Smriti Irani : ರಾಹುಲ್ ಗಾಂಧಿಗೆ ವಾರ್ನಿಂಗ್ ನೀಡಿದ ಸಚಿವೆ ಸ್ಮೃತಿ ಇರಾನಿ..!

ಬೆಲೆ ಏರಿಕೆ ವಿಚಾರವಾಗಿ ಪ್ರತಿಪಕ್ಷಗಳ ಪ್ರತಿಭಟನೆಯ ಕಾರಣದಿಂದ ಲೋಕಸಭೆ ಕಲಾಪವನ್ನು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಲಾಗಿದೆ.

Written by - Channabasava A Kashinakunti | Last Updated : Jul 20, 2022, 12:56 PM IST
  • ಬೆಲೆ ಏರಿಕೆ ವಿಚಾರವಾಗಿ ಪ್ರತಿಪಕ್ಷಗಳ ಪ್ರತಿಭಟನೆ
  • ಲೋಕಸಭೆ ಕಲಾಪವನ್ನು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಲಾಗಿದೆ
  • ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಸ್ಮೃತಿ ಇರಾನಿ
Smriti Irani : ರಾಹುಲ್ ಗಾಂಧಿಗೆ ವಾರ್ನಿಂಗ್ ನೀಡಿದ ಸಚಿವೆ ಸ್ಮೃತಿ ಇರಾನಿ..! title=

ನವದೆಹಲಿ : ಬೆಲೆ ಏರಿಕೆ ವಿಚಾರವಾಗಿ ಪ್ರತಿಪಕ್ಷಗಳ ಪ್ರತಿಭಟನೆಯ ಕಾರಣದಿಂದ ಲೋಕಸಭೆ ಕಲಾಪವನ್ನು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಲಾಗಿದೆ. ಈ ಮಧ್ಯ ಕೇಂದ್ರ ಸಚಿವೆ ಸ್ಮೃತಿ ಇರಾನಿ, "ರಾಜಕೀಯವಾಗಿ ಅನುತ್ಪಾದಕ" ಆಗಿರಬಹುದು ಆದರೆ ಅವರು ಶಾಸಕಾಂಗದ ಉತ್ಪಾದಕತೆಯನ್ನು ತಡೆಯಲು ಪ್ರಯತ್ನಿಸಬಾರದು ಎಂದು ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಕೆಲವು ಆಹಾರ ಪದಾರ್ಥಗಳ ಮೇಲಿನ ಜಿಎಸ್‌ಟಿ ಮತ್ತು ಸಾಮಾನ್ಯವಾಗಿ ಬೆಲೆ ಏರಿಕೆಯಂತಹ ವಿಷಯಗಳ ಕುರಿತು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷದ ನಾಯಕರು ಕಲಾಪವನ್ನು ಅಡ್ಡಿಪಡಿಸಿದರು. ಸೋಮವಾರದಿಂದ ಸಂಸತ್ತಿನ ಮುಂಗಾರು ಅಧಿವೇಶನವು ಪ್ರಾರಂಭವಾದಾಗಿನಿಂದ ಪ್ರತಿ ಪಕ್ಷ ನಾಯಕರು ಕಲಾಪದಲ್ಲಿ ಗದ್ದಳು ಸೃಷ್ಟಿಸುತ್ತಿದ್ದಾರೆ. ದೇಶ ಎದುರಿಸುತ್ತಿರುವ ನಿರ್ಣಾಯಕ ವಿಷಯಗಳ ಚರ್ಚೆಯಿಂದ ಸರ್ಕಾರ ದೂರು ಸರಿಯುತ್ತಿದೆ ಎಂದು ಪ್ರತಿಪಕ್ಷಗಳ ನಾಯಕರು ಆರೋಪಿಸಿದ್ದಾರೆ.

ಇದನ್ನೂ ಓದಿ : Shocking! ಗುರುಗ್ರಾಮದ DSP ಹತ್ಯೆ ಮಾದರಿಯಲ್ಲೇ ಲೇಡಿ ಪಿಎಸ್‌ಐ ಕೊಲೆ..!

ಅಧಿವೇಶನದಲ್ಲಿ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಸಚಿವೆ ಇರಾನಿ, ತಮ್ಮ ರಾಜಕೀಯ ಜೀವನದಲ್ಲಿ ಸಂಸದೀಯ ಕಾರ್ಯವಿಧಾನಗಳು ಮತ್ತು ಸಂಪ್ರದಾಯಗಳಿಗೆ ಅಗೌರವ ತೋರಿದ್ದಾರೆ ಎಂದು ಆರೋಪಿಸಿದರು. ಅವರು ಈಗ ಲೋಕಸಭೆಯ ಉತ್ಪಾದಕತೆಯನ್ನು ತಗ್ಗಿಸಲು ಹಠ ಮಾಡುತ್ತಿದ್ದಾರೆ ಎಂದರು. 2004 ಮತ್ತು 2019 ರ ನಡುವೆ ಅಮೇಥಿ ಸಂಸದರಾಗಿದ್ದ ಅವರು ಸಂಸತ್ತಿನಲ್ಲಿ ಯಾವುದೇ ಪ್ರಶ್ನೆಯನ್ನು ಕೇಳಿಲ್ಲ ಮತ್ತು ಅವರು ಕ್ಷೇತ್ರವನ್ನು ತ್ಯಜಿಸಿ ವಯನಾಡ್ ಸಂಸದರಾದಾಗ, 2019 ರ ಚಳಿಗಾಲದ ಅಧಿವೇಶನದಲ್ಲಿ ಲೋಕಸಭೆಯಲ್ಲಿ ಅವರ ಹಾಜರಾತಿ ಶೇ. 40 ಕ್ಕಿಂತ ಕಡಿಮೆ ಇತ್ತು ಎಂದರು.

ಸಂಸತ್ತಿನಲ್ಲಿ ಯಾವುದೇ ಖಾಸಗಿ ಸದಸ್ಯರ ಮಸೂದೆಯನ್ನು ಪ್ರಸ್ತಾಪಿಸದ ಒಬ್ಬ ಮಹನೀಯರು, ಇಂದು ಮತ್ತೊಮ್ಮೆ, ಸಂಸತ್ತಿನಲ್ಲಿ ಆರೋಗ್ಯಕರ, ಉತ್ಪಾದಕ ಚರ್ಚೆ, ಚರ್ಚೆ ನಡೆಯದಂತೆ ನೋಡಿಕೊಳ್ಳಲು ಬಯಸುತ್ತಾರೆ ಎಂದರು. 

ರಾಹುಲ್ ಗಾಂಧಿ ಪದೇ ಪದೇ ವಿದೇಶಕ್ಕೆ ಭೇಟಿ ನೀಡುತ್ತಿರುವುದರ ಬಗ್ಗೆ ವಿರುದ್ಧ ವಾಗ್ದಾಳಿ ನಡೆಸಿದ ಸಚಿವೆ ಸ್ಮೃತಿ, ಇವರು ಪದೇ ಪದೇ ವಿದೇಶಕ್ಕೆ ಭೇಟಿ ನೀಡುತ್ತಿರುವುದು ಸ್ವಂತ ಪಕ್ಷಕ್ಕೆ ಚಿಂತೆಯ ವಿಷಯವಾಗಿದೆ. "ಅವರ ರಾಜಕೀಯ ಜೀವನವನ್ನು ಸಂಸದೀಯ ಸಂಪ್ರದಾಯಗಳನ್ನು ಅಗೌರವಗೊಳಿಸಲಾಗಿದೆ. ಈಗ ಅವರು ಸಂಸತ್ತಿನ ಕಲಾಪಗಳು ಮತ್ತು ಚರ್ಚೆಗಳು ನಡೆಯದಂತೆ ನೋಡಿಕೊಳ್ಳಲು ತಮ್ಮನ್ನು ತಾವು ಸಮರ್ಪಿಸಿಕೊಳ್ಳುತ್ತಿದ್ದಾರೆ". "ಅವರು ರಾಜಕೀಯವಾಗಿ ಅನುತ್ಪಾದಕರಾಗಿರಬಹುದು ಆದರೆ ಸಂಸತ್ತಿನ ಉತ್ಪಾದಕತೆಯನ್ನು ನಿರಂತರವಾಗಿ ನಿಗ್ರಹಿಸಲು ಅವರು ಧೈರ್ಯ ಮಾಡಬಾರದು" ಎಂದು  ಹೇಳಿದರು.

ಇದನ್ನೂ ಓದಿ : Viral Video: ಕಟುಕನಿಗೆ ಮಾರುತ್ತಿದ್ದಂತೆ ಅಳುತ್ತಾ ಮಾಲೀಕನನ್ನು ತಬ್ಬಿಕೊಂಡ ಮೇಕೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News