ಬಡ್ಡಿದರ ಹಾಗೂ ರೆಪೋ ದರಗಳಲ್ಲಿ ಯಥಾಸ್ಥಿತಿ ಕಾಯ್ದಿರಿಸಿದ RBI

ಆರ್ಥಿಕ ನೀತಿ ಪರೀಶಿಲನೆಯ ವೇಳೆ ಬಡ್ಡಿದರ, ರೆಪೋದರ ಹಾಗೂ ರಿವರ್ಸ್ ರೆಪೋದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ನಿರ್ಧರಿಸಿದ ಭಾರತೀಯ ರಿಸರ್ವ್ ಬ್ಯಾಂಕ್.

Last Updated : Dec 5, 2019, 01:08 PM IST
ಬಡ್ಡಿದರ ಹಾಗೂ ರೆಪೋ ದರಗಳಲ್ಲಿ ಯಥಾಸ್ಥಿತಿ ಕಾಯ್ದಿರಿಸಿದ RBI title=

ನವದೆಹಲಿ: ಜನರ ನೀರೀಕ್ಷೆಗೆ ವಿರುದ್ಧವಾಗಿ  ಗುರುವಾರ ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಹಣಕಾಸು ನೀತಿಯನ್ನು ಪ್ರಕಟಿಸಿದ್ದು, ಬಡ್ಡಿದರ, ರೆಪೋದರ ಹಾಗೂ ರಿವರ್ಸ್ ರೆಪೋದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ನಿರ್ಧರಿಸಿದೆ.

ದೇಶದ ಆರ್ಥಿಕ ಸ್ಥಿತಿಯನ್ನು ಪರಿಶೀಲಿಸಲು ಮತ್ತು ಹೆಣಗಾಡುತ್ತಿರುವ ಆರ್ಥಿಕತೆಗೆ ಜೀವತುಂಬಿಸಲು  ಕ್ರಮಗಳನ್ನು ಸೂಚಿಸಲು ಕೇಂದ್ರೀಯ ಬ್ಯಾಂಕ್ ತನ್ನ ಆರ್ಥಿಕ ನೀತಿ ಸಮೀತಿ(MPC) ಸಭೆ ಕರೆದಿತ್ತು. ಈ ಸಭೆಯಲ್ಲಿ ಕುಸಿಯುತ್ತಿರುವ ಜಿಡಿಪಿ ಬೆಳವಣಿಗೆಯ ದರ ಹಾಗೂ ನಿಧಾನಗತಿಯ ಆರ್ಥಿಕತೆಯ ಬಗ್ಗೆ ಕಳವಳ ವ್ಯಕ್ತವಾದರೂ ಕೂಡ ಸಮೀತಿಯ ಯಾವೊಬ್ಬ ಸದಸ್ಯ ಕೂಡ ದರ ಕಡಿತದ ಪರವಾಗಿ ತಮ್ಮ ಅಭಿಮತ ವ್ಯಕ್ತಪಡಿಸಿಲ್ಲ ಎನ್ನಲಾಗಿದೆ. MPC ತೆಗೆದುಕೊಂಡ ನಿರ್ಧಾರದ ಪ್ರಕಾರ ರೆಪೋದರವನ್ನು ಶೇ.5.15ಕ್ಕೆ ಹಾಗೂ ರಿವರ್ಸ್ ರೆಪೋದರವನ್ನು ಶೇ.4.90ಕ್ಕೆ ಕಾಯ್ದಿರಿಸಲಾಗಿದ್ದು, ಅಗ್ಗದ ಸಾಲಗಳ ನಿರೀಕ್ಷೆ ಹೊಂದಿದವರಿಗೆ ಭಾರಿ ಪೆಟ್ಟು ಬಿದ್ದಿದೆ.

ಕಳೆದ ಅಕ್ಟೋಬರ್ ತಿಂಗಳ ಆರಂಭದಲ್ಲಿ RBI ತನ್ನ ಬಡ್ಡಿದರಗಳಲ್ಲಿ 25 ಬೇಸಿಸ್ ಪಾಯಿಂಟ್ ಗಳನ್ನು ಕಡಿತಗೊಳಿಸಿತ್ತು.  ಅಲ್ಲದೆ ಸತತ ಐದನೇ ಬಾರಿಗೆ ತನ್ನ ಬಡ್ಡಿದರವನ್ನು ಶೇ. 5.15ಕ್ಕೆ ಇಳಿಸಿತ್ತು. ಇದೇ ವೇಳೆ 2019-20ರ ವಿತ್ತೀಯ ವರ್ಷದಲ್ಲಿ ದೇಶದ ಆರ್ಥಿಕ ಪರಿಸ್ಥಿತಿಯ ಕುರಿತು ಆತಂಕ ವ್ಯಕ್ತಪಡಿಸಿದ್ದ RBI, ಈ ವರ್ಷದಲ್ಲಿ ದೇಶದ ಆರ್ಥಿಕತೆ ಶೇ.6.9 ರಿಂದ ಶೇ.6.1ಕ್ಕೆ ಕುಸಿಯಲಿದೆ ಎಂಬ ಸಂಕೇತವನ್ನೂ ಸಹ ನೀಡಿತ್ತು.
ಅಕ್ಟೋಬರ್ ನಲ್ಲಿ ರಿವರ್ಸ್ ರೆಪೊ ದರವನ್ನು ಶೇ.4.90 ಕ್ಕೆ ಇಳಿಸಲಾಗಿತ್ತು. ಅದನ್ನೂ ಕೂಡ ಹಣಕಾಸು ನೀತಿ ಸಮಿತಿ ಈ ಬಾರಿ ಕಾಯ್ದಿರಿಸಿದೆ. ಕಳೆದ ಬಾರಿ RBI ತನ್ನ ಮಾರ್ಜಿನಲ್ ಸ್ಟ್ಯಾಂಡಿಂಗ್ ಫೆಸಿಲಿಟಿ (ಎಂಎಸ್‌ಎಫ್) ದರ ಮತ್ತು ಬ್ಯಾಂಕ್ ದರವನ್ನು ಸಹ ಶೇ 5.40ಕ್ಕೆ ಏರಿಸಿತ್ತು.

Trending News