ಆಧಾರ್ ಕಾರ್ಡ್ ಇಲ್ಲದ್ದಕ್ಕೆ ಗರ್ಭಿಣಿ ಮಹಿಳೆಗೆ ಚಿಕಿತ್ಸೆಯನ್ನೇ ನಿರಾಕರಿಸಿದ ವೈದ್ಯರು!

    

Last Updated : Jan 30, 2018, 04:31 PM IST
ಆಧಾರ್ ಕಾರ್ಡ್ ಇಲ್ಲದ್ದಕ್ಕೆ ಗರ್ಭಿಣಿ ಮಹಿಳೆಗೆ ಚಿಕಿತ್ಸೆಯನ್ನೇ ನಿರಾಕರಿಸಿದ ವೈದ್ಯರು! title=
Photo Courtesy:ANI

ಜೌನ್ಪುರ್:  ಸೋಮವಾರದಂದು ಮಧ್ಯಪ್ರದೇಶದ ಜೌನ್ಪುರ್ ಜಿಲ್ಲೆಯಲ್ಲಿ ಗರ್ಭಿಣಿ ಮಹಿಳೆಗೆ ಆಧಾರ್ ಕಾರ್ಡ್ ಇಲ್ಲ ಎಂದುದ್ದಕ್ಕೆ ವೈದ್ಯರು ಚಿಕಿತ್ಸೆಯನ್ನೇ ನಿರಾಕರಿಸಿದ ಘಟನೆ ನಡೆದಿದೆ.ಇದರಿಂದಾಗಿ ಅನಿವಾರ್ಯವಾಗಿ ಆ ಮಹಿಳೆ ಅಸ್ಪತ್ರೆಯ ಗೆಟ್ ಬಳಿಯಲ್ಲಿಯೇ ಹೇರಿಗೆ ಮಾಡಿದ  ಅಮಾನವೀಯ ನಡೆದಿದೆ.

ಈ ಆಸ್ಪತ್ರೆಯ ಕ್ರಮದ ಬಗ್ಗೆ ಪ್ರತಿಕ್ರಿಯಿಸಿರುವ ಆ ಮಹಿಳೆಯ ಪತಿ "ನಾವು ಆಸ್ಪತ್ರೆಗೆ ಹೋದಾಗ  ಅಲ್ಲಿನ ಸಿಬ್ಬಂದಿ  ನಮ್ಮಲ್ಲಿ  ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಗಳು ಇಲ್ಲವೆಂದು ನಮ್ಮನ್ನು ವಾಪಾಸ್ ಕಳುಹಿಸಿದ್ದಾರೆ. ಇದೆ ಸಂದರ್ಭದಲ್ಲಿ ಆಸ್ಪತ್ರೆಯಿಂದ ಹೊರ ಬರುವಷ್ಟರಲ್ಲಿ ಅವಳು ಹೊರಗಡೆ ಇರುವ ಗೇಟ್ ಭಾಗದಲ್ಲಿ ಮಗುವಿಗೆ ಜನ್ಮವಿತ್ತಿದ್ದಾಳೆ. ಆ ಮಹಿಳೆಯ ಪತಿ ತಿಳಿಸಿದ್ದಾರೆ.

ಆದರೆ ಈ ಆರೋಪವನ್ನು  ವೈದ್ಯಕೀಯ ಸೂಪರಿಂಟೆಂಡೆಂಟ್ ತಳ್ಳಿಹಾಕಿದ್ದಾರೆ .ಇದಕ್ಕೆ ಪ್ರತಿಕ್ರಯಿಸಿರುವ ಅವರು "ವೈದ್ಯರು ಆ ಮಹಿಳೆಯನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲು ಸೂಚನೆ ನೀಡಿದ್ದಾರೆ, ಇದಕ್ಕೆ ಆ ಮಹಿಳೆಯು ತನಗೆ ಗೊತ್ತಿರುವ ಯಾರಾದರೋಬ್ಬರ ಜೊತೆ ಹೋಗುವೆ ಎಂದು ತಿಳಿಸಿದ್ದಾಳೆ. ಈ ಸಂದರ್ಭದಲ್ಲಿ ಹೆರಿಗೆ ನೋವು ಅನುಭವಿಸಿದ ಆಕೆ ಆಸ್ಪತ್ರೆಯ ಗೇಟ್ ತಲುಪುವಷ್ಟರಲ್ಲಿ  ಮಗುವಿಗೆ ಜನ್ಮ ನೀಡಿದ್ದಾಳೆ. ಈಗ ಆ ಮಗು  ಆರೋಗ್ಯವಾಗಿದೆ ಎಂದು ಅವರು ಸ್ಪಷ್ಟೀಕರಣ ನೀಡಿದ್ದಾರೆ.

Trending News