ಮಹಾರಾಷ್ಟ್ರದಲ್ಲಿ ರಾತ್ರೋರಾತ್ರಿ ರಾಷ್ಟ್ರಪತಿ ಆಡಳಿತ ಹಿಂದಕ್ಕೆ; ಪ್ರತಿಪಕ್ಷಗಳ ಟೀಕೆ!

ಬಿಜೆಪಿಯೊಂದಿಗಿದ್ದರೆ ಅಪವಿತ್ರ ಪವಿತ್ರವಾಗುತ್ತದೆ. ಸ್ವಾಯತ್ತ ಸಂಸ್ಥೆಗಳು+ಬಿಜೆಪಿ =ಸರ್ಕಾರ

Last Updated : Nov 23, 2019, 12:43 PM IST
ಮಹಾರಾಷ್ಟ್ರದಲ್ಲಿ ರಾತ್ರೋರಾತ್ರಿ ರಾಷ್ಟ್ರಪತಿ ಆಡಳಿತ ಹಿಂದಕ್ಕೆ; ಪ್ರತಿಪಕ್ಷಗಳ ಟೀಕೆ! title=

ನವದೆಹಲಿ:  ಮಹಾರಾಷ್ಟ್ರದಲ್ಲಿ ರಾಜಕೀಯ ಅನಿಶ್ಚಿತತೆಯ ನಡುವೆ 10 ದಿನಗಳ ಹಿಂದೆಯಷ್ಟೇ ಹೇರಿಕೆಯಾಗಿದ್ದ ರಾಷ್ಟ್ರಪತಿ ಆಳ್ವಿಕೆಯನ್ನು ಇಂದು ಬೆಳಿಗ್ಗೆ(ನವೆಂಬರ್ 23) 05:47ಕ್ಕೆ ಹಿಂಪಡೆಯಲಾಗಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಈ ಬಗ್ಗೆ ಗೃಹ ಸಚಿವಾಲಯಕ್ಕೆ ಅಧಿಸೂಚನೆ ಹೊರಡಿಸಿದ್ದು, ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದ್ದಾರೆ. 

ಈ ಸಂಬಂಧ ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿ ಅಜಯ್ ಕುಮಾರ್ ಬಳ್ಳಾ ಇಂದು ಬೆಳಿಗ್ಗೆ 5:47ಕ್ಕೆ ಅಧಿಸೂಚನೆ ಹೊರಡಿಸಿದ್ದಾರೆ. 

ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿ ಬಿಜೆಪಿ-NCP ಮೈತ್ರಿ ಸರ್ಕಾರ ರಚನೆಯಾಗಿದ್ದು, ದೇವೇಂದ್ರ ಫಡ್ನವೀಸ್ ಸತತ ಎರಡನೇ ಬಾರಿಗೆ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. NCP ನಾಯಕ ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

ಮಹಾರಾಷ್ಟ್ರದ ಈ ರಾಜಕೀಯ ಬೆಳವಣಿಗೆ ಕುರಿತಂತೆ ಪ್ರತಿಪಕ್ಷಗಳು ಟೀಕಾಪ್ರಹಾರ ನಡೆಸಿವೆ.

ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ವಕ್ತಾರ ರಂದೀಪ್ ಸಿಂಗ್ ಸುರ್ಜೆವಾಲ, ಬಿಜೆಪಿ ದೇಶದ ಪ್ರಜಾಪ್ರಭುತ್ವದ ಸುಪಾರಿ ತೆಗೆದುಕೊಂಡಿದೆ ಎಂಬುದು ಈಗ ಸಾಬೀತಾಗಿದೆ. ರಾಜ್ಯಪಾಲರು ಶಾ ಅವರ 'ಹಿಟ್ಮ್ಯಾನ್' ಎಂದು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

1. ರಾಷ್ಟ್ರಪತಿ ಆಡಳಿತವನ್ನು ಯಾವಾಗ ತೆಗೆದುಹಾಕಲಾಯಿತು?
2. ಹಕ್ಕು ರಾತ್ರಿಯಿಡೀ ಯಾವಾಗ ಮಂಡಿಸಲ್ಪಟ್ಟಿತು?
3. ಶಾಸಕರ ಪಟ್ಟಿಯನ್ನು ಯಾವಾಗ ಮಂಡಿಸಲಾಯಿತು?
4. ಶಾಸಕರು ಯಾವಾಗ ರಾಜ್ಯಪಾಲರ ಮುಂದೆ ಹಾಜರಾದರು?
5. ಅವರು ಕಳ್ಳರಂತೆ ಏಕೆ ಪ್ರಮಾಣ ವಚನ ಸ್ವೀಕರಿಸಿದರು? ಎಂದು ಪ್ರಶ್ನೆಗಳ ಸುರಿಮಳೆ ಗೈದಿದ್ದಾರೆ.

ಕರ್ನಾಟಕ ಕಾಂಗ್ರೆಸ್ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದು, ಬಿಜೆಪಿಯೊಂದಿಗಿದ್ದರೆ ಅಪವಿತ್ರ ಪವಿತ್ರವಾಗುತ್ತದೆ. ಅತ್ಯಂತ ಗೌಪ್ಯವಾಗಿ ಮಧ್ಯರಾತ್ರಿಯಲ್ಲೂ ರಾಷ್ಟ್ರಪತಿ ಆಳ್ವಿಕೆ ಹಿಂಪಡೆಯಲಾಗುತ್ತದೆ. ರಾಜಭವನವು ಬಿಜೆಪಿಗಾಗಿ ರಾತ್ರಿಯೆಲ್ಲಾ ಕೆಸಲ ಮಾಡುತ್ತದೆ. ರಾತ್ರೋರಾತ್ರಿ ಸಮೀಕರಣಗಳು ಬದಲಾಗಿ ಶಾಸಕರು ಪಕ್ಷಗಳು ತಮ್ಮ ನಿಲುವನ್ನು ಬದಲಾಯಿಸುತ್ತಾರೆ.
ಸ್ವಾಯತ್ತ ಸಂಸ್ಥೆಗಳು+ಬಿಜೆಪಿ =ಸರ್ಕಾರ ಎಂದು ಬರೆದಿದೆ.

ಶಿವಸೇನೆ ವಕ್ತಾರ ಸಂಜಯ್ ರೌತ್ ಮಹಾರಾಷ್ಟ್ರದಲ್ಲಿ ಬಿಜೆಪಿ-NCP ಸರ್ಕಾರ ರಚನೆ ಬಗ್ಗೆ ತೀವ್ರ ವಾಗ್ಧಾಳಿ ನಡೆಸಿದ್ದು, ಅಜಿತ್ ಪವಾರ್ ರಾಜ್ಯದ ಜನತೆ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ಹೇಳಿದರು.

Trending News