ಕೊಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಾನುವಾರದಂದು ನೇತಾಜಿ ಸುಭಾಸ್ ಚಂದ್ರ ಬೋಸ್‌ಗೆ ಏನಾಯಿತು ಎಂದು ತಿಳಿಯುವ ಹಕ್ಕಿದೆ ಎಂದು ಪ್ರತಿಪಾದಿಸಿದರು. 74 ವರ್ಷಗಳ ಹಿಂದೆ ನಾಪತ್ತೆಯಾದ ದಿನದಂದು ಮಣ್ಣಿನ ಮಗ ಸುಭಾಶ್ ಚಂದ್ರಬೋಸ್ ಅವರನ್ನು ಸ್ಮರಿಸುತ್ತಾ ಮಮತಾ ಬ್ಯಾನರ್ಜೀ ಹೇಳಿದರು.
ಮಮತಾ ಬ್ಯಾನರ್ಜೀ ಮಾತನಾಡಿ "ಈ ದಿನ, 1945 ರಲ್ಲಿ, ನೇತಾಜಿ ತೈವಾನ್‌ನ ತೈಹೋಕು ವಿಮಾನ ನಿಲ್ದಾಣದಿಂದ ಹೋಗಿ ಕಣ್ಮರೆಯಾದರು. ಅವರಿಗೆ ಏನಾಯಿತು ಎಂದು ನಮಗೆ ಇನ್ನೂ ತಿಳಿದಿಲ್ಲ. ಈ ಮಣ್ಣಿನ ಮಗನ ಬಗ್ಗೆ ತಿಳಿದುಕೊಳ್ಳಲು ಜನರಿಗೆ ಹಕ್ಕಿದೆ" ಎಂದು ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ. ಆಗಸ್ಟ್ 18, 1945 ರಂದು ನೇತಾಜಿ ಅವರು ಕಣ್ಮರೆಯಾದ ನಂತರ ಅವರು ಎಲ್ಲಿದ್ದಾರೆ ಎಂಬುದು ಇನ್ನೂ ತಿಳಿದಿಲ್ಲ.
On this day, in 1945, Netaji went on a flight from Taihoku Airport in Taiwan, only to disappear forever. We still do not know what happened to him. People have a right to know about the great son of the soil
— Mamata Banerjee (@MamataOfficial) August 18, 2019
ನೇತಾಜಿ ತೈವಾನ್‌ನ ತೈಹೋಕು ವಿಮಾನ ನಿಲ್ದಾಣದಿಂದ ವಿಮಾನ ಹತ್ತಿದ್ದರು, ಅದು ಅಪಘಾತಕ್ಕೀಡಾಗಿ ಮಹಾನ್ ನಾಯಕನ ಸಾವಿಗೆ ಕಾರಣವಾಯಿತು ಎಂದು ಹಲವಾರು ವರದಿಯಾಗಿದ್ದವು. ಆದಾಗ್ಯೂ, ಅವರ ಕಣ್ಮರೆಯ ಬಗ್ಗೆ ತಜ್ಞರು ವಿಭಿನ್ನ ಸಿದ್ಧಾಂತಗಳನ್ನು ಮಂಡಿಸಿದ್ದರಿಂದ ಅವರ ಸಾವಿನ ಬಗ್ಗೆ ಯಾವುದೇ ಧೃಡಿಕರಣವಿಲ್ಲ. ಇದನ್ನು ತಿಳಿದುಕೊಳ್ಳಲು ಕೇಂದ್ರ ಸರ್ಕಾರವು ಹಲವು ಬಾರಿ ಸಮಿತಿ ರಚನೆ ಮಾಡಿದ್ದರು ಕೂಡ ಪತ್ತೆ ಹಚ್ಚಲು ಆಗಿರಲಿಲ್ಲ.
1956 ರಲ್ಲಿ ಷಾ ನವಾಜ್ ಸಮಿತಿ, 1970 ರಲ್ಲಿ ಖೋಸ್ಲಾ ಕಮಿಷನ್, 2005 ರಲ್ಲಿ ಮುಖರ್ಜಿ ಕಮಿಷನ್ - ನೇತಾಜಿಯ ಸಾವು ಅಥವಾ ಕಣ್ಮರೆಗೆ ಸಂಬಂಧಿಸಿದ ರಹಸ್ಯಗಳ ಬಗ್ಗೆ ಬೆಳಕು ಚೆಲ್ಲಲು,ರಚಿಸಲಾಗಿತ್ತು ಆದರೂ ಉತ್ತರ ಸಿಕ್ಕಿರಲಿಲ್ಲ. ಸೆಪ್ಟೆಂಬರ್ 1, 2016 ರಂದು, ನರೇಂದ್ರ ಮೋದಿ ಸರ್ಕಾರವು ಜಪಾನಿನ ಸರ್ಕಾರದ ತನಿಖಾ ವರದಿಗಳನ್ನು ಪ್ರಕಟಿಸಿತು, ಇದು ತೈವಾನ್‌ನಲ್ಲಿ ವಿಮಾನ ಅಪಘಾತದಲ್ಲಿ ಬೋಸ್ ಸಾವನ್ನಪ್ಪಿದೆ ಎಂದು ತೀರ್ಮಾನಿಸಿತು. ಆದಾಗ್ಯೂ, ನೇತಾಜಿ ವಿಮಾನ ಅಪಘಾತದಿಂದ ಬದುಕುಳಿದರು ಮತ್ತು ಅಜ್ಞಾತವಾಸದಲ್ಲಿ ವಾಸಿಸುತ್ತಿದ್ದರು ಎಂದು ಹಲವರು ನಂಬುತ್ತಾರೆ.