ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಮಾನಾಥ್ ಕೋವಿಂದ್ ದೆಹಲಿಯ ಐತಿಹಾಸಿಕ ಲವ ಕುಶ್ ರಾಮ್ಲೀಲಾ ಮೈದಾನವನ್ನು ತಲುಪಿದ್ದು, ದಸರಾ ಪ್ರಯುಕ್ತ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಕೇಂದ್ರ ಸಚಿವ ಹರ್ಷವರ್ಧನ್, ದೆಹಲಿಯ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ರಾಮ್ಲೀಲಾ ಮೈದಾನದಲ್ಲಿ ಆಗಮಿಸಿ ಬಳಿಕ ಪ್ರಧಾನಿ ಮೋದಿ ಮತ್ತು ರಾಷ್ಟ್ರಪತಿಗಳು ರಾಮ ಸೇರಿದಂತೆ ಇತರ ಪಾತ್ರದಾರಿಗಳನ್ನು ಭೇಟಿಯಾದರು.
President Ram Nath Kovind and Prime Minister Narendra Modi take part in #Dusshera celebrations at Delhi's Lal Qila maidan. pic.twitter.com/HAOPh8GCIg
— ANI (@ANI) October 19, 2018
ದಸರಾ ಶುಭಾಷಯ ಕೋರುತ್ತಾ ಅಲ್ಲಿ ನೆರೆದಿದ್ದವರನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ರಮಾನಾಥ್ ಕೋವಿಂದ್ "ನಾವು ರಾಮನ ಜೀವನದಿಂದ ಸ್ಫೂರ್ತಿ ಪಡೆದುಕೊಂಡು ಹೋಗಬೇಕು" ಎಂದರು. ಭಗವಾನ್ ರಾಮ ಜನಸಾಮಾನ್ಯರ ಹಾಗೂ ಪರಿಸರದ ಸಹಾಯದಿಂದ ರಾವಣನ ವಿರುದ್ಧ ಜಯಸಾಧಿಸಿದರು. ನಾವು ನಮ್ಮ ಒಳಗೆ ಹಾಗೋ ಸುತ್ತಲೂ ರಾವಣನ ರೂಪದಲ್ಲಿರುವ ಎಲ್ಲಾ ದುಷ್ಟ ಶಕ್ತಿಯನ್ನು ನಾಶಪಡಿಸಬೇಕು. ನಾವು ಯಾರನ್ನೂ ನೋಯಿಸದೆ ನಮ್ಮ ಹಬ್ಬವನ್ನು ಆಚರಿಸೋಣ ಎಂದರು.
President Ram Nath Kovind and Prime Minister Narendra Modi at Luv-Kush Ramlila, at Delhi's Lal Qila Maidan. pic.twitter.com/ybxRekeLBi
— ANI (@ANI) October 19, 2018
ನಂತರ ಪ್ರಧಾನಿ ನರೇಂದ್ರ ಮೋದಿ ಲಾಲ್ ಕಿಲಾ ಮೈದಾನದಲ್ಲಿ ಲವ್-ಕುಶ್ ರಾಮ್ ಲೀಲಾದಲ್ಲಿ ಬಾಣ ಬಿಟ್ಟು ರಾವಣನ ಪ್ರತಿರೂಪವನ್ನು ಸುಡುವ ಮೂಲಕಕಾರ್ಯಕ್ರಮಕ್ಕೆ ಚಾಲನೆ ನೀಡಿದರು.