ಲೋಕಸಭಾ ಚುನಾವಣೆಯಲ್ಲಿ ಸೋನಿಯಾ ಬದಲು ಪ್ರಿಯಾಂಕಾ ಗಾಂಧಿ ಕಣಕ್ಕೆ ?

   

Last Updated : Aug 3, 2018, 07:34 PM IST
ಲೋಕಸಭಾ ಚುನಾವಣೆಯಲ್ಲಿ ಸೋನಿಯಾ ಬದಲು ಪ್ರಿಯಾಂಕಾ ಗಾಂಧಿ ಕಣಕ್ಕೆ ? title=

ನವದೆಹಲಿ: ಮುಂಬರುವ 2019 ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದ ರಾಯ್ ಬರೇಲಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋನಿಯಾಗಾಂಧಿ ಬದಲು ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲಿದ್ದಾರೆ ಎಂದು ಸುದ್ದಿ ಮೂಲಗಳು ತಿಳಿಸಿವೆ 

ಸೋನಿಯಾ ಗಾಂಧಿ ಅವರು 1999 ರ ಲೋಕಸಭೆ ಚುನಾವಣೆಯಲ್ಲಿ ಅಮೆಥಿ ಮತ್ತು ಬಳ್ಳಾರಿಯಿಂದ ಸ್ಪರ್ಧಿಸಿದ್ದ ಸೋನಿಯಾ ಗಾಂಧಿ,ನಂತರ ಈ ಕ್ಷೇತ್ರವನ್ನು ಅವರು ರಾಹುಲ್ ಗಾಂಧಿಗೆ ಕೊಟ್ಟಿದ್ದರು.  ತದನಂತರ 2004, 2009 ಮತ್ತು 2014 ರ ಲೋಕಸಭಾ ಚುನಾವಣೆಯಲ್ಲಿ ರಾಯ್ ಬರೇಲಿಯಿಂದ ಸತತವಾಗಿ ಗೆಲುವು ಸಾಧಿಸಿದ್ದಾರೆ.

ಇತ್ತೀಚಿಗೆ ತಮ್ಮ ಆರೋಗ್ಯದ ಕಾರಣದಿಂದಾಗಿ ಅವರು ಮಗ ರಾಹುಲ್ ಗಾಂಧಿಗೆ ಪಕ್ಷದ  ನೇತೃತ್ವವನ್ನು ಹಸ್ತಾನಂತರ ಮಾಡಿದ್ದರು.ಈಗ ಸಕ್ರೀಯ ರಾಜಕಾರಣದಿಂದ ದೂರು ಸರಿಯುವ ಸೂಚನೆ ನೀಡಿರುವ ಅವರು ಈಗ ರಾಯಬರೇಲಿ ಕ್ಷೇತ್ರವನ್ನು ಮಗಳು ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ವರ್ಗಾಯಿಸಲಿದ್ದಾರೆ ಎನ್ನಲಾಗುತ್ತಿದೆ. 

ಇನ್ನೊಂದು ವಿಶೇಷವೆಂದರೆ ಸಕ್ರಿಯ ರಾಜಕೀಯದಲ್ಲಿ ಪ್ರಿಯಾಂಕಾ ವಾದ್ರಾ ಅವರ ಪ್ರವೇಶವು ಕಾಂಗ್ರೆಸ್ ವಲಯಗಳಲ್ಲಿ  ದಶಕಕ್ಕೂ ಅಧಿಕ ಕಾಲ ಕೇವಲ ಊಹಾಪೋಹವಾಗಿದೆ.ನೋಡಲಿಕ್ಕೆ ಅಜ್ಜಿ ಇಂದಿರಾ ಗಾಂಧಿಯವರನ್ನು ಹೋಲುವ ಅವರು ಮಾತುಗಾರಿಕೆಯಲ್ಲೂ ಸಹ ಚಾಕ್ಯಚಕ್ಯತೆಯನ್ನು ಅಷ್ಟೇ ನಿಪುಣರ ರೀತಿಯಲ್ಲಿ ಪ್ರದರ್ಶಿಸುತ್ತಾರೆ.

 

Trending News