ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ನಿರಂತರವಾಗಿ ಹೆಚ್ಚುತ್ತಿದ್ದು ಮತ್ತೊಮ್ಮೆ ಪೆಟ್ರೋಲ್ ಬೆಲೆ 25 ಪೈಸೆ ಮತ್ತು ಡೀಸೆಲ್ ಬೆಲೆ 21 ಪೈಸೆ ಹೆಚ್ಚಾಗಿದೆ.
ಈ ಹೆಚ್ಚಳದ ನಂತರ ದೆಹಲಿಯಲ್ಲಿ ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ 80.38 ರೂ.ಗೆ ಮತ್ತು ಡೀಸೆಲ್ ಬೆಲೆಯನ್ನು ಲೀಟರ್‌ಗೆ 80.40 ರೂ.ಗೆ ಹೆಚ್ಚಿಸಲಾಗಿದೆ.
ವಿಶೇಷವೆಂದರೆ ಕಳೆದ ಹಲವು ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ನಿರಂತರವಾಗಿ ಹೆಚ್ಚುತ್ತಿವೆ. ಬುಧವಾರ, ಡೀಸೆಲ್ ಪೆಟ್ರೋಲ್ಗಿಂತ ಹೆಚ್ಚು ದುಬಾರಿಯಾಗಿದೆ.
ಸತತ 18ನೇ ದಿನವೂ ತೈಲ ದರ ಏರಿಕೆ: ಮೊದಲ ಬಾರಿಗೆ ಡೀಸೆಲ್ ಪೆಟ್ರೋಲ್‌ಗಿಂತಲೂ ದುಬಾರಿ
ಇದು ಸಾಮಾನ್ಯವಾಗಿ ನೀವು ಊಹಿಸದ ಸುದ್ದಿ. ಹೌದು ಪೆಟ್ರೋಲ್‌ಗಿಂತ ಡೀಸೆಲ್ ಹೆಚ್ಚು ದುಬಾರಿಯಾಗಿದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಲೀಟರ್ ಡೀಸೆಲ್ ಬೆಲೆ ಪೆಟ್ರೋಲ್‌ಗಿಂತ ಹೆಚ್ಚಿತ್ತು. ತೈಲ ಮಾರುಕಟ್ಟೆ ಕಂಪನಿಗಳು (ಎಚ್‌ಪಿಸಿಎಲ್, ಬಿಪಿಸಿಎಲ್, ಐಒಸಿ) ಬೆಲೆಗಳನ್ನು ಹೆಚ್ಚಿಸಿವೆ. ಕಂಪನಿಗಳು ಪೆಟ್ರೋಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ, ಆದರೆ ಡೀಸೆಲ್ ಬೆಲೆಯನ್ನು 48 ಪೈಸೆ ಹೆಚ್ಚಿಸಿವೆ. ಬುಧವಾರ ಬೆಲೆ ಹೆಚ್ಚಳದ ನಂತರ ದೆಹಲಿಯಲ್ಲಿ ಒಂದು ಲೀಟರ್ ಡೀಸೆಲ್ ಬೆಲೆ 79.88 ರೂ. ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 79.76 ರೂ. ಇತ್ತು.
ಕಳೆದ 14 ದಿನಗಳಲ್ಲಿ ಪೆಟ್ರೋಲ್-ಡೀಸೆಲ್ ದರ 8.28 ರೂ. ಹೆಚ್ಚಳ
ಗಮನಿಸಬೇಕಾದ ಸಂಗತಿಯೆಂದರೆ ಒಂದು ಕಡೆ ಕಚ್ಚಾ ತೈಲದ ಬೆಲೆ ಕಳೆದ 15 ದಿನಗಳಿಂದ ಬ್ಯಾರೆಲ್‌ಗೆ $ 35-40ರ ನಡುವೆ ಇದ್ದರೆ, ಮತ್ತೊಂದೆಡೆ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಸ್ಥಿರ ಏರಿಕೆ ಕಂಡುಬಂದಿದೆ.