ಗಗನದತ್ತ ಮುಖಮಾಡಿದ ಪೆಟ್ರೋಲ್-ಡೀಸೆಲ್‌!

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾದ ನಂತರ, ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಗಗನದತ್ತ ಮುಖಮಾಡಿದೆ.

Last Updated : Sep 19, 2019, 09:57 AM IST
ಗಗನದತ್ತ ಮುಖಮಾಡಿದ ಪೆಟ್ರೋಲ್-ಡೀಸೆಲ್‌! title=

ಬೆಂಗಳೂರು: ಸೌದಿ ಅರಾಮ್ಕೊ ಮೇಲೆ ಡ್ರೋನ್ ದಾಳಿಯ ನಂತರ, ತೈಲ ಪೂರೈಕೆ ಕಡಿಮೆಯಾದ ಕಾರಣ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ನಿರಂತರವಾಗಿ ಹೆಚ್ಚುತ್ತಿದೆ. ಗುರುವಾರ ಬೆಳಿಗ್ಗೆ ಕಚ್ಚಾ ತೈಲ ಬೆಲೆ ಕೂಡ ಹೆಚ್ಚಾಗಿದೆ. ಅಲ್ಲದೆ, ಸತತ ಮೂರನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ದೊಡ್ಡ ಜಿಗಿತ ಕಂಡುಬಂದಿದೆ. ದೆಹಲಿಯಲ್ಲಿ ಪೆಟ್ರೋಲ್ 29 ಪೈಸೆ ಏರಿಕೆಯಾಗಿ 72.71 ರೂ.ಗೆ ಮತ್ತು ಡೀಸೆಲ್ 19 ಪೈಸೆ ಏರಿಕೆ ಕಂಡು 66.01 ರೂ.ಗೆ ತಲುಪಿದೆ. 

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾದ ನಂತರ, ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಗಗನದತ್ತ ಮುಖಮಾಡಿದೆ. 

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 75.19 ರೂ. ಮತ್ತು ಡೀಸೆಲ್ ಬೆಲೆ 68.26 ರೂ. ಆಗಿದೆ.

ಈ ದರವು ಇಂದು ಬೆಳಿಗ್ಗೆ 6 ಗಂಟೆಯಿಂದ ನಾಳೆ ಬೆಳಿಗ್ಗೆ 6 ಗಂಟೆಯವರೆಗೆ ಅನ್ವಯವಾಗಲಿದೆ.

ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಗಳು ಕೆಳಕಂಡಂತಿದೆ

ನಗರಗಳು

ಪೆಟ್ರೋಲ್ 

(ರೂ./ಲೀ)

ಡೀಸೆಲ್ 

(ರೂ./ಲೀ)

ದೆಹಲಿ 72.71 66.01
ಕೊಲ್ಕತ್ತಾ 75.43 68.42
ಮುಂಬೈ 78.39 69.24
ಚೆನ್ನೈ 75.56 69.77
ಬೆಂಗಳೂರು 75.19 68.26
ಹೈದರಾಬಾದ್ 77.29 71.96
ತಿರುವನಂತಪುರಂ 76.10 71.05

ದೇಶಾದ್ಯಂತ ಎಲ್ಲಾ ರಾಜ್ಯಗಳ ಪೆಟ್ರೋಲ್-ಡೀಸೆಲ್ ಬೆಲೆ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ: 

https://www.iocl.com/TotalProductList.aspx

Trending News