ಪ್ರಧಾನಿ ಮೋದಿ ಫೋಟೋ ಹರಿದ ಕಾಂಗ್ರೆಸ್ ಶಾಸಕನಿಗೆ 99 ರೂ. ದಂಡ!

ಯೂತ್ ಕಾಂಗ್ರೆಸ್ ಸದಸ್ಯರು ಸೇರಿದಂತೆ ಪಟೇಲ್ ಮತ್ತು ಇತರ 6 ಮಂದಿಯ ವಿರುದ್ಧ ಐಪಿಸಿ ಸೆಕ್ಷನ್ 143 (ಕಾನೂನುಬಾಹಿರ ಸಭೆ), 353 (ಹಲ್ಲೆ), 427 (50 ರೂ. ಮೇಲ್ಪಟ್ಟು ನಷ್ಟ ಉಂಟು ಮಾಡಿದ ಕಿಡಿಗೇಡಿತನ), 447 (ಅಪರಾಧ ಅತಿಕ್ರಮಣ) ಮತ್ತು 504 (ಉದ್ದೇಶಪೂರ್ವಕ ಅವಮಾನ) ಅಡಿ ಪ್ರಕರಣ ದಾಖಲಿಸಲಾಗಿದೆ.

Written by - Puttaraj K Alur | Last Updated : Mar 28, 2023, 03:22 PM IST
  • ಪ್ರಧಾನಿ ನರೇಂದ್ರ ಮೋದಿ ಫೋಟೋ ಹರಿದುಹಾಕಿದ ಕಾಂಗ್ರೆಸ್ ಶಾಸಕನಿಗೆ 99 ರೂ. ದಂಡ
  • ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಪ್ರಧಾನಿ ಮೋದಿ ಫೋಟೋ ಹರಿದುಹಾಕಿದ್ದ ಕಾಂಗ್ರೆಸ್ ಶಾಸಕ
  • ನವಸಾರಿ ಕೃಷಿ ವಿವಿ ಉಪಕುಲಪತಿಗಳ ಕಚೇರಿಗೆ ಪ್ರವೇಶಿಸಿ ಅಶಿಸ್ತಿನ ರೀತಿಯಲ್ಲಿ ವರ್ತಿಸಿದ್ದ ಅನಂತ್ ಪಟೇಲ್
ಪ್ರಧಾನಿ ಮೋದಿ ಫೋಟೋ ಹರಿದ ಕಾಂಗ್ರೆಸ್ ಶಾಸಕನಿಗೆ 99 ರೂ. ದಂಡ! title=
ಕಾಂಗ್ರೆಸ್ ಶಾಸಕನಿಗೆ 99 ರೂ. ದಂಡ!

ನವದೆಹಲಿ: ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಕೃಷಿ ವಿಶ್ವವಿದ್ಯಾನಿಲಯದ ಉಪಕುಲಪತಿಗಳ ಚೇಂಬರ್‌ಗೆ ನುಗ್ಗಿ ಪ್ರಧಾನಿ ಮೋದಿಯವರ ಫೋಟೋ ಹರಿದ ಆರೋಪದಡಿ ಕಾಂಗ್ರೆಸ್ ಶಾಸಕನಿಗೆ ಗುಜರಾತ್ ನ್ಯಾಯಾಲಯ 99 ರೂ. ದಂಡ ವಿಧಿಸಿದೆ.

2017ರಲ್ಲಿ ವಂಸ್ಡಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಅನಂತ್ ಪಟೇಲ್ ಮತ್ತು ಇತರರು ವಿದ್ಯಾರ್ಥಿಗಳ ಪ್ರತಿಭಟನೆಯ ವೇಳೆ ನವಸಾರಿ ಕೃಷಿ ವಿವಿಯ ಉಪಕುಲಪತಿಗಳ ಕಚೇರಿಗೆ ಪ್ರವೇಶಿಸಿ ಅಶಿಸ್ತಿನ ರೀತಿಯಲ್ಲಿ ವರ್ತಿಸಿದ್ದರು. ವಿಸಿಯ ಮೇಜಿನ ಮೇಲಿದ್ದ ಪ್ರಧಾನಿ ಮೋದಿಯವರ ಫೋಟೋವನ್ನು ಹರಿದು ಹಾಕಿದ್ದರೆಂಬ ಆರೋಪ ಕೇಳಿ ಬಂದಿತ್ತು. ಘಟನೆಗೆ ಸಂಬಂಧಿಸಿದಂತೆ 2017ರ ಮೇನಲ್ಲಿ ಜಲಾಲ್‍ಪೋರ್ ಪೊಲೀಸರು ಶಾಸಕ ಪಟೇಲ್ ಮತ್ತು ಇತರ 6 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಇದನ್ನೂ ಓದಿ: ಜನಸಾಮಾನ್ಯರಿಗೆ ಹಣದುಬ್ಬರದ ದೊಡ್ಡ ಹೊಡೆತ; ಅಗತ್ಯ ಔಷಧಿಗಳ ಬೆಲೆಗಳಲ್ಲಿ ಏರಿಕೆ!

ಹೆಚ್ಚುವರಿ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ ವಿಎ ಧಧಲ್ ಅವರು ಕಾಂಗ್ರೆಸ್ ಶಾಸಕ ಪಟೇಲ್ ಅವರನ್ನು ಕ್ರಿಮಿನಲ್ ಅತಿಕ್ರಮಣಕ್ಕಾಗಿ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 447ರಡಿ ತಪ್ಪಿತಸ್ಥರೆಂದು ಘೋಷಿಸಿದ್ದಾರೆ. ಯೂತ್ ಕಾಂಗ್ರೆಸ್ ಸದಸ್ಯರು ಸೇರಿದಂತೆ ಪಟೇಲ್ ಮತ್ತು ಇತರ 6 ಮಂದಿಯ ವಿರುದ್ಧ ಐಪಿಸಿ ಸೆಕ್ಷನ್ 143 (ಕಾನೂನುಬಾಹಿರ ಸಭೆ), 353 (ಹಲ್ಲೆ), 427 (50 ರೂ. ಮೇಲ್ಪಟ್ಟು ನಷ್ಟ ಉಂಟು ಮಾಡಿದ ಕಿಡಿಗೇಡಿತನ), 447 (ಅಪರಾಧ ಅತಿಕ್ರಮಣ) ಮತ್ತು 504 (ಉದ್ದೇಶಪೂರ್ವಕ ಅವಮಾನ) ಅಡಿ ಪ್ರಕರಣ ದಾಖಲಿಸಲಾಗಿದೆ.

ಕ್ರಿಮಿನಲ್ ಅತಿಕ್ರಮಣಕ್ಕಾಗಿ ಮೂವರು ಆರೋಪಿಗಳನ್ನು ತಪ್ಪಿತಸ್ಥರೆಂದು ಪರಿಗಣಿಸಿದ ನ್ಯಾಯಾಲಯವು 99 ರೂ.ಗಳ ದಂಡವನ್ನು ಠೇವಣಿ ಮಾಡಲು ಆದೇಶಿಸಿತು ಮತ್ತು ತಪ್ಪಿದಲ್ಲಿ ಅವರು 7 ದಿನಗಳ ಸಾದಾ ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದೆ. ಪ್ರಾಸಿಕ್ಯೂಷನ್ ಐಪಿಸಿಯ ಸೆಕ್ಷನ್ 447ರಡಿ ಪಟೇಲ್‌ಗೆ ಗರಿಷ್ಠ ಶಿಕ್ಷೆ ನೀಡುವಂತೆ ಕೋರಿತು. ಕಾಂಗ್ರೆಸ್ ಶಾಸಕನಿಗೆ 3 ತಿಂಗಳವರೆಗೆ ಜೈಲು ಶಿಕ್ಷೆ ಮತ್ತು 500 ರೂ. ದಂಡ ವಿಧಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಲಾಗಿತ್ತು. ಇದು ರಾಜಕೀಯ ದ್ವೇಷದ ಪರಿಣಾಮವಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.  

ಇದನ್ನೂ ಓದಿ: COVID-19: ದೇಶದಲ್ಲಿ ಕೊರೊನಾ ವೈರಸ್‍ನ ಹೊಸ ಅಲೆಯ ಹಾವಳಿ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
   

Trending News