ಮುಂಬೈನಲ್ಲಿ ರೈಲ್ವೆ ಉದ್ಯೋಗಾಕಾಕ್ಷಿಗಳಿಂದ ಪ್ರತಿಭಟನೆ

ರೈಲ್ವೇ ಇಲಾಖೆಯ ನೇಮಕಾತಿಯಲ್ಲಿ ವಂಚನೆಯಾಗಿದೆ ಎಂದು ಆರೋಪಿಸಿ ಇಲ್ಲಿನ ಮಾತುಂಗ ಮತ್ತು ಛತ್ರಪತಿ ಶಿವಾಜಿ ರೈಲ್ವೆ ನಿಲ್ದಾಣಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ರೈಲು ತಡೆದು ಪ್ರತಿಭಟನೆ ನಡೆದರು.

Updated: Mar 20, 2018 , 11:24 AM IST
ಮುಂಬೈನಲ್ಲಿ ರೈಲ್ವೆ ಉದ್ಯೋಗಾಕಾಕ್ಷಿಗಳಿಂದ ಪ್ರತಿಭಟನೆ

ಮುಂಬೈ: ರೈಲ್ವೇ ಇಲಾಖೆಯ ನೇಮಕಾತಿಯಲ್ಲಿ ವಂಚನೆಯಾಗಿದೆ ಎಂದು ಆರೋಪಿಸಿ ಇಲ್ಲಿನ ಮಾತುಂಗ ಮತ್ತು ಛತ್ರಪತಿ ಶಿವಾಜಿ ರೈಲ್ವೆ ನಿಲ್ದಾಣಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ರೈಲು ತಡೆದು ಪ್ರತಿಭಟನೆ ನಡೆದರು.

ಮುಂಜಾನೆ 7 ಗಂಟೆಯಿಂದಲೇ ರೈಲು ಸಂಚಾರವನ್ನು ತಡೆದು ಪ್ರತಿಭಟನೆ ಆರಂಭಿಸಿರುವ ಪ್ರತಿಭಟನಾಕಾರರು, ರೈಲು ಹಳಿಗಳ ಮೇಲೆ ಕುಳಿತು ರೈಲ್ವೇ ನೇಮಕಾತಿಯಲ್ಲಿ ನಮಗೆ ಅನ್ಯಾಯವಾಗಿದೆ. ಈಗಾಗಲೇ ತಾವು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರೂ ರೈಲ್ವೇ ಇಲಾಖೆ ನೇಮಕಾತಿಯಲ್ಲಿ ತಮ್ಮನ್ನು ಪರಿಗಣಿಸುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ. 

ಪ್ರತಿಭಟನೆ ವೇಳೆ ಉದ್ರಿಕ್ತ ಗುಂಪೊಂದು ರೈಲುಗಳ ಮೇಲೆ ಕಲ್ಲು ತೂರಾಟ ನಡೆಸಿದೆ. ಹೀಗಾಗಿ ಸ್ಥಳದಲ್ಲಿ ಕೆಲ ಕಾಲ ಉದ್ವಿಗ್ನದ ವಾತಾವರಣ ನಿರ್ಮಾಣವಾಗಿತ್ತು. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಬೆಳಿಗ್ಗೆಯಿಂದ ಪ್ರತಿಭಟನೆಯಿಂದಾಗಿ ಅಸ್ಥವ್ಯಸ್ತಗೊಂಡಿದ್ದ ಸ್ಥಳೀಯ ರೈಲು ಸಂಚಾರ ಮತ್ತೆ ಆರಂಭವಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.