ಪ್ರಧಾನಿ ಮೋದಿ ಜಾಕೆಟ್ ಕೇವಲ 13 ಲಕ್ಷ ರೂಪಾಯಿಯಂತೆ : ರಮ್ಯಾ ವ್ಯಂಗ್ಯ

ಪ್ರಧಾನಿ ನರೇಂದ್ರ ಮೋದಿ ಅವರು ಚೀನಾ ಭೇಟಿ ಸಂದರ್ಭದಲ್ಲಿ ಧರಿಸಿದ್ದ ಜಾಕೆಟ್ ಬಗ್ಗೆ ಕಾಂಗ್ರೆಸ್ ಸಾಮಾಜಿಕ ಮಾಧ್ಯಮದ ಮುಖ್ಯಸ್ಥೆ  ರಮ್ಯಾ ವ್ಯಂಗ್ಯವಾಡಿದ್ದಾರೆ.

Last Updated : May 1, 2018, 02:14 PM IST
ಪ್ರಧಾನಿ ಮೋದಿ ಜಾಕೆಟ್ ಕೇವಲ 13 ಲಕ್ಷ ರೂಪಾಯಿಯಂತೆ : ರಮ್ಯಾ ವ್ಯಂಗ್ಯ title=

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಚೀನಾ ಭೇಟಿ ಸಂದರ್ಭದಲ್ಲಿ ಧರಿಸಿದ್ದ ಜಾಕೆಟ್ ಬಗ್ಗೆ ಕಾಂಗ್ರೆಸ್ ಸಾಮಾಜಿಕ ಮಾಧ್ಯಮದ ಮುಖ್ಯಸ್ಥೆ  ರಮ್ಯಾ ವ್ಯಂಗ್ಯವಾಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ರಮ್ಯಾ, ನರೇಂದ್ರ ಮೋದಿ ಅವರು ತುಂಬಾ ಫ್ಯಾನ್ಸಿ!, ಅವರು ಹಾಕೊಂಡಿರೋ ಜಾಕೆಟ್ ಕೇವಲ, 13 ಲಕ್ಷದ 63 ಸಾವಿರ ರೂಪಾಯಿಯಂತೆ! ಮೋದಿ ಅವರ ಈ ಜಾಕೆಟ್ ಖರೀದಿಗೆ ಯಾರ ಕ್ರೆಡಿಟ್ ಕಾರ್ಡ್ ಬಳಸಲಾಗಿದೆ ? ಎಂದು ರಮ್ಯಾ ಪ್ರಶ್ನಿಸಿದ್ದಾರೆ.

ಇತ್ತೀಚೆಗೆ ಚೀನಾ ಪ್ರವಾಸ ಕೈಗೊಂಡಿದ್ದ ಮೋದಿ ಅವರು, ಈ ಜಾಕೆಟ್ ಧರಿಸಿದ್ದರು.

Trending News