ಇಂದೂ ಸಹ ಬದಲಾಗದ ಪೆಟ್ರೋಲ್ ದರ, ಡೀಸೆಲ್ ಕೊಂಚ ಇಳಿಕೆ‌!

ಶುಕ್ರವಾರದಿಂದ ಸತತವಾಗಿ ಇಳಿಕೆಯಾಗುತ್ತಿರುವ ಡೀಸೆಲ್ ದರದಲ್ಲಿ ಇಂದೂ ಕೂಡ 7-8 ಪೈಸೆ ಇಳಿಕೆ ಕಂಡು ಬಂದಿದೆ. ಪೆಟ್ರೋಲ್ ದರದಲ್ಲಿ ಸತತ ಆರನೇ ದಿನವೂ ಯಾವುದೇ ಬದಲಾವಣೆ ಆಗಿಲ್ಲ.

Last Updated : Oct 21, 2019, 07:58 AM IST
ಇಂದೂ ಸಹ ಬದಲಾಗದ ಪೆಟ್ರೋಲ್ ದರ, ಡೀಸೆಲ್ ಕೊಂಚ ಇಳಿಕೆ‌! title=

ನವದೆಹಲಿ: ಪೆಟ್ರೋಲ್-ಡೀಸೆಲ್ ಬೆಲೆ ದಾಖಲೆಯ ಮಟ್ಟ ತಲುಪಿದ ನಂತರ, ತೈಲ ಕಂಪನಿಗಳು ಗ್ರಾಹಕರಿಗೆ ನಿರಂತರವಾಗಿ ಪರಿಹಾರ ನೀಡುತ್ತಿವೆ. ಅಕ್ಟೋಬರ್ ಆರಂಭದಿಂದ ಪೆಟ್ರೋಲ್ ದರ ಲೀಟರ್‌ಗೆ 1 ರೂಪಾಯಿಗಿಂತಲೂ ಕಡಿಮೆಯಾಗಿದೆ. 

ಕ್ರಿಯಾತ್ಮಕ ಬೆಲೆ ಯೋಜನೆ ಅಡಿಯಲ್ಲಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಜಾಗತಿಕ ಕಚ್ಚಾ ತೈಲದ ಬೆಲೆಗಳೊಂದಿಗೆ ಸಮನ್ವಯದಲ್ಲಿ ಪ್ರತಿದಿನವೂ ಪರಿಷ್ಕರಿಸಲಾಗುತ್ತಿದೆ. ಈ ದರವು ಇಂದು ಬೆಳಿಗ್ಗೆ 6 ಗಂಟೆಯಿಂದ ನಾಳೆ ಬೆಳಿಗ್ಗೆ 6 ಗಂಟೆಯವರೆಗೆ ಅನ್ವಯವಾಗಲಿದೆ.

ಶುಕ್ರವಾರದಿಂದ ಸತತವಾಗಿ ಇಳಿಕೆಯಾಗುತ್ತಿರುವ ಡೀಸೆಲ್ ದರದಲ್ಲಿ ಇಂದೂ ಕೂಡ 7-8 ಪೈಸೆ ಇಳಿಕೆ ಕಂಡು ಬಂದಿದೆ. ಪೆಟ್ರೋಲ್ ದರದಲ್ಲಿ ಸತತ ಆರನೇ ದಿನವೂ ಯಾವುದೇ ಬದಲಾವಣೆ ಆಗಿಲ್ಲ.

ಪ್ರಪಂಚದಾದ್ಯಂತ ತೈಲ ಪೂರೈಕೆ ಕುಸಿಯುತ್ತಿರುವ ಕಾರಣ, ಏಷ್ಯಾದ ಮಾರುಕಟ್ಟೆಗಳಲ್ಲಿ ತೈಲ ದರದ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ. ದೆಹಲಿಯಲ್ಲಿ ಬುಧವಾರ ಬೆಳಿಗ್ಗೆ ಪೆಟ್ರೋಲ್ ಪ್ರತಿ ಲೀಟರ್‌ಗೆ 73.27 ರೂ. ಡೀಸೆಲ್ ಅನ್ನು ಲೀಟರ್‌ಗೆ 66.17 ರೂ.ಗೆ ಮಾರಾಟ ಮಾಡಲಾಗುತ್ತಿದೆ. 

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 75.72 ರೂ. ಮತ್ತು ಡೀಸೆಲ್ ಬೆಲೆ 68.40 ರೂ. ಆಗಿದೆ.

ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಗಳು ಕೆಳಕಂಡಂತಿದೆ

ನಗರಗಳು

ಪೆಟ್ರೋಲ್

(ರೂ./ಲೀ)

ಡೀಸೆಲ್

(ರೂ./ಲೀ)

ದೆಹಲಿ 73.27 67.17
ಕೊಲ್ಕತ್ತಾ 75.92 68.53
ಮುಂಬೈ 78.88 69.35
ಚೆನ್ನೈ 76.09 69.89
ಬೆಂಗಳೂರು 75.72 68.40
ಹೈದರಾಬಾದ್ 77.91 72.18
ತಿರುವನಂತಪುರಂ 76.62 71.17

ದೇಶಾದ್ಯಂತ ಎಲ್ಲಾ ರಾಜ್ಯಗಳ ಪೆಟ್ರೋಲ್-ಡೀಸೆಲ್ ಬೆಲೆ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ: 

https://www.iocl.com/TotalProductList.aspx

Trending News