ಸೂರತ್ ನಲ್ಲಿ ರಾರಾಜಿಸುತ್ತಿವೆ, ಅಹ್ಮದ್ ಪಟೇಲ್ ಬೆಂಬಲಿಸುವಂತೆ ಮುಸಲ್ಮಾನರಿಗೆ ಕರೆ ನೀಡಿರುವ ಭಿತ್ತಿಪತ್ರಗಳು

ಗುಜರಾತ್ ಮುಖ್ಯಮಂತ್ರಿಯಾಗಿ ಅಹ್ಮದ್ ಪಟೇಲ್ ಅವರನ್ನು ಆಯ್ಕೆ ಮಾಡಲು ಮುಸ್ಲಿಮರು ಸಹಕರಿಸುವಂತೆ ಕೋರಿರುವ ಕಾಂಗ್ರೇಸ್ ಭಿತ್ತಿಪತ್ರ.

Updated: Dec 7, 2017 , 04:14 PM IST
ಸೂರತ್ ನಲ್ಲಿ ರಾರಾಜಿಸುತ್ತಿವೆ, ಅಹ್ಮದ್ ಪಟೇಲ್ ಬೆಂಬಲಿಸುವಂತೆ ಮುಸಲ್ಮಾನರಿಗೆ ಕರೆ ನೀಡಿರುವ ಭಿತ್ತಿಪತ್ರಗಳು
ಪಿಕ್: ANI

ಸೂರತ್: ಗುಜರಾತ್ ಮುಖ್ಯಮಂತ್ರಿಯಾಗಿ ಅಹ್ಮದ್ ಪಟೇಲ್ ಅವರನ್ನು ಆಯ್ಕೆ ಮಾಡಲು ಮುಸ್ಲಿಮರು ಸಹಕರಿಸಿ ಮತ್ತು ಕಾಂಗ್ರೆಸ್ಗೆ ಬೆಂಬಲ ನೀಡುವಂತೆ ಸೂರತ್ನ ಕೆಲವು ಪ್ರದೇಶಗಳಲ್ಲಿ ಪೋಸ್ಟರ್ಗಳನ್ನು ಇರಿಸಲಾಗಿದೆ.

ನಾನು ಮುಖ್ಯಮಂತ್ರಿ ಅಭ್ಯರ್ಥಿಯಲ್ಲ ಮತ್ತು ಭವಿಷ್ಯದಲ್ಲೂ ಅದು ಸಾಧ್ಯವಿಲ್ಲ ಎಂದು ಅಹ್ಮದ್ ಪಟೇಲ್ ತಮ್ಮ ಸ್ಥಾನವನ್ನು ಸ್ಪಷ್ಟೀಕರಿಸಿದ್ದಾರೆ. "ಇದು ಬಿಜೆಪಿಯಿಂದ ತಪ್ಪಾಗಿ ನಡೆದಿರುವ ಒಂದು ಪ್ರಚಾರ ಅಭಿಯಾನವಾಗಿದ್ದು, ಅವರು ಕಳೆದುಕೊಳ್ಳಲಿದ್ದಾರೆ, ಹಾಗಾಗಿ ಈ ರೀತಿ ಮಾಡುತ್ತಿದ್ದಾರೆ ಎಂದು ಪಟೇಲ್ ಹೇಳಿದ್ದಾರೆ.

ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ರಾಜ್ಯದಲ್ಲಿ ಚುನಾವಣಾ ಪ್ರಚಾರವನ್ನು ನಡೆಸುತ್ತಿದ್ದಾರೆ. ಆದಾಗ್ಯೂ, ಚುನಾವಣೆಯಲ್ಲಿ ಜಯಗಳಿಸಿದರೆ, ರಾಜ್ಯದಲ್ಲಿ ಕಾಂಗ್ರೆಸ್ಗೆ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬ ಬಗ್ಗೆ ಯಾವುದೇ ಮಾತುಗಳಾಡಿಲ್ಲ. 

ಪ್ರತಿಪಕ್ಷ ನಾಯಕ ಶಂಕರಶಿನ್ ವಘೇಲಾ ಮತ್ತು ಪ್ರದೇಶ ಕಾಂಗ್ರೆಸ್ ಸಮಿತಿ (ಪಿಸಿಸಿ) ಮುಖ್ಯಸ್ಥ ಭರತ್ಸಿಂಹ್ ಸೋಲಂಕಿ, ರಾಷ್ಟ್ರೀಯ ವಕ್ತಾರ ಶಕ್ತಿಸಿನಿ ಗೊಹಿಲ್, ಅರ್ಜುನ್ ಮೊಧ್ವಾಡಿಯಾ ಮತ್ತು ಸಿದ್ದಾರ್ಥ್ ಪಟೇಲ್ ಮುಖ್ಯಮಂತ್ರಿ ಗಾದೆಯ ಓಟದಲ್ಲಿ ಮುಂಚೂಣಿಯಲ್ಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ಸ್ವಂತ ರಾಜ್ಯದಲ್ಲಿ ಬಿಜೆಪಿಯನ್ನು ಸೋಲಿಸುವಲ್ಲಿ ಅವರಿಗೆ ಪ್ರಬಲ ಅವಕಾಶವಿದೆ ಎಂದು ಕಾಂಗ್ರೆಸ್ನಲ್ಲಿ ಹಲವರು ಅಭಿಪ್ರಾಯ ಪಡುತ್ತಾರೆ.

1998 ರಿಂದ ಗುಜರಾತ್ನಲ್ಲಿ ಬಿಜೆಪಿ ಅಧಿಕಾರದಲ್ಲಿದೆ.