ವೆಬ್ ಸೀರಿಸ್ ಹೆಸರು ಬದಲಿಸಲು ಪ್ರಕಾಶ್ ಜಾ ಗೆ ಮಧ್ಯ ಪ್ರದೇಶದ ಸಚಿವರ ತಾಕೀತು

ಪ್ರಕಾಶ್ ಝಾ ನಿರ್ದೇಶಿಸಿದ ವೆಬ್ ಸರಣಿಯ ಸೆಟ್‌ಗಳಲ್ಲಿ ಬಜರಂಗದಳದ ವ್ಯಕ್ತಿಗಳು ನಡೆಸಿದ ಹಿಂಸಾಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ವಿವಾದವನ್ನು ಹುಟ್ಟುಹಾಕಿರುವ ಕರ್ವಾ ಚೌತ್ ಆಚರಿಸುವ ಸಲಿಂಗ ದಂಪತಿಗಳ ಕುರಿತ ಡಾಬರ್‌ನ ಜಾಹೀರಾತಿನ ವಿರುದ್ಧ ರಾಜ್ಯವು ಕ್ರಮ ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದರು.

Written by - Zee Kannada News Desk | Last Updated : Oct 25, 2021, 06:56 PM IST
  • ಪ್ರಕಾಶ್ ಝಾ ನಿರ್ದೇಶಿಸಿದ ವೆಬ್ ಸರಣಿಯ ಸೆಟ್‌ಗಳಲ್ಲಿ ಬಜರಂಗದಳದ ವ್ಯಕ್ತಿಗಳು ನಡೆಸಿದ ಹಿಂಸಾಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ವಿವಾದವನ್ನು ಹುಟ್ಟುಹಾಕಿರುವ ಕರ್ವಾ ಚೌತ್ ಆಚರಿಸುವ ಸಲಿಂಗ ದಂಪತಿಗಳ ಕುರಿತ ಡಾಬರ್‌ನ ಜಾಹೀರಾತಿನ ವಿರುದ್ಧ ರಾಜ್ಯವು ಕ್ರಮ ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದರು.
ವೆಬ್ ಸೀರಿಸ್ ಹೆಸರು ಬದಲಿಸಲು ಪ್ರಕಾಶ್ ಜಾ ಗೆ ಮಧ್ಯ ಪ್ರದೇಶದ ಸಚಿವರ ತಾಕೀತು  title=
Photo Courtesy: ANI

ನವದೆಹಲಿ: ಪ್ರಕಾಶ್ ಝಾ ನಿರ್ದೇಶಿಸಿದ ವೆಬ್ ಸರಣಿಯ ಸೆಟ್‌ಗಳಲ್ಲಿ ಬಜರಂಗದಳದ ವ್ಯಕ್ತಿಗಳು ನಡೆಸಿದ ಹಿಂಸಾಚಾರದ ಹಿನ್ನಲೆಯಲ್ಲಿ ಪ್ರತಿಕ್ರಿಯಿಸಿರುವ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ವಿವಾದವನ್ನು ಹುಟ್ಟುಹಾಕಿರುವ ಕರ್ವಾ ಚೌತ್ ಆಚರಿಸುವ ಸಲಿಂಗ ದಂಪತಿಗಳ ಕುರಿತ ಡಾಬರ್‌ನ ಜಾಹೀರಾತಿನ ವಿರುದ್ಧ ರಾಜ್ಯವು ಕ್ರಮ ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದರು.

ಇದನ್ನೂ ಓದಿ:Rajinikanth: ಭವಿಷ್ಯದಲ್ಲಿ ರಾಜಕೀಯ ಪ್ರವೇಶಿಸುವ ಯಾವುದೇ ಯೋಜನೆಗಳಿಲ್ಲ ಎಂದ ನಟ ರಜನಿಕಾಂತ್

'ನಾನು ಕೂಡ ಇದನ್ನು ಬೆಂಬಲಿಸುತ್ತೇನೆ.ವೆಬ್ ಸರಣಿಗೆ ಆಶ್ರಮ ಎಂದು ಏಕೆ ಹೆಸರಿಡಲಾಗಿದೆ? ಅವರು ಇತರರಿಗೆ ಹೆಸರಿಸಿದರೆ ಪರಿಣಾಮಗಳು ಅರ್ಥವಾಗುತ್ತದೆ' ಮತ್ತು ಈ ವಿಚಾರವಾಗಿ ಮುಂದಿನ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಆದರೆ, ಝಾ ಸಾಹೇಬ್ ನಿಮ್ಮ ತಪ್ಪುಗಳ ಬಗ್ಗೆಯೂ ಯೋಚಿಸಿ,"ಎಂದು ಮಿಶ್ರಾ ವೆಬ್ ಸರಣಿಯನ್ನು ಉಲ್ಲೇಖಿಸಿ ಹೇಳಿದರು.

ಇದನ್ನೂ ಓದಿ: 67th National Film Awards ceremony : 'ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ' ಸ್ವೀಕರಿಸಿದ ಸೂಪರ್ ಸ್ಟಾರ್ ರಜನಿಕಾಂತ್

'ವೆಬ್ ಸರಣಿಯ ಹೆಸರಿನಲ್ಲಿ, ಉದ್ದೇಶಪೂರ್ವಕವಾಗಿ ದೀರ್ಘಕಾಲ ಹಿಂದುತ್ವವನ್ನು ಗುರಿಯಾಗಿಸಲು ಪ್ರಯತ್ನಿಸಲಾಗುತ್ತಿದೆ.ಬಹುಸಂಖ್ಯಾತ ಸಮಾಜದ ಮನೋಭಾವವನ್ನು ಪರಿಗಣಿಸಿ, ಪ್ರಕಾಶ್ ಜಾ ತನ್ನ ವೆಬ್ ಹೆಸರನ್ನು ಬದಲಾಯಿಸಲು ಯೋಚಿಸಬೇಕು ಎಂದು ಹೇಳಿದರು. 

'ಆಶ್ರಮ-3 ಚಿತ್ರೀಕರಣದ ವಿವಾದದ ನಂತರ ನಾವು ಶಾಶ್ವತ ಮಾರ್ಗಸೂಚಿಯನ್ನು ನೀಡಲಿದ್ದೇವೆ.ಈಗ,(ನಿರ್ಮಾಪಕ-ನಿರ್ದೇಶಕರು) ಅವರು ಚಿತ್ರೀಕರಣಕ್ಕೆ ಹೋದರೆ ಅನುಮತಿ ಪಡೆಯುವ ಮೊದಲು ಕಥೆಯ ಸ್ಕ್ರಿಪ್ಟ್ ಅನ್ನು ಆಡಳಿತಕ್ಕೆ ತೋರಿಸಬೇಕಾಗುತ್ತದೆ."ಎಂದು ಮಿಶ್ರಾ ಹೇಳಿದ್ದಾರೆ.

'ಹಿಂದೂ ಧರ್ಮದ ಮೇಲೆ ಮಾತ್ರ ಜಾಹೀರಾತುಗಳು, ಚಲನಚಿತ್ರಗಳು ಏಕೆ?" ಇದನ್ನು ನಾವು ಬಲವಾಗಿ ವಿರೋಧಿಸುತ್ತೇವೆ, ನಿಮಗೆ ಧೈರ್ಯವಿದ್ದರೆ, ಇಂತಹ ಕೃತ್ಯಗಳನ್ನು ಇತರ ಧರ್ಮದವರೊಂದಿಗೆ ಇದನ್ನು ಮಾಡಿ" ಎಂದು ನರೋತ್ತಮ್ ಮಿಶ್ರಾ ಸುದ್ದಿಗಾರರಿಗೆ ತಿಳಿಸಿದರು.

ಇದನ್ನೂ ಓದಿ-Team Babar ವಿರುದ್ಧ Virat ಸಮರ, ಪಂದ್ಯದ ಮೇಲೆ ವಿಶ್ವದ ಕಣ್ಣು, ಯಾರ ವರಸೆ ಯಾರ ಮೇಲೆ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News