Adhipatra: ಬಿಗ್‌ ಬಾಸ್‌ ರೂಪೇಶ್‌ ಶೆಟ್ಟಿಯ ಅಧಿಪತ್ರದಲ್ಲಿ ಕರಾವಳಿಯ ದೈವ ದರ್ಶನ!

Adhipatra Update: ಚಂದನವನದ ನಟ ಹಾಗೂ ಬಿಗ್‌ ಬಾಸ್‌ ಖ್ಯಾತಿಯ ರೂಪೇಶ್‌ ಶೆಟ್ಟಿ ಮುಖ್ಯಪಾತ್ರದಲ್ಲಿ ಬಣ್ಣ ಹಚ್ಚಿರುವ  ಅಧಿಪತ್ರ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.  

Written by - Zee Kannada News Desk | Last Updated : May 12, 2024, 09:13 AM IST
  • ಅಧಿಪತ್ರ ಸಿನಿಮಾದ ಟೀಸರ್‌ನಲ್ಲಿ ಆಟಿ ಕಳಂಜಾ, ಯಕ್ಷಗಾನ, ಹುಲಿ ಕುಣಿತ ಇದೆಲ್ಲವನ್ನು ನೋಡಬಹುದು.
  • ಅಧಿಪತ್ರ ಚಿತ್ರದ ಝಲಕ್‌ನಲ್ಲಿ ಗಗ್ಗರ ಬೆಟ್ಟದ ದೈವದ ವಿಚಾರ ಹೇಳಲಾಗಿದೆ̤
  • ಇನ್ನೂ ಅಧಿಪತ್ರ ಸಿನಿಮಾದಲ್ಲಿ ನಿರೂಪಕಿ ಜಾಹ್ನವಿ ರೂಪೇಶ್ ಶೆಟ್ಟಿಗೆ ಜೋಡಿ ಆಗಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
Adhipatra: ಬಿಗ್‌ ಬಾಸ್‌ ರೂಪೇಶ್‌ ಶೆಟ್ಟಿಯ ಅಧಿಪತ್ರದಲ್ಲಿ ಕರಾವಳಿಯ ದೈವ ದರ್ಶನ! title=

Adhipatra Teaser Out: ಸ್ಯಾಂಡಲ್‌ವುಡ್‌ ನಟ ರೂಪೇಶ್‌ ಶೆಟ್ಟಿ ಅಭಿನಯದ ಅಧಿಪತ್ರ ಸಿನಿಮಾದ ಟೀಸರ್‌ ರಿಲೀಸ್‌ ಆಗಿದೆ. ಈ ಚಿತ್ರವೂ ಕೂಡ ಕರಾವಳಿ ಭಾಗದ ಕಥೆಯನ್ನು ಹೊಂದಿದ್ದು, ಇದರಲ್ಲಿ ಅಲ್ಲಿಯ ವಿಶೇಷ ಆಚರಣೆಗಳನ್ನು ತೋರಿಸಲಾಗಿದೆ. ಈ ಸಿನಿಮಾದ ಟೀಸರ್‌ನಲ್ಲಿ  ಆಟಿ ಕಳಂಜಾ, ಯಕ್ಷಗಾನ, ಹುಲಿ ಕುಣಿತ  ಇದೆಲ್ಲವನ್ನು ನೋಡಬಹುದು.

ಅಧಿಪತ್ರ ಚಿತ್ರದ ನಿರ್ದೇಶಕ ಚಯನ್ ಶೆಟ್ಟಿ ಹೊಸ ರೀತಿಯ ಕಥೆಯನ್ನು ಹೆಣೆಯಲಾಗಿದ್ದು, ಈ ಸಿನಿಮಾದ ಚಿತ್ರೀಕರಣವನ್ನು ಕರಾವಳಿ ಭಾಗದಲ್ಲಿಯೇ ಮಾಡಿದ್ದಾರೆ. ಈ ಚಿತ್ರದ ಝಲಕ್‌ನಲ್ಲಿ ಗಗ್ಗರ ಬೆಟ್ಟದ ದೈವದ ವಿಚಾರ ಹೇಳಲಾಗಿದೆ, ಹಾಗೆಯೇ ಊರಿನಲ್ಲಿನಡೆಯುತ್ತಿರೋ ವಿಷಯಕ್ಕೆಲ್ಲ ಈ ದೈವವೇ ಕಾರಣ ಅನ್ನೋ ಮಾತು ಡೈಲಾಗ್ ರೂಪದಲ್ಲಿ ಇದೆ.

ಇದನ್ನೂ ಓದಿ: ಕುರುಡನ ಪಾತ್ರದಲ್ಲಿ ಎನ್ ಟಿಆರ್ ಗೆ ವಿಲನ್ ಆಗಿ ಕಾಣಿಕೊಳ್ಳಲಿದ್ದಾರೆ ಸೈಫ್!!

ಸದ್ಯ ಅಧಿಪತ್ರ ಸಿನಿಮಾ ಟೀಸರ್‌ನಲ್ಲಿ ಚಿತ್ರದ ಹಲವು ಪಾತ್ರದ ಝಲಕ್ ಕೂಡ ಇದ್ದು, ಶೂಟಿಂಗ್‌ ಕಂಪ್ಲೀಟ್‌  ಆಗಿದೆ. ಸದ್ಯ ಈ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸ ಭರದಿಂದ ಸಾಗುತ್ತಿದ್ದು, ಶೀಘ್ರದಲ್ಲೇ ಚಿತ್ರತಂಡ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡುವುದರ ಜೊತೆಗೆ ಬೆಳ್ಳಿತೆರೆ ತರಲು ಸಜ್ಜಾಗುತ್ತಾಯಿದೆ.

ಇನ್ನೂ ಅಧಿಪತ್ರ ಸಿನಿಮಾದಲ್ಲಿ ನಿರೂಪಕಿ ಜಾಹ್ನವಿ ರೂಪೇಶ್ ಶೆಟ್ಟಿಗೆ ಜೋಡಿ ಆಗಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮತ್ತೆ ಇದರಲ್ಲಿ ನುರಿತ  ಕಲಾವಿದರೇ ಇದ್ದು, ಕಾಂತಾರ ಚಿತ್ರ ಖ್ಯಾತಿಯ ಪ್ರಕಾಶ್ ತುಮಿನಾಡು ಹಾಗೂ ಮತ್ತಷ್ಟು ಅನೇಕ ಕಲಾವಿದರೂ ಬಣ್ಣ ಹಚ್ಚಿದ್ದಾರೆ. ಈ ಸಿನಿಮಾದಲ್ಲಿ ಎಂ.ಕೆ.ಮಠ  ಕೂಡ ಅಭಿನಯಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News