ದೆಹಲಿಯಲ್ಲಿ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಲು ರೋಡ್ ಶೋ

    

Last Updated : Dec 11, 2017, 04:20 PM IST
  • 'ಉತ್ತರ ಪ್ರದೇಶ ಬಂಡವಾಳ ಹೂಡಿಕೆದಾರ ಸಮಾವೇಶ -2018 ರೋಡ್ ಶೋ' ಕಾರ್ಯಕ್ರಮಕ್ಕೆ ಉತ್ತರ ಪ್ರದೇಶದ ಕೈಗಾರಿಕಾ ಸಚಿವ ಸತೀಶ ಮಹಾನಾರವರು ಚಾಲನೆ ನೀಡಿದರು.
  • ಡಿಸೆಂಬರ್ 18, 2017, ಉತ್ತರ ಪ್ರದೇಶ ಸರ್ಕಾರದ ವತಿಯಿಂದ ರಸ್ತೆ ಪ್ರದರ್ಶನ ಕಾರ್ಯಕ್ರಮವು ಬೆಂಗಳೂರಿನಲ್ಲಿ ನಡೆಯಲಿದೆ.
  • ಉತ್ತರ ಪ್ರದೇಶ ಹೂಡಿಕೆ ಶೃಂಗಸಭೆ ಫೆಬ್ರವರಿ 21 ಮತ್ತು 22 ರಂದು ಲಕ್ನೋದಲ್ಲಿ ನಡೆಯಲಿದೆ.
ದೆಹಲಿಯಲ್ಲಿ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಲು ರೋಡ್ ಶೋ title=

ನವದೆಹಲಿ: ಇಲ್ಲಿನ ತಾಜ್ ಮಹಲ್ ಹೋಟೆಲ್ ನಡೆದ 'ಉತ್ತರ ಪ್ರದೇಶ ಬಂಡವಾಳ ಹೂಡಿಕೆದಾರ ಸಮಾವೇಶ -2018  ರೋಡ್ ಶೋ' ಕಾರ್ಯಕ್ರಮಕ್ಕೆ  ಉತ್ತರ ಪ್ರದೇಶದ ಕೈಗಾರಿಕಾ ಸಚಿವ  ಸತೀಶ ಮಹಾನಾರವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು  ಸರ್ಕಾರವು  ಕೈಗಾರಿಕಾ ಹೂಡಿಕೆ, ಉದ್ಯೋಗದಲ್ಲಿ ಬಡ್ತಿ 2017 ಎನ್ನುವ ಕಾಯ್ದೆ ಮೂಲಕ ಹೂಡಿಕೆಗೆ ಪೂರಕವಾಗುವ ವಾತಾವರಣವನ್ನು ಸರ್ಕಾರ ಕಲ್ಪಿಸುತ್ತಿದೆ. ಅಲ್ಲದೆ ರಾಜ್ಯದಲ್ಲಿ ಕ್ರಿಮಿನಲ್ ಪ್ರಕರಣಗಳನ್ನು ಹತೋಟಿಗೆ ತರುವ ಮೂಲಕ ಬಂಡವಾಳ ಹೂಡಿಕೆದಾರರಿಗೆ ಅನುಕೂಲ ಕಲ್ಪಿಸಲಾಗುತ್ತದೆ ಎಂದರು. 

ಇದೆ ಸಂದರ್ಭದಲ್ಲಿ ಈ ಸಮಾವೇಶದ ಅಜೆಂಡಾಗಳ ಕುರಿತು ಮಾತನಾಡಿದ  ಸೋಮಾಣಿ ಸೆರಾಮಿಕ್ಸ್ ಅಧ್ಯಕ್ಷರು ಮತ್ತು ಕಾರ್ಯನಿರ್ದೇಶಕರಾದ  ಶ್ರೀಕಾಂತ ಸೋಮಾನಿವರು  ಭವಿಷ್ಯದಲ್ಲಿ  ಉತ್ತರ ಪ್ರದೇಶ ದಲ್ಲಿನ ಕೈಗಾರಿಕಾ ರೂಪುರೇಷೆಗಳ ಬಗ್ಗೆ ಮಾತನಾಡಿದರು.

ಕಾರ್ಯಕ್ರಮದಲ್ಲಿ  ಪ್ರಮುಖವಾಗಿ ನೆದರ್ಲ್ಯಾಂಡ್ ನ ರಾಯಭಾರಿ ಸ್ಟೀಯೋಲಿಂಗ, ಆರ್ ಸಿ ಭಾರ್ಗವಾ, ಸಮೀರ್ ಗುಪ್ತಾ ರಜನೀಶ್ ಕುಮಾರು ಮುಂತಾದ ವಿವಿಧ ಕಂಪನಿಗಳ 350ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು.   

ನಿರ್ದಿಷ್ಟವಾಗಿ ಹೇಳುವುದಾದರೆ, ಅಪರಾಧವನ್ನು ಪರಿಸರಕ್ಕೆ ಹಾನಿಕಾರಕವಾಗದಂತೆ ತಡೆಯಲು ಯುಪಿಎ ಪ್ರದೇಶಗಳು ಕ್ರಮಗಳನ್ನು ಕೈಗೊಂಡಿದೆ. ಉತ್ತರ ಪ್ರದೇಶ ಹೂಡಿಕೆ ಶೃಂಗಸಭೆ ಫೆಬ್ರವರಿ 21 ಮತ್ತು 22 ರಂದು ಲಕ್ನೋದಲ್ಲಿ ನಡೆಯಲಿದೆ.

ಡಿಸೆಂಬರ್ 18, 2017, ಉತ್ತರ ಪ್ರದೇಶ ಸರ್ಕಾರ ಮುಂದಿನ ರಸ್ತೆ ಪ್ರದರ್ಶನಗಳ ಕಾರ್ಯಕ್ರಮವು ಬೆಂಗಳೂರಿನಲ್ಲಿ ನಡೆಯಲಿದ್ದು, ಹೈದರಾಬಾದ್, ಅಹಮದಾಬಾದ್, ಮುಂಬೈ ಮತ್ತು ಕೊಲ್ಕತ್ತಾದಲ್ಲಿ ಇದೇ ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿ ಆಯೋಜಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

Trending News