ಇದು ಒಂದೇ ಒಂದು ಕಂಬಗಳಿಲ್ಲದ ಸೇತುವೆ: ಈ ಸೂಪರ್ ಸ್ಟ್ರಾಂಗ್ ಬ್ರಿಡ್ಜ್ ರಚನೆಯಾಗುತ್ತಿರೋದು ದೇಶದಲ್ಲೇ ಮೊದಲು!

Sudarshan Bridge: ಸುದರ್ಶನ್ ಸೇತುವೆ 2.32 ಕಿಲೋಮೀಟರ್ ಉದ್ದವಿದೆ. ಇದು ಕೇಬಲ್ ಸೇತುವೆ. ದೇಶದಲ್ಲೇ ಅತಿ ಉದ್ದದ ಸೇತುವೆಯಾಗಿದ್ದು, ಕಂಬಗಳಿಲ್ಲದೆ ಇದು ನಿಲ್ಲುತ್ತದೆ ಎಂಬ ಪ್ರಶ್ನೆಯೂ ಜನರ ಮನಸ್ಸಿನಲ್ಲಿ ಮೂಡಿದೆ.

Written by - Bhavishya Shetty | Last Updated : Feb 25, 2024, 01:26 PM IST
    • ಸುದರ್ಶನ್ ಸೇತುವೆ 2.32 ಕಿಲೋಮೀಟರ್ ಉದ್ದವಿದೆ
    • ಓಖಾದಿಂದ ಬೆಟ್ ದ್ವಾರಕಾಕ್ಕೆ ಪ್ರಯಾಣಿಸುವ ಭಕ್ತರಿಗೆ ಅನುಕೂಲವಾಗಲಿದೆ
    • ಬೆಳಗ್ಗೆ ದ್ವಾರಕಾದಲ್ಲಿ ಸುದರ್ಶನ್ ಸೇತುವೆಯನ್ನು ಉದ್ಘಾಟಿಸಿದ ಪ್ರಧಾನಿ ಮೋದಿ
ಇದು ಒಂದೇ ಒಂದು ಕಂಬಗಳಿಲ್ಲದ ಸೇತುವೆ: ಈ ಸೂಪರ್ ಸ್ಟ್ರಾಂಗ್ ಬ್ರಿಡ್ಜ್ ರಚನೆಯಾಗುತ್ತಿರೋದು ದೇಶದಲ್ಲೇ ಮೊದಲು! title=
Sudarshan Bridge

Sudarshan Bridge: ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ಜನತೆಗೆ ಸುದರ್ಶನ ಸೇತುವೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಇಂದು ಬೆಳಗ್ಗೆ ದ್ವಾರಕಾದಲ್ಲಿ ಸುದರ್ಶನ್ ಸೇತುವೆಯನ್ನು ಪ್ರಧಾನಿ ಮೋದಿ ಉದ್ಘಾಟಿಸಿದ್ದು,  ಇದರಿಂದ ಓಖಾದಿಂದ ಬೆಟ್ ದ್ವಾರಕಾಕ್ಕೆ ಪ್ರಯಾಣಿಸುವ ಭಕ್ತರಿಗೆ ಅನುಕೂಲವಾಗಲಿದೆ.

ಇದನ್ನೂ ಓದಿ: Urvashi Rautela: ಬರ್ತಡೇಯಂದು 24 ಕ್ಯಾರೆಟ್‌ ಗೋಲ್ಡ್‌ ಕೇಕ್‌ ಕಟ್‌ ಮಾಡಿದ ಐರಾವತ ಚೆಲುವೆ!

ಸುದರ್ಶನ್ ಸೇತುವೆ 2.32 ಕಿಲೋಮೀಟರ್ ಉದ್ದವಿದೆ. ಇದು ಕೇಬಲ್ ಸೇತುವೆ. ದೇಶದಲ್ಲೇ ಅತಿ ಉದ್ದದ ಸೇತುವೆಯಾಗಿದ್ದು, ಕಂಬಗಳಿಲ್ಲದೆ ಇದು ನಿಲ್ಲುತ್ತದೆ ಎಂಬ ಪ್ರಶ್ನೆಯೂ ಜನರ ಮನಸ್ಸಿನಲ್ಲಿ ಮೂಡಿದೆ.

2017ರಲ್ಲಿ ಸುದರ್ಶನ ಸೇತುವೆಯ ಶಂಕುಸ್ಥಾಪನೆ ನಡೆದಿತ್ತು. ಈ ಸೇತುವೆ ನಿರ್ಮಾಣಕ್ಕೆ 978 ಕೋಟಿ ರೂ.ವೆಚ್ಚವಾಗಿದ್ದು, ಇದರ ಉದ್ದ 2.3 ಕಿಲೋಮೀಟರ್ ಇದೆ. ಸುದರ್ಶನ್ ಸೇತುವೆಯ ಮೂಲಕ ಓಖಾ ಮತ್ತು ಬೆಟ್ ದ್ವಾರಕಾ ನಡುವೆ ಜನರು ಪ್ರಯಾಣಿಸಲು ಸಾಧ್ಯವಾಗುತ್ತದೆ.

ಇದಲ್ಲದೇ ಜಲಸಾರಿಗೆಯ ಮೇಲಿನ ಅವಲಂಬನೆಯೂ ಕೊನೆಗೊಳ್ಳುತ್ತದೆ. ಸುದರ್ಶನ ಸೇತುವೆಯ ವಿಶೇಷತೆ ಎಂದರೆ ಇದು ದೇಶದಲ್ಲೇ ಅತಿ ಉದ್ದದ ಕೇಬಲ್ ಸೇತುವೆಯಾಗಿದ್ದು, ಶ್ರೀಮದ್ ಭಗವದ್ಗೀತೆಯ ಶ್ಲೋಕಗಳನ್ನು ಸುದರ್ಶನ ಸೇತುವೆಯ ಮೇಲೆ ಬರೆಯಲಾಗಿದೆ. ಅದರ ಮೇಲೆ ಶ್ರೀ ಕೃಷ್ಣನ ಚಿತ್ರಗಳನ್ನು ಸಹ ಕೆತ್ತಲಾಗಿದೆ.

ಮಾಹಿತಿಯ ಪ್ರಕಾರ, ವಿಶ್ವದ ಮೊದಲ ಕೇಬಲ್ ಸೇತುವೆಯನ್ನು 1955 ರಲ್ಲಿ ಸ್ವೀಡನ್‌’ನ ಸ್ಟ್ರಾಮ್‌ಸಂಡ್‌’ನಲ್ಲಿ ನಿರ್ಮಿಸಲಾಯಿತು. ಈ ಸೇತುವೆಯನ್ನು ಇಬ್ಬರು ಜರ್ಮನ್ ವಿನ್ಯಾಸಕರಾದ ಡಿಶಿಂಗರ್ ಮತ್ತು ಎಫ್. ಲಿಯೊನ್ಹಾರ್ಡ್ ನಿರ್ಮಿಸಿದ್ದಾರೆ. ಈ ಸೇತುವೆ 183 ಮೀಟರ್ ಉದ್ದವಿದೆ. ಇದಾದ ಬಳಿಕ ಎರಡನೇ ಕೇಬಲ್ ಸೇತುವೆಯನ್ನು ಜರ್ಮನಿಯಲ್ಲಿ 1957 ರಲ್ಲಿ ನಿರ್ಮಿಸಲಾಗಿದ್ದು, ಇದರ ಉದ್ದ 260 ಮೀಟರ್.

ಇದನ್ನೂ ಓದಿ: ಇನ್ನು 2 ವರ್ಷಗಳಲ್ಲಿ ಈ 5 ನಟಿಯರು ಬಾಕ್ಸ್ ಆಫೀಸ್ ನ್ನು ಆಳಲಿದ್ದಾರೆ!!

ಕೇಬಲ್ ಸೇತುವೆಯ ಮೊದಲ ರೇಖಾಚಿತ್ರವು 1595 ರಲ್ಲಿ ಪ್ರಕಟವಾದ ಮಚಿನೇ ನೋವೆ ಪುಸ್ತಕದಲ್ಲಿ ಕಂಡುಬರುತ್ತದೆ. ಆದರೆ ಇಂಜಿನಿಯರ್‌’ಗಳು ಇದನ್ನು ಚಾಲ್ತಿಗೆ ತರುವಲ್ಲಿ ಹಲವಾರು ಶತಮಾನಗಳವರೆಗೆ ಯಶಸ್ವಿಯಾಗಲಿಲ್ಲ. ಆದರೆ, 1945 ರಲ್ಲಿ ಎರಡನೆಯ ಮಹಾಯುದ್ಧದ ಅಂತ್ಯದ ನಂತರ, ಈ ಸೇತುವೆಯ ಅಗತ್ಯತೆ ಹೆಚ್ಚಾಗಿ ಕಂಡುಬಂತು. ಏಕೆಂದರೆ ಕೇಬಲ್ ಸೇತುವೆಯು ತುಲನಾತ್ಮಕವಾಗಿ ಕಡಿಮೆ ವೆಚ್ಚದ ಕೆಲಸವಾಗಿದೆ. ಜೊತೆಗೆ ಇದನ್ನು ತಯಾರಿಸಲು ಕಡಿಮೆ ಸಮಯ ತೆಗೆದುಕೊಳ್ಳುತ್ತದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News