10 ತಿಂಗಳಲ್ಲಿ ಪೆಟ್ರೋಲ್ ಅತ್ಯಂತ ದುಬಾರಿ, ಡೀಸೆಲ್ ದರವೂ ಹೆಚ್ಚಳ

ಸೌದಿ ಅರಾಮಾರ್ಕ್ ಸ್ಥಾವರದ ಮೇಲೆ ಡ್ರೋನ್ ದಾಳಿ ನಡೆದ ಸುಮಾರು 10 ದಿನಗಳ ನಂತರವೂ, ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಯ ಪ್ರವೃತ್ತಿ ಮುಂದುವರೆದಿದೆ. ಪ್ರಪಂಚದಾದ್ಯಂತ ತೈಲ ಪೂರೈಕೆ ಕುಸಿಯುತ್ತಿರುವ ಕಾರಣ, ಏಷ್ಯಾದ ಮಾರುಕಟ್ಟೆಗಳಲ್ಲಿ ತೈಲದ ದರವು ಹೆಚ್ಚು ಪರಿಣಾಮ ಬೀರುತ್ತಿದೆ.  

Last Updated : Sep 23, 2019, 08:37 AM IST
10 ತಿಂಗಳಲ್ಲಿ ಪೆಟ್ರೋಲ್ ಅತ್ಯಂತ ದುಬಾರಿ, ಡೀಸೆಲ್ ದರವೂ ಹೆಚ್ಚಳ title=

ನವದೆಹಲಿ: ಸೌದಿ ಅರಾಮಾರ್ಕ್ ಸ್ಥಾವರದ ಮೇಲೆ ಡ್ರೋನ್ ದಾಳಿ ನಡೆದ ಸುಮಾರು 10 ದಿನಗಳ ನಂತರವೂ, ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಯ ಪ್ರವೃತ್ತಿ ಮುಂದುವರೆದಿದೆ. ಪ್ರಪಂಚದಾದ್ಯಂತ ತೈಲ ಪೂರೈಕೆ ಕುಸಿಯುತ್ತಿರುವ ಕಾರಣ, ಏಷ್ಯಾದ ಮಾರುಕಟ್ಟೆಗಳಲ್ಲಿ ತೈಲದ ದರವು ಹೆಚ್ಚು ಪರಿಣಾಮ ಬೀರುತ್ತಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಸತತ ಏಳನೇ ದಿನವೂ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ತೋರಿಸಿದೆ. ಸೋಮವಾರ ಬೆಳಿಗ್ಗೆ ಪೆಟ್ರೋಲ್ ದರ ಲೀಟರ್‌ಗೆ 29 ಪೈಸೆ ಏರಿಕೆಯಾಗಿ 73.91 ರೂ. ತಲುಪಿದ್ದರೆ, ಡೀಸೆಲ್ ಲೀಟರ್‌ಗೆ 19 ಪೈಸೆ ಏರಿಕೆ ಕಂಡು 66.93 ರೂ.ಗೆ ತಲುಪಿದೆ.

ಏಳು ದಿನಗಳಲ್ಲಿ 1.90 ರೂಪಾಯಿ ಹೆಚ್ಚಳ:
ಕಳೆದ ಸುಮಾರು 10 ತಿಂಗಳಲ್ಲಿ ಇದು ಅತಿ ಹೆಚ್ಚು ಪೆಟ್ರೋಲ್ ದರವಾಗಿದೆ. ಈ ಮೊದಲು 27 ನವೆಂಬರ್ 2018 ರಂದು ದೆಹಲಿಯಲ್ಲಿ ಪೆಟ್ರೋಲ್ ಅನ್ನು 74.07 ರೂ. ಇತ್ತು. ಕಳೆದ ಏಳು ದಿನಗಳಲ್ಲಿ ಪೆಟ್ರೋಲ್ ದರ ಲೀಟರ್‌ಗೆ 1.90 ರೂ ಮತ್ತು ಡೀಸೆಲ್ ಲೀಟರ್‌ಗೆ 1.40 ರೂ. ಹೆಚ್ಚಳವಾಗಿದೆ. ಇದಕ್ಕೂ ಮುನ್ನ ಭಾನುವಾರ ಪೆಟ್ರೋಲ್ 27 ಪೈಸೆ ಮತ್ತು ಡೀಸೆಲ್ 21 ಪೈಸೆ ಏರಿಕೆಯಾಗಿದೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 76.44 ರೂ. ಮತ್ತು ಡೀಸೆಲ್ ಬೆಲೆ 69.21 ರೂ. ಆಗಿದೆ.

ಈ ದರವು ಇಂದು ಬೆಳಿಗ್ಗೆ 6 ಗಂಟೆಯಿಂದ ನಾಳೆ ಬೆಳಿಗ್ಗೆ 6 ಗಂಟೆಯವರೆಗೆ ಅನ್ವಯವಾಗಲಿದೆ.

ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಗಳು ಕೆಳಕಂಡಂತಿದೆ

ನಗರಗಳು

ಪೆಟ್ರೋಲ್ 

(ರೂ./ಲೀ)

ಡೀಸೆಲ್ 

(ರೂ./ಲೀ)

ದೆಹಲಿ 73.91 66.93
ಕೊಲ್ಕತ್ತಾ 76.60 69.35
ಮುಂಬೈ 79.57 70.22
ಚೆನ್ನೈ 76.83 70.76
ಬೆಂಗಳೂರು 76.44 69.21
ಹೈದರಾಬಾದ್ 78.57 72.96
ತಿರುವನಂತಪುರಂ 77.33 72.02

ದೇಶಾದ್ಯಂತ ಎಲ್ಲಾ ರಾಜ್ಯಗಳ ಪೆಟ್ರೋಲ್-ಡೀಸೆಲ್ ಬೆಲೆ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ: 

https://www.iocl.com/TotalProductList.aspx

Trending News