ಇಂಗ್ಲೀಷ್ ನಲ್ಲಿ ತಪ್ಪಾಗಿ ಮಾತನಾಡಿದ್ದಕ್ಕೆ ವ್ಯಕ್ತಿಯ ಕೊಲೆ

   

Last Updated : May 11, 2018, 06:03 PM IST
ಇಂಗ್ಲೀಷ್ ನಲ್ಲಿ  ತಪ್ಪಾಗಿ ಮಾತನಾಡಿದ್ದಕ್ಕೆ ವ್ಯಕ್ತಿಯ ಕೊಲೆ  title=

ಅಲಿಮಪಲ್ಲಿ: ಇಂಗ್ಲಿಷ್‌ ನಲ್ಲಿ ಸಂಭಾಷಣೆ ನಡೆಸುವಾಗ ವೇಳೆ ಗ್ರಾಮರ್ ತಪ್ಪಿದ್ದಕ್ಕೆ ವ್ಯಕ್ತಿಯೋಬ್ಬನನ್ನೆ ಹತ್ಯೆ ಗೈದಿರುವ  ಘಟನೆ  ಕರ್ನಾಟಕ ಮತ್ತು ಕೇರಳ ಗಡಿ ಭಾಗದಲ್ಲಿ ನಡೆದಿದೆ.

ಮೃತಪಟ್ಟಿರುವ  ವ್ಯಕ್ತಿಯನ್ನು ಅಲ್ಲಿಂಪಲ್ಲಿಯ ಆಶೀಶ್‌ ವಿಲಿಯಂ ಎನ್ನಲಾಗಿದೆ . ಅಲ್ಲಿಂಪಲ್ಲಿಯ ಅಟೋರಿಕ್ಷಾ ಚಾಲಕ ದಿನೇಸನ್‌ ಹಾಗೂ ಆಶೀಶ್‌ ವಿಲಿಯಂ ಪರಸ್ಪರ ಒಂದೇ ಬಾರ್‌ನಲ್ಲಿ ಕುಡಿಯುತ್ತಿದ್ದಾಗ. ಆಶೀಶ್‌ ಇಂಗ್ಲಿಷ್‌ನಲ್ಲಿ ಮಾತನಾಡಲು ಪ್ರಾರಂಭಿಸಿದ್ದಾನೆ.

ಈ ಸಂದರ್ಭದಲ್ಲಿ ಗ್ರಾಮರ್ ತಪ್ಪಾಗಿರುವ ಬಗ್ಗೆ  ದೋಷ ಆಗಿರುವ ಬಗ್ಗೆ ದಿನೇಸನ್‌, ಆಶೀಶ್‌ಗೆ ತಿಳಿಸಿದ್ದಾನೆ. ಆದರೆ ಇದಕ್ಕೆ ಕಿವಿಗೊಡದ ಆಶೀಶ್‌, ಬಾರ್‌ ಬಿಟ್ಟು ಅಲ್ಲಿಂಪಲ್ಲಿ ಬಸ್‌ ನಿಲ್ದಾಣಕ್ಕೆ ಬರುವಾಗ ಹಿಂಬಾಗದಿಂದ ಬಂದು ದಿನೆಶನ್ ಆಶಿಶ್ ತಲೆಗೆ ಹೊಡೆದ ಪರಿಣಾಮವಾಗಿ ಅವನು ಅಲ್ಲೇ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. 

ಈಗಾಗಲೇ ಪೊಲೀಸರು ದಿನೆಶನ್ ನ್ನು ಬಂಧಿಸಿ ನ್ಯಾಯಾಂಗಕ್ಕೆ ಒಪ್ಪಿಸಿದ್ದಾರೆ ಎಂದು ಪೋಲಿಸ್ ಮೂಲಗಳು ತಿಳಿಸಿವೆ.

Trending News