ನವದೆಹಲಿ: ಭಾರತೀಯ ರೈಲ್ವೆ ರಾಜಧಾನಿ ವಿಶೇಷ ಮೀಸಲಾತಿ ವ್ಯವಸ್ಥೆಯನ್ನು ಬದಲಾಯಿಸಿದ್ದು ಈ ರೈಲುಗಳಿಗೆ ಮುಂಗಡ ಮೀಸಲಾತಿ ಅವಧಿಯನ್ನು (ಎಆರ್ಪಿ) 7 ದಿನಗಳಿಂದ 30 ದಿನಗಳಿಗೆ ಹೆಚ್ಚಿಸಲು ನಿರ್ಧರಿಸಿದೆ.
ಕರೋನಾ ವೈರಸ್ ಹರಡುವುದನ್ನು ಎದುರಿಸಲು ರಾಷ್ಟ್ರವ್ಯಾಪಿ ಲಾಕ್ಡೌನ್ ಜಾರಿಗೊಳಿಸಿದ ಬಳಿಕ ಮಾರ್ಚ್ 25 ರಿಂದ ರೈಲ್ವೆ ಪ್ರಯಾಣಿಕ, ಮೇಲ್ ಮತ್ತು ಎಕ್ಸ್ಪ್ರೆಸ್ ರೈಲು ಸೇವೆಗಳನ್ನು ರದ್ದುಗೊಳಿಸಿತು. ಆದಾಗ್ಯೂ, ದೇಶಾದ್ಯಂತ ಅಗತ್ಯ ವಸ್ತುಗಳ ಸರಬರಾಜನ್ನು ಖಚಿತಪಡಿಸಿಕೊಳ್ಳಲು ಸರಕುಗಳು ಮತ್ತು ವಿಶೇಷ ಪಾರ್ಸೆಲ್ ರೈಲುಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದವು.
ಇದರ ನಂತರ ಇತರ ರಾಜ್ಯಗಳಲ್ಲಿ ಸಿಕ್ಕಿಬಿದ್ದ ವಲಸೆ ಕಾರ್ಮಿಕರು, ಯಾತ್ರಿಕರು, ವಿದ್ಯಾರ್ಥಿಗಳು ಮತ್ತು ಪ್ರವಾಸಿಗರನ್ನು ಸಾಗಿಸಲು ಭಾರತೀಯ ರೈಲ್ವೆ (Indian Railways) ಮೇ 1 ರಿಂದ ಶ್ರಮಿಕ್ ವಿಶೇಷ ರೈಲುಗಳನ್ನು ಓಡಿಸಲು ಪ್ರಾರಂಭಿಸಿತು. ಮತ್ತು ಮೇ 12 ರಂದು ರೈಲ್ವೆ 15 ಜೋಡಿ ವಿಶೇಷ ಹವಾನಿಯಂತ್ರಿತ ರೈಲುಗಳನ್ನು ಸಹ ಪ್ರಾರಂಭಿಸಿತು.
ಈ ರೈಲುಗಳಿಗೆ ತಕ್ಷಣದ ಬುಕಿಂಗ್ ಇಲ್ಲ. ಈ ರೈಲುಗಳಲ್ಲಿ ಆರ್ಎಸಿ ಮತ್ತು ಕಾಯುವ ಪಟ್ಟಿಯನ್ನು ಸಹ ಬಿಡುಗಡೆ ಮಾಡಲಾಗುವುದು. ಆದಾಗ್ಯೂ ಕಾಯುವ ಪಟ್ಟಿ (Waiting List)ಯನ್ನು ಹೊಂದಿರುವ ಪ್ರಯಾಣಿಕರಿಗೆ ಪ್ರಯಾಣಿಸಲು ಅನುಮತಿಸುವುದಿಲ್ಲ. ರೈಲು ಹೊರಡುವ ನಾಲ್ಕು ಗಂಟೆಗಳ ಮೊದಲು ಮೊದಲ ಚಾರ್ಟ್ ಹೊರಬರುತ್ತದೆ. ಎರಡನೇ ಚಾರ್ಟ್ ಎರಡು ಗಂಟೆಗಳ ಮುಂಚಿತವಾಗಿ ಬರುತ್ತದೆ.
ಜೂನ್ 1 ರಿಂದ 200 ವಿಶೇಷ ರೈಲುಗಳಿಗೆ ಬುಕಿಂಗ್ ಪ್ರಾರಂಭಿಸಿದ 24 ಗಂಟೆಗಳಲ್ಲಿ ಭಾರತೀಯ ರೈಲ್ವೆ 12.5 ಲಕ್ಷ ಪ್ರಯಾಣಿಕರಿಗೆ 5.72 ಲಕ್ಷ ಟಿಕೆಟ್ ಕಾಯ್ದಿರಿಸಿದೆ. ರೈಲ್ವೆ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಜೂನ್ 1 ರಿಂದ 200 ರೈಲುಗಳಿಗೆ 12,54,706 ಪ್ರಯಾಣಿಕರಿಗೆ ಒಟ್ಟು 5,72,219 ಟಿಕೆಟ್ಗಳನ್ನು ಕಾಯ್ದಿರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಐಆರ್ಸಿಟಿಸಿ (IRCTC) ವೆಬ್ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್ನಲ್ಲಿ ರೈಲ್ವೆ ಗುರುವಾರ ಬೆಳಿಗ್ಗೆಯಿಂದ 200 ವಿಶೇಷ ರೈಲುಗಳಿಗೆ ಆನ್ಲೈನ್ನಲ್ಲಿ ಬುಕಿಂಗ್ ಪ್ರಾರಂಭಿಸಿದೆ. ಆದರೆ ನಂತರದ ದಿನಗಳಲ್ಲಿ ಪಿಆರ್ಎಸ್ ಕೌಂಟರ್ಗಳು, ಅಂಚೆ ಕಚೇರಿಗಳು ಮತ್ತು ಐಆರ್ಸಿಟಿಸಿ ಏಜೆಂಟರ ಮೂಲಕ ಟಿಕೆಟ್ ಕಾಯ್ದಿರಿಸುವಿಕೆಯನ್ನು ರೈಲ್ವೆ ಘೋಷಿಸಿತು. ಟಿಕೆಟ್ ಕಾಯ್ದಿರಿಸಲು ದೇಶಾದ್ಯಂತ ಅನೇಕ ಸ್ಥಳಗಳಲ್ಲಿ ಪಿಆರ್ಎಸ್ ಕೌಂಟರ್ಗಳನ್ನು ಶುಕ್ರವಾರ ತೆರೆಯಲಾಯಿತು.