PM Modi Net Worth: ಮನೆ ಇಲ್ಲ, ಕಾರು ಇಲ್ಲ... ಪ್ರಧಾನಿ ಮೋದಿ ಆಸ್ತಿ ಮೌಲ್ಯ ಎಷ್ಟು? 2019 - 2024 ಹೋಲಿಕೆ!

PM Modi Net Worth: ಪ್ರಧಾನಿ ನರೇಂದ್ರ ಮೋದಿ ಅವರು ಮೇ 14, 2024 ರಂದು ವಾರಣಾಸಿಯ ಡಿಎಂ ಕಚೇರಿಯಲ್ಲಿ ಲೋಕಸಭೆ ಚುನಾವಣೆಗೆ ತಮ್ಮ ನಾಮಪತ್ರವನ್ನು ಸಲ್ಲಿಸಿದರು. 

Written by - Chetana Devarmani | Last Updated : May 15, 2024, 08:32 AM IST
  • ಲೋಕಸಭೆ ಚುನಾವಣೆ 2024
  • 2019 - 2024 ಮೋದಿ ಆಸ್ತಿ ಹೋಲಿಕೆ
  • ಪ್ರಧಾನಿ ಮೋದಿ ಆಸ್ತಿ ಮೌಲ್ಯ ಎಷ್ಟು?
PM Modi Net Worth: ಮನೆ ಇಲ್ಲ, ಕಾರು ಇಲ್ಲ... ಪ್ರಧಾನಿ ಮೋದಿ ಆಸ್ತಿ ಮೌಲ್ಯ ಎಷ್ಟು? 2019 - 2024 ಹೋಲಿಕೆ! title=

Narendra Modi election affidavit: ಉತ್ತರ ಪ್ರದೇಶದ ವಾರಣಾಸಿಯಲ್ಲಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಸತತ ಮೂರನೇ ಅವಧಿಗೆ ಕಣಕ್ಕಿಳಿದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಮೇ 14, 2024 ರಂದು ವಾರಣಾಸಿಯ ಡಿಎಂ ಕಚೇರಿಯಲ್ಲಿ ಲೋಕಸಭೆ ಚುನಾವಣೆಗೆ ತಮ್ಮ ನಾಮಪತ್ರವನ್ನು ಸಲ್ಲಿಸಿದರು. 

ಲೋಕಸಭೆ ಚುನಾವಣೆ 2024 ದೇಶಾದ್ಯಂತ 7 ಹಂತಗಳಲ್ಲಿ ನಡೆಯುತ್ತಿದೆ. ಇಲ್ಲಿಯವರೆಗೆ 4 ಹಂತದ ಮತದಾನ ಪೂರ್ಣಗೊಂಡಿದೆ. ಉಳಿದ 3 ಹಂತದ ಮತದಾನ ಮೇ 20, ಮೇ 26 ಮತ್ತು ಜೂನ್ 1 ರಂದು ನಡೆಯಲಿದೆ. ಜೂನ್ 4 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಸತತ ಮೂರನೇ ಅವಧಿಗೆ ಸರ್ಕಾರ ರಚಿಸಲು ಬಿಜೆಪಿ ತಂತ್ರ ಹೆಣೆದಿದೆ. ಇತ್ತ ಬಿಜೆಪಿಯನ್ನು ಕಿತ್ತೊಗೆದು ಅಧಿಕಾರ ಹಿಡಿಯಲು ಕಾಂಗ್ರೆಸ್ ನಿರಂತರ ಪ್ರಯತ್ನದಲ್ಲಿದೆ.

ಎರಡೂ ಪಕ್ಷಗಳು ತಮ್ಮ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿ ವಿವಿಧ ರಾಜ್ಯಗಳಲ್ಲಿ ಅನೇಕ ಕಲ್ಯಾಣ ಭರವಸೆಗಳೊಂದಿಗೆ ಚುನಾವಣೆಗೆ ಇಳಿದಿವೆ. ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ. ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳ INDIA ಮೈತ್ರಿಕೂಟವು ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸದೆ ಚುನಾವಣೆಯನ್ನು ಎದುರಿಸಿದೆ.

ಇದನ್ನೂ ಓದಿ: Lok Sabha Election: ವಾರಣಾಸಿಯಲ್ಲಿಂದು ಪ್ರಧಾನಿ ನರೇಂದ್ರ ಮೋದಿ ನಾಮಪತ್ರ ಸಲ್ಲಿಕೆ 

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ಬಾರಿಯೂ ಎರಡು ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದಾರೆ. ಕೇರಳದ ವಯನಾಡ್ ಕ್ಷೇತ್ರದಲ್ಲಿ ಮತ್ತೆ ಸ್ಪರ್ಧಿಸಿರುವ ರಾಹುಲ್ ಗಾಂಧಿ, ಉತ್ತರ ಪ್ರದೇಶದ ರಾಯ್ಬರೇಲಿ ಕ್ಷೇತ್ರದಲ್ಲಿಯೂ ಸ್ಪರ್ಧಿಸಿದ್ದಾರೆ. ಮತ್ತೊಂದೆಡೆ, ಉತ್ತರ ಪ್ರದೇಶದ ವಾರಣಾಸಿಯಲ್ಲಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಸತತ ಮೂರನೇ ಅವಧಿಗೆ ಕಣಕ್ಕಿಳಿದಿದ್ದಾರೆ.

ಪ್ರಧಾನಿ ಮೋದಿ 2014 ಮತ್ತು 2019ರಲ್ಲಿ ಈ ಕ್ಷೇತ್ರದಿಂದಲೇ ಸ್ಪರ್ಧಿಸಿ ಗೆದ್ದಿದ್ದರು. ಪ್ರಧಾನಿ ಮೋದಿ ಸತತ ಮೂರನೇ ಬಾರಿಗೆ ವಾರಣಾಸಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅದರಂತೆ ಮೇ 14 ರಂದು ವಾರಣಾಸಿಯಲ್ಲಿ ನಾಮಪತ್ರ ಸಲ್ಲಿಸಿದರು. ಪ್ರಧಾನಿ ಮೋದಿ ತಮ್ಮ ನಾಮಪತ್ರದಲ್ಲಿ ಕಾರು ಇಲ್ಲ, ಮನೆ ಇಲ್ಲ ಎಂದು ನಮೂದಿಸಿದ್ದಾರೆ. ಅಲ್ಲದೇ 2019 ರಿಂದ 2024 ರ ವರೆಗೆ ಕಳೆದ 5 ವರ್ಷಗಳಲ್ಲಿ ಅವರ ಆಸ್ತಿ ಮೌಲ್ಯಗಳಲ್ಲಿನ ಬದಲಾವಣೆಗಳನ್ನು ಕಾಣಬಹುದು. ಪ್ರಧಾನಿ ನರೇಂದ್ರ ಮೋದಿ ಅವರ ಚುನಾವಣಾ ಅಫಿಡವಿಟ್ ಪ್ರಕಾರ ₹3 ಕೋಟಿಗಿಂತ ಹೆಚ್ಚು ಆಸ್ತಿ ಹೊಂದಿದ್ದಾರೆ, ಅದರಲ್ಲಿ ಹೆಚ್ಚಿನವು ಬ್ಯಾಂಕ್ FD ಗಳಲ್ಲಿವೆ. 

ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಪ್ರದರ್ಶಿಸಲಾದ ಅಫಿಡವಿಟ್ ಪ್ರಕಾರ, ಪ್ರಧಾನಿ ಮೋದಿ ಚರಾಸ್ತಿ ಮೌಲ್ಯ ₹3,02,06,889. ಇವುಗಳಲ್ಲಿ ಹೆಚ್ಚಿನವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ FD ರೂಪದಲ್ಲಿದ್ದು, ಒಟ್ಟು ₹2.85 ಕೋಟಿಗೂ ಹೆಚ್ಚು.

ಇದನ್ನೂ ಓದಿ:  ಮುಂಬೈನಲ್ಲಿ ವರುಣಾರ್ಭಟ... ಬಿರುಗಾಳಿ ಸಹಿತ ಮಳೆಯಿಂದ ವಿಮಾನ ಸಂಚಾರ ಸ್ಥಗಿತ ಮೆಟ್ರೊ, ಸ್ಥಳೀಯ ರೈಲು ಕೂಡ ಬಂದ್!

ಇತರ ಆಸ್ತಿಗಳಲ್ಲಿ ₹2.67 ಲಕ್ಷ ಮೌಲ್ಯದ 45 ಗ್ರಾಂ ತೂಕದ ನಾಲ್ಕು ಚಿನ್ನದ ಉಂಗುರಗಳು, ಒಟ್ಟು ₹52,920 ನಗದು, ₹ 9.12 ಲಕ್ಷ ಮೌಲ್ಯದ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳು ಮತ್ತು ಕಳೆದ ಹಣಕಾಸು ವರ್ಷಕ್ಕೆ ₹ 3.33 ಲಕ್ಷ ಆದಾಯ ತೆರಿಗೆ ವಿನಾಯಿತಿ ಸೇರಿವೆ.

ಸ್ಥಿರಾಸ್ತಿಗಳು ಅಡಿಯಲ್ಲಿ, ಅಫಿಡವಿಟ್ "ನಿಲ್" ಎಂದು ಘೋಷಿಸಲಾಗಿದೆ. ಪ್ರಧಾನಿ ಮೋದಿಯವರ ಹೆಸರಲ್ಲಿ ಕಾರು, ಮನೆ ಇಲ್ಲ ಎಂದು ನಮೂದಿಸಲಾಗಿದೆ. ಜಶೋದಾಬೆನ್ ಅವರನ್ನು ಮೋದಿಯವರ ಸಂಗಾತಿ ಎಂದು ಉಲ್ಲೇಖಿಸಲಾಗಿದೆ. ಆಕೆಯ ಬಳಿ ಇರುವ ಆಸ್ತಿಗಳ ಮೇಲೆ, ಡಾಕ್ಯುಮೆಂಟ್ "ತಿಳಿದಿಲ್ಲ" ಎಂದು ಉಲ್ಲೇಖಿಸಲಾಗಿದೆ.

ಮೋದಿ ವಿರುದ್ಧ ಯಾವುದೇ ಕ್ರಿಮಿನಲ್ ಮೊಕದ್ದಮೆ ಬಾಕಿ ಉಳಿದಿಲ್ಲ ಅಥವಾ ಯಾವುದೇ ಅಪರಾಧಕ್ಕೆ ಶಿಕ್ಷೆಯಾಗಿಲ್ಲ. ಸರ್ಕಾರಕ್ಕೆ ಯಾವುದೇ ಹೊಣೆಗಾರಿಕೆಗಳಿಲ್ಲ. 

ಪ್ರಧಾನ ಮಂತ್ರಿಯವರನ್ನು ಅಹಮದಾಬಾದ್ ನಿವಾಸಿ ಎಂದು ಹೇಳಲಾಗಿದೆ. ಅವರ ವೃತ್ತಿಯಲ್ಲಿ ಸಾರ್ವಜನಿಕ ಜೀವನ ಮತ್ತು ರಾಜಕೀಯ ಚಟುವಟಿಕೆ ಉಲ್ಲೇಖವಿದೆ.  

2019 ರ ಲೋಕಸಭಾ ಚುನಾವಣೆಯಲ್ಲಿ, ಮೋದಿ ಅವರು ಗುಜರಾತ್‌ನ ಗಾಂಧಿನಗರದಲ್ಲಿ ವಸತಿ ಪ್ಲಾಟ್, ₹ 1.27 ಕೋಟಿ ಸ್ಥಿರ ಠೇವಣಿ ಮತ್ತು ₹ 38,750 ನಗದು ಸೇರಿದಂತೆ ₹ 2.5 ಕೋಟಿ ಮೌಲ್ಯದ ಆಸ್ತಿಯನ್ನು ಘೋಷಿಸಿದ್ದರು. 2014ರ ಲೋಕಸಭೆ ಚುನಾವಣೆಯಲ್ಲಿ ಅವರು ಒಟ್ಟು ₹1.65 ಕೋಟಿ ಆಸ್ತಿಯನ್ನು ಬಹಿರಂಗಪಡಿಸಿದ್ದರು.

ಪ್ರಧಾನಮಂತ್ರಿಯವರು ವೆಬ್‌ಸೈಟ್ ಹೊಂದಿದ್ದಾರೆ ಮತ್ತು ಫೇಸ್‌ಬುಕ್, ಮೈಕ್ರೋಬ್ಲಾಗಿಂಗ್ ಸೈಟ್ ಎಕ್ಸ್, ಯೂಟ್ಯೂಬ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸಾಪ್‌ನಲ್ಲಿದ್ದಾರೆ ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ:  ಪುಷ್ಯ ನಕ್ಷತ್ರ ಗಳಿಗೆಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಧಾನಿ ಮೋದಿಗೆ ಗೆಲುವಿನ ಸಾಧ್ಯತೆ ಎಷ್ಟಿದೆ ಗೊತ್ತಾ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News