ತಾರಿ ಗಡಿ ತಲುಪಿದ ನಂತರ ವಿಂಗ್ ಕಮಾಂಡರ್ ವರ್ಧಮಾನ್ ಅವರನ್ನು ಅಮೃತಸರ್ ವಿಮಾನ ನಿಲ್ದಾಣಕ್ಕೆ ಕರೆತರಲಾಯಿತು. ಅಲ್ಲಿಂದ 12 ಗಂಟೆಯ ವೇಳೆಗೆ ಅವರನ್ನು ವಿಶೇಷ ವಿಮಾನದ ಮೂಲಕ ಪಾಲಂ ವಿಮಾನ ನಿಲ್ದಾಣಕ್ಕೆ ಕರೆತರಲಾಯಿತು. ಬಳಿಕ ಅವರನ್ನು ಆರ್ ಆರ್ ಆಸ್ಪತ್ರೆಗೆ ಕಳುಹಿಸಲಾಗಿದ್ದು, ನಾಲ್ಕು ದಿನಗಳ ಕಾಲ ಆಸ್ಪತ್ರೆಯಲ್ಲಿರುತ್ತಾರೆ ಮೂಲಗಳು ತಿಳಿಸಿವೆ. ಈ ಸಮಯದಲ್ಲಿ ಅಭಿನಂದನ್ ಅವರಿಗೆ ಎಲ್ಲಾ ರೀತಿಯ ವೈದ್ಯಕೀಯ ಪರೀಕ್ಷೆ ನಡೆಸಲಿದೆ.
 

Trending News