ಒಂದು ದಿನದ ನಂತರ ಮತ್ತೆ ಹೆಚ್ಚಾದ ಪೆಟ್ರೋಲ್-ಡೀಸೆಲ್‌!

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಕಚ್ಚಾ ತೈಲದ ಬೆಲೆಯಲ್ಲಿನ ಏರಿಳಿತದ ನಡುವೆ ಗುರುವಾರ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಾಗಿದೆ. ಈ ಹಿಂದೆ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಮಂಗಳವಾರ ಹೆಚ್ಚಾಗಿದ್ದು, ಬುಧವಾರ ದರದಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ.  

Last Updated : Sep 12, 2019, 08:42 AM IST
ಒಂದು ದಿನದ ನಂತರ ಮತ್ತೆ ಹೆಚ್ಚಾದ ಪೆಟ್ರೋಲ್-ಡೀಸೆಲ್‌! title=

ಬೆಂಗಳೂರು: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಸ್ವಲ್ಪ ಏರಿಕೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಗುರುವಾರ ಏರಿಕೆಯಾಗಿದೆ. ಈ ಹಿಂದೆ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಮಂಗಳವಾರ ಹೆಚ್ಚಾಗಿದ್ದು, ಬುಧವಾರ ಬೆಲೆಗಳು ಸ್ಥಿರವಾಗಿತ್ತು. 

ಗುರುವಾರ ಬೆಳಿಗ್ಗೆ ಪೆಟ್ರೋಲ್ ದರ ಲೀಟರ್‌ಗೆ 6 ಪೈಸೆ ಮತ್ತು ಡೀಸೆಲ್ 5 ಪೈಸೆ ಏರಿಕೆಯಾಗಿದೆ. ಇದರೊಂದಿಗೆ ದೆಹಲಿಯಲ್ಲಿ ಪೆಟ್ರೋಲ್ 71.82 ರೂ.ಗೆ ಮತ್ತು ಡೀಸೆಲ್ ಲೀಟರ್‌ಗೆ 65.19 ರೂ.ಗೆ ತಲುಪಿದೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 74.21 ರೂ. ಮತ್ತು ಡೀಸೆಲ್ ಬೆಲೆ 67.50 ರೂ. ಆಗಿದೆ.

ಈ ದರವು ಇಂದು ಬೆಳಿಗ್ಗೆ 6 ಗಂಟೆಯಿಂದ ನಾಳೆ ಬೆಳಿಗ್ಗೆ 6 ಗಂಟೆಯವರೆಗೆ ಅನ್ವಯವಾಗಲಿದೆ.

ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಗಳು ಕೆಳಕಂಡಂತಿದೆ

ನಗರಗಳು

ಪೆಟ್ರೋಲ್ 

(ರೂ./ಲೀ)

ಡೀಸೆಲ್ 

(ರೂ./ಲೀ)

ದೆಹಲಿ 71.82 65.19
ಕೊಲ್ಕತ್ತಾ 74.55 67.60
ಮುಂಬೈ 77.50 68.37
ಚೆನ್ನೈ 74.63 68.90
ಬೆಂಗಳೂರು 74.37 67.50
ಹೈದರಾಬಾದ್ 76.35 71.07
ತಿರುವನಂತಪುರಂ 74.89 69.91

ದೇಶಾದ್ಯಂತ ಎಲ್ಲಾ ರಾಜ್ಯಗಳ ಪೆಟ್ರೋಲ್-ಡೀಸೆಲ್ ಬೆಲೆ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ: 

https://www.iocl.com/TotalProductList.aspx

Trending News