ಸತತ ಎಂಟನೇ ದಿನವೂ ಕಡಿಮೆಯಾಗದ ಪೆಟ್ರೋಲ್-ಡೀಸೆಲ್‌; ಇಂದಿನ ಬೆಲೆ ಎಷ್ಟಿದೆ?

ಸೌದಿ ಅರಾಮಾರ್ಕ್ ಸ್ಥಾವರದ ಮೇಲೆ ಡ್ರೋನ್ ದಾಳಿ ನಡೆದ ಸುಮಾರು 10 ದಿನಗಳ ನಂತರವೂ, ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಯ ಪ್ರವೃತ್ತಿ ಮುಂದುವರೆದಿದೆ. ಪ್ರಪಂಚದಾದ್ಯಂತ ತೈಲ ಪೂರೈಕೆ ಕುಸಿಯುತ್ತಿರುವ ಕಾರಣ, ಏಷ್ಯಾದ ಮಾರುಕಟ್ಟೆಗಳಲ್ಲಿ ತೈಲ ದರದ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ.

Last Updated : Sep 24, 2019, 08:33 AM IST
ಸತತ ಎಂಟನೇ ದಿನವೂ ಕಡಿಮೆಯಾಗದ ಪೆಟ್ರೋಲ್-ಡೀಸೆಲ್‌; ಇಂದಿನ ಬೆಲೆ ಎಷ್ಟಿದೆ? title=

ನವದೆಹಲಿ: ಸೌದಿ ಅರಾಮಾರ್ಕ್ ಸ್ಥಾವರದ ಮೇಲೆ ಡ್ರೋನ್ ದಾಳಿ ನಡೆದ ಸುಮಾರು 10 ದಿನಗಳ ನಂತರವೂ, ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಯ ಪ್ರವೃತ್ತಿ ಮುಂದುವರೆದಿದೆ. ಪ್ರಪಂಚದಾದ್ಯಂತ ತೈಲ ಪೂರೈಕೆ ಕುಸಿಯುತ್ತಿರುವ ಕಾರಣ, ಏಷ್ಯಾದ ಮಾರುಕಟ್ಟೆಗಳಲ್ಲಿ ತೈಲ ದರದ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಸತತ ಎಂಟನೇ ದಿನವೂ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ತೋರಿಸಿದೆ. ಮಂಗಳವಾರ ಬೆಳಿಗ್ಗೆ ಪೆಟ್ರೋಲ್ ದರ ಲೀಟರ್‌ಗೆ 22 ಪೈಸೆ ಏರಿಕೆಯಾಗಿದ್ದು ರಾಷ್ಟ್ರ ರಾಜಧಾನಿಯಲ್ಲಿ ಇದರ ಬೆಲೆ 74.13 ರೂ. ತಲುಪಿದ್ದರೆ, ಡೀಸೆಲ್ ಲೀಟರ್‌ಗೆ 14 ಪೈಸೆ ಏರಿಕೆ ಕಂಡು 67.07 ರೂ.ಗೆ ತಲುಪಿದೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 76.67 ರೂ. ಮತ್ತು ಡೀಸೆಲ್ ಬೆಲೆ 69.36 ರೂ. ಆಗಿದೆ.

ಈ ದರವು ಇಂದು ಬೆಳಿಗ್ಗೆ 6 ಗಂಟೆಯಿಂದ ನಾಳೆ ಬೆಳಿಗ್ಗೆ 6 ಗಂಟೆಯವರೆಗೆ ಅನ್ವಯವಾಗಲಿದೆ.

ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಗಳು ಕೆಳಕಂಡಂತಿದೆ

ನಗರಗಳು

ಪೆಟ್ರೋಲ್ 

(ರೂ./ಲೀ)

ಡೀಸೆಲ್ 

(ರೂ./ಲೀ)

ದೆಹಲಿ 74.13 67.07
ಕೊಲ್ಕತ್ತಾ 76.82 69.49
ಮುಂಬೈ 79.79 70.37
ಚೆನ್ನೈ 77.06 70.91
ಬೆಂಗಳೂರು 76.67 69.36
ಹೈದರಾಬಾದ್ 78.80 73.11
ತಿರುವನಂತಪುರಂ 77.42 72.04

ದೇಶಾದ್ಯಂತ ಎಲ್ಲಾ ರಾಜ್ಯಗಳ ಪೆಟ್ರೋಲ್-ಡೀಸೆಲ್ ಬೆಲೆ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ: 

https://www.iocl.com/TotalProductList.aspx
 

Trending News