ಅಮೆರಿಕದ ಪ್ರಶ್ನೆಗೆ ಪ್ರಧಾನಿ ಮೋದಿ ಸರ್ಕಾರದ ಬಳಿ ಉತ್ತರವಿದೆಯೇ: ಸುಬ್ರಮಣಿಯನ್ ಸ್ವಾಮಿ

ಸಂಸದ ಸ್ಥಾನದಿಂದ ರಾಹುಲ್‌ ಗಾಂಧಿಯವರ ಅನರ್ಹಗೊಳಿಸುವಿಕೆ ಪ್ರಶ್ನಿಸಿ ದೇಶ-ವಿದೇಶದ ರಾಜಕಾರಣಿಗಳು, ಚಿಂತಕರು ಖಂಡಿಸಿದ್ದರು. ಈ ಮಧ್ಯೆ ಬಿಜೆಪಿ ನಾಯಕ ಸುಬ್ರಮಣಿಯನ್‌ ಸ್ವಾಮಿ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.  

Written by - Puttaraj K Alur | Last Updated : Mar 29, 2023, 08:52 AM IST
  • ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಬುದ್ಧು ಎಂದ ಬಿಜೆಪಿ ನಾಯಕ ಸುಬ್ರಮಣಿಯನ್‌ ಸ್ವಾಮಿ
  • ಬುದ್ಧುವಿನ ವಿರುದ್ಧ ಪ್ರಧಾನಿ ಮೋದಿ ಸರ್ಕಾರದ ಕ್ರಮವನ್ನು ಅಮೆರಿಕ ವಿದೇಶಾಂಗ ಇಲಾಖೆ ಖಂಡಿಸಿದೆ
  • ಇದಕ್ಕೆ ಮೋದಿ ಸರ್ಕಾರದ ಉತ್ತರವೇನು? ಎಂದು ಪ್ರಶ್ನಿಸಿದ ಸುಬ್ರಮಣಿಯನ್‌ ಸ್ವಾಮಿ
ಅಮೆರಿಕದ ಪ್ರಶ್ನೆಗೆ ಪ್ರಧಾನಿ ಮೋದಿ ಸರ್ಕಾರದ ಬಳಿ ಉತ್ತರವಿದೆಯೇ: ಸುಬ್ರಮಣಿಯನ್ ಸ್ವಾಮಿ   title=
ಮೋದಿ ಸರ್ಕಾರಕ್ಕೆ ಸುಬ್ರಮಣಿಯನ್ ಸ್ವಾಮಿ ಪ್ರಶ್ನೆ

ನವದೆಹಲಿ: ಪ್ರಧಾನಿ ಮೋದಿಯವರ ಉಪನಾಮದ ಬಗ್ಗೆ‌ ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ 2019ರ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ತಪ್ಪಿತಸ್ಥರೆಂದು ಘೋಷಿಸಿದ್ದ ಗುಜರಾತ್‌ನ ಸೂರತ್ ನ್ಯಾಯಾಲಯವು 2 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಆದೇಶಿಸಿತ್ತು.   

ಸೂರತ್‌ ನ್ಯಾಯಾಲಯದ ಈ ತೀರ್ಪು ಹೊರಬಿದ್ದ ಬೆನ್ನಲ್ಲೇ ಲೋಕಸಭೆಯ ಸದಸ್ಯತ್ವದಿಂದ ರಾಹುಲ್ ಗಾಂಧಿಯವರನ್ನು ಅನರ್ಹಗೊಳಿಸಲಾಯಿತು. ಸಂಸದ ಸ್ಥಾನದಿಂದ ರಾಹುಲ್‌ ಗಾಂಧಿಯವರ ಅನರ್ಹಗೊಳಿಸುವಿಕೆ ಪ್ರಶ್ನಿಸಿ ದೇಶ-ವಿದೇಶದ ರಾಜಕಾರಣಿಗಳು, ಚಿಂತಕರು ಖಂಡಿಸಿದ್ದರು. ಈ ಮಧ್ಯೆ ಬಿಜೆಪಿ ನಾಯಕ ಸುಬ್ರಮಣಿಯನ್‌ ಸ್ವಾಮಿ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.  

ಇದನ್ನೂ ಓದಿ: Viral Video: ಫಸ್ಟ್ ನೈಟ್ ವಿಡಿಯೋ ಶೇರ್ ಮಾಡಿದ ಕಪಲ್: ವಧು ತರ ಡ್ರೆಸ್ ಮಾಡಿಕೊಂಡ ವರ ರೂಂನಲ್ಲಿ ಮಾಡಿದ್ದು…

ರಾಹುಲ್‌ ಗಾಂಧಿಯನ್ನು ಬುದ್ಧು ಎಂದು ಕರೆದಿರುವ ಸುಬ್ರಮಣಿಯನ್‌ ಸ್ವಾಮಿ, ‘ಬುದ್ಧುವಿನ ವಿರುದ್ಧ ಪ್ರಧಾನಿ ಮೋದಿ ಸರ್ಕಾರದ ಕ್ರಮವನ್ನು ಅಮೆರಿಕ ವಿದೇಶಾಂಗ ಇಲಾಖೆ ಖಂಡಿಸಿದೆ. ಇದಕ್ಕೆ ಮೋದಿ ಸರ್ಕಾರದ ಉತ್ತರವೇನು?’ ಎಂದು ಪ್ರಶ್ನಿಸಿದ್ದಾರೆ. 

ಸುಬ್ರಮಣಿಯನ್‌ ಸ್ವಾಮಿಯವರ ಈ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಇಂಟರ್‍ನೆಟ್ ಬಳಕೆದಾರರೊಬ್ಬರು, ‘ಚಿಂತೆ ಮಾಡಬೇಡಿ, ಕೇಂದ್ರದ ವಿದೇಶಾಂಗ ಸಚಿವ ಡಾ.ಜೈಶಂಕರ್‌ ಇದನ್ನು ನಿಭಾಯಿಸುತ್ತಾರೆ’ ಎಂದು ಹೇಳಿದ್ದಾರೆ. ಈ ಟ್ವೀಟ್‍ಗೆ ಪ್ರತಿಕ್ರಿಯಿಸಿರುವ ಸುಬ್ರಮಣಿಯನ್‌ ಸ್ವಾಮಿ, ‘ಚೀನಾದೊಂದಿಗೆ ತೆವಳುತ್ತಾ ಭಿಕ್ಷೆ ಬೇಡಿದಂತೆಯಾ?’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕಳಪೆ ಗುಣಮಟ್ಟದ ಔಷಧಿಯಿಂದಾಗಿ 18 ಫಾರ್ಮಾ ಕಂಪನಿಗಳ ಲೈಸೆನ್ಸ್ ರದ್ದು..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
   

Trending News