Trending Video : ಜೀವಂತ ವಿಷಕಾರಿ ಹಾವನ್ನು ನೂಡಲ್ಸ್‌ನಂತೆ ನುಂಗಿದ ಬಾತುಕೋಳಿ!

Duck eating snake video : ಸಾಮಾಜಿಕ ಜಾಲತಾಣಗಳಲ್ಲಿ ಹಲವು ಹಾವುಗಳ ವಿಡಿಯೋಗಳು ಹರಿದಾಡುತ್ತವೆ. ಜನರು ಸಹ ಹಾವಿನ ವಿಡಿಯೋಗಳನ್ನು ಅತ್ಯಂತ ಇಷ್ಟಪಟ್ಟು ನೋಡುತ್ತಾರೆ. ಇದೀಗ ಇಂತಹದ್ದೇ ಒಂದು ವಿಡಿಯೋ ಎಲ್ಲೆಡೆ ವೈರಲ್‌ ಆಗುತ್ತಿದೆ. 

Written by - Chetana Devarmani | Last Updated : Dec 24, 2022, 12:22 PM IST
  • ಜೀವಂತ ವಿಷಕಾರಿ ಹಾವನ್ನು ನುಂಗಿದ ಬಾತುಕೋಳಿ
  • ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್‌
Trending Video : ಜೀವಂತ ವಿಷಕಾರಿ ಹಾವನ್ನು ನೂಡಲ್ಸ್‌ನಂತೆ  ನುಂಗಿದ ಬಾತುಕೋಳಿ!  title=
ಬಾತುಕೋಳಿ

Duck eating snake video : ಸಾಮಾಜಿಕ ಜಾಲತಾಣಗಳಲ್ಲಿ ಹಲವು ಹಾವುಗಳ ವಿಡಿಯೋಗಳು ಹರಿದಾಡುತ್ತವೆ. ಜನರು ಸಹ ಹಾವಿನ ವಿಡಿಯೋಗಳನ್ನು ಅತ್ಯಂತ ಇಷ್ಟಪಟ್ಟು ನೋಡುತ್ತಾರೆ. ಇದೀಗ ಇಂತಹದ್ದೇ ಒಂದು ವಿಡಿಯೋ ಎಲ್ಲೆಡೆ ವೈರಲ್‌ ಆಗುತ್ತಿದೆ. ಬಾತುಕೋಳಿಯು ಜೀವಂತ ಹಾವನ್ನು ನೂಡಲ್ಸ್‌ನಂತೆ ನುಂಗುತ್ತಿರುವ ವಿಡಿಯೋ ವೈರಲ್‌ ಆಗುತ್ತಿದೆ.

ವಾಸ್ತವವಾಗಿ ಈ ವಿಡಿಯೋವನ್ನು Instagram ನಲ್ಲಿ ಒಬ್ಬ ಬಳಕೆದಾರರು ಹಂಚಿಕೊಂಡಿದ್ದಾರೆ. ಕೊಳದ ದಡದಲ್ಲಿ ಬಾತುಕೋಳಿ ಕುಳಿತಿರುವುದು ಕಂಡುಬರುತ್ತದೆ. ಈ ಕೊಳದ ಸುತ್ತಲೂ ಹಸಿರು ಹುಲ್ಲುಗಾವಲು ಇರುವುದನ್ನು ನೋಡಬಹುದು. ಅದರ ನಡುವೆ ಬಿಳಿ ಬಾತುಕೋಳಿ ಕುಳಿತಿದೆ. ಆಗ ಇದ್ದಕ್ಕಿದ್ದಂತೆ ತನ್ನ ಕೊಕ್ಕಿನಲ್ಲಿ ವಿಷಪೂರಿತ ಹಾವನ್ನು ಹಿಡಿದುಕೊಳ್ಳುತ್ತದೆ.

ಇದನ್ನೂ ಓದಿ :  Viral Video: ಮೆಟ್ರೋದಲ್ಲಿ ನಿದ್ದೆಗೆ ಜಾರಿದ ಯುವಕ! ಪಕ್ಕದಲ್ಲಿದ್ದ ಹುಡುಗಿ ಮಾಡಿದ್ದೇನು ನೋಡಿ

ಬಾತುಕೋಳಿಯು ಈ ಹಾವನ್ನು ಬಾಲದ ಕಡೆಯಿಂದ ತನ್ನ ಕೊಕ್ಕಿನಲ್ಲಿ ಹಿಡಿದು ತಿನ್ನಲು ಪ್ರಾರಂಭಿಸಿತು. ಇಡೀ ಹಾವು ತನ್ನ ಕೊಕ್ಕಿನಲ್ಲಿ ಸೇರಿಕೊಳ್ಳುವವರೆಗೂ ಅದನ್ನು ನುಂಗುತ್ತಲೇ ಇತ್ತು. ಆಶ್ಚರ್ಯವೆಂದರೆ ಇಡೀ ಹಾವನ್ನು ಒಂದೇ ಸಮನೆ ಕೊಕ್ಕಿನಲ್ಲಿ ತುಂಬಿಕೊಂಡಿತು. 

 

 

ಈ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಜನರು ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಬಾತುಕೋಳಿ ಅದನ್ನು ತಿಂದ ನಂತರ ಬದುಕಲು ಸಾಧ್ಯವಾಗುತ್ತದೆಯೇ ಎಂದು ಬಳಕೆದಾರರು ಪ್ರಶ್ನಿಸುತ್ತಿದ್ದಾರೆ. ಸದ್ಯ ಹಾವನ್ನು ನುಂಗುತ್ತಿರುವ ಈ ಬಾತುಕೋಳಿಯ ವಿಡಿಯೋ ಎಲ್ಲೆಡೆ ವೈರಲ್‌ ಆಗುತ್ತಿದೆ. 

ಇದನ್ನೂ ಓದಿ :  Viral Video : ಜಸ್ಟ್‌ ಮಿಸ್‌! ಹುಲಿ ಬಾಯಿಗೆ ಸಿಕ್ಕವರು ಬಚಾವ್‌ ಆಗಿದ್ದು ಹೇಗೆ ನೋಡಿ..

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News