ನವದೆಹಲಿ : ಬಡವರಿಗೆ ಮತ್ತು ಕಡಿಮೆ ಆದಾಯದ ಗುಂಪಿಗೆ ಸೇರಿದ ಜನರಿಗೆ, ಪಡಿತರ ಚೀಟಿ ದೇಶದಲ್ಲಿ ಆಧಾರ್ ಕಾರ್ಡ್‌ನಷ್ಟೇ ಮುಖ್ಯವಾಗಿದೆ. ಪಡಿತರ ಚೀಟಿಯು ಕುಟುಂಬಕ್ಕೆ ಸಮರ್ಪಕವಾದ ಆಹಾರವನ್ನು ಪಡೆಯಲು ಸಹಾಯ ಮಾಡುತ್ತದೆ, ನಿಮಗೆ ಹೊಸ ಗ್ಯಾಸ್ ಸಂಪರ್ಕವನ್ನು ನೀಡುತ್ತದೆ ಮತ್ತು ಇತರ ಹಲವು ಸೇವೆಗಳನ್ನು ಪಡೆಯಲಿ ಇದೆಯೂ ಬೇಕೇ ಬೇಕು. ಇಂದಿನ ಸಮಯದಲ್ಲಿ, ಲಭ್ಯವಿರುವ ತಂತ್ರಜ್ಞಾನದಿಂದ ಸರ್ಕಾರದ ಎಲ್ಲ ಸೇವೆಗಳು ಆನ್ ಲೈನ್ ನಲ್ಲಿ ಸಿಗುತ್ತಿವೆ. ಪಡಿತರ ಚೀಟಿಗೆ ಸಂಬಂಧಿಸಿದಂತೆ ಕೆಲ ಸೇವೆಗಳನ್ನ ಸರ್ಕಾರ ಈಗ ಆನ್ ಲೈನ್ ನಲಿ ಸಿಗುವಂತೆ ಮಾಡಿದೆ.
ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ಅಭಿಯಾನ(Digital India campaign)ದ ಅಡಿಯಲ್ಲಿ ಈ ಎಲ್ಲ ಸೇವೆಗಳನ್ನ ಜಾರಿಗೆ ತರಲಾಗುತ್ತಿದೆ. ನಿಮ್ಮ ಪಡಿತರ ಚೀಟಿಯನ್ನು ನೀವು ಕಳೆದುಕೊಂಡರೆ ಅದಕ್ಕಾಗಿ ನಕಲು ಪ್ರತಿ ಪಡೆಯಲು ಅಥವಾ ಹೊಸದನ್ನು ಪಡೆಯಲು - ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರವೆಂದರೆ ಡಿಜಿಟಲ್ ಇಂಡಿಯಾ ಅಭಿಯಾನ.
ಇದನ್ನೂ ಓದಿ : PM Kisan Credit Card : SBI ಮೂಲಕ 'ಕಿಸಾನ್ ಕ್ರೆಡಿಟ್ ಕಾರ್ಡ್'ಗೆ ಈ ರೀತಿ ಅರ್ಜಿ ಸಲ್ಲಿಸಿ
ಡಿಜಿಟಲ್ ಇಂಡಿಯಾ ತನ್ನ ಧಿಕೃತ ಟ್ವಿಟರ್‌ನಲ್ಲಿ ಈ ಕುರಿತು ಮಾಹಿತಿ ನೀಡಿದ್ದು, ಈಗ ನೀವು ನಿಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರ(Common Service Center) ಮೂಲಕ ಪಡಿತರ ಚೀಟಿಗೆ ಸಂಬಂಧಿಸಿದ ಅನೇಕ ಸೇವೆಗಳನ್ನು ಪಡೆಯಬಹುದು. "ಸಾಮಾನ್ಯ ಸೇವಾ ಕೇಂದ್ರ ಸುವಿಧಾ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯೊಂದಿಗೆ ಒಂದು ಎಂಒಯುಗೆ ಸಹಿ ಹಾಕಿದೆ. ಇದರೊಂದಿಗೆ ದೇಶಾದ್ಯಂತ 3.70 ಲಕ್ಷ ಸಿಎಸ್ಸಿಗಳ ಮೂಲಕ ಪಡಿತರ ಚೀಟಿ ಸೇವೆಗಳು ಲಭ್ಯವಾಗಲಿವೆ. ಈ ಪಾಲುದಾರಿಕೆ ದೇಶಾದ್ಯಂತ 23.64 ಕೋಟಿಗೂ ಹೆಚ್ಚು ಪಡಿತರ ಚೀಟಿದಾರರಿಗೆ ಲಾಭವಾಗುವ ನಿರೀಕ್ಷೆಯಿದೆ.
.@CSCegov_, under the @GoI_MeitY has signed a MoU with the @fooddeptgoi to enable ration card services through 3.70 Lakh CSCs across the country. The partnership is expected to benefit over 23.64 crore ration card holders across the country. pic.twitter.com/OIbutQClC3
— Digital India (@_DigitalIndia) September 16, 2021
ಈ ಅಭಿಯಾನದ ಅಡಿಯಲ್ಲಿ, ದೇಶಾದ್ಯಂತ 23.64 ಕೋಟಿಗೂ ಹೆಚ್ಚು ಪಡಿತರ ಚೀಟಿ(Ration Card) ಹೊಂದಿರುವವರು ಸಾಮಾನ್ಯ ಸೇವಾ ಕೇಂದ್ರದ ಮೂಲಕ ಪಡಿತರ ಚೀಟಿಯ ಅನೇಕ ಸೇವೆಗಳ ಲಾಭವನ್ನು ಪಡೆಯಬಹುದು.
ಇದನ್ನೂ ಓದಿ : Chief Ministers Salary in India: ದೇಶದ ಯಾವ ರಾಜ್ಯದ ಮುಖ್ಯಮಂತ್ರಿ ವೇತನ ಎಷ್ಟು? ಕರ್ನಾಟಕದ ಮುಖ್ಯಮಂತ್ರಿಗಳ ವೇತನ?
ಪ್ರಮುಖ ಸೇವೆಗಳನ್ನು ನೀವು ಹೇಗೆ ಪಡೆಯಬಹುದು:
- ಪಡಿತರ ಚೀಟಿ ವಿವರಗಳನ್ನು ಸಾಮಾನ್ಯ ಸೇವಾ ಕೇಂದ್ರದ ಮೂಲಕ ನವೀಕರಿಸಬಹುದು.- ಆಧಾರ್ ಸೀಡಿಂಗ್(Aadhar seeding) ಅನ್ನು ಇಲ್ಲಿಂದಲೂ ಮಾಡಬಹುದು.- ನಿಮ್ಮ ಪಡಿತರ ಚೀಟಿಯ ನಕಲು ಮುದ್ರಣವನ್ನು ಸಹ ನೀವು ಪಡೆಯಬಹುದು. ಸಾಮಾನ್ಯ ಸೇವಾ ಕೇಂದ್ರದ ಮೂಲಕ ಪಡಿತರ ಚೀಟಿಗೆ ಸಂಬಂಧಿಸಿದ ದೂರುಗಳನ್ನು ಸಹ ಮಾಡಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ