Russia-Ukraine Crisis: ಬನ್ನಿ.. ನಮ್ಮನ್ನು ರಕ್ಷಿಸಿ ಎಂದಿದ್ದ‘ಜಾಗ್ವಾರ್’ ಕುಮಾರ್ ಈಗ ಬರೋಲ್ಲ ಅಂತಿದ್ದಾನೆ!

ಉಕ್ರೇನ್ ನಲ್ಲಿ ಸದ್ಯದ ಪರಿಸ್ಥಿತಿ ಸರಿಯಿಲ್ಲ, ಎಲ್ಲರೂ ಉಕ್ರೇನ್ ಬಿಟ್ಟು ಹೊರಡಿ. ನಡೆದುಕೊಂಡಾದರೂ ಈ ದೇಶವನ್ನು ಬಿಟ್ಟು ಹೋಗಿ ಅಂತಾ ಜಾಗ್ವಾರ್‌ ಕುಮಾರ ಮನವಿ ಮಾಡಿಕೊಂಡಿದ್ದ.

Written by - Zee Kannada News Desk | Last Updated : Mar 8, 2022, 03:32 PM IST
  • ‘ಬೆಕ್ಕಿಗೆ ಆಟ ಇಲಿಗೆ ಪ್ರಾಣ ಸಂಕಟ’ ಅಂತಾರಲ್ಲ ಹಾಗಾಗಿದೆ ಜಾಗ್ವಾರ್‌ ಕುಮಾರನ ಕಥೆ
  • ಜಾಗ್ವಾರ್ ಕುಮಾರನನ್ನು ಕರೆತರಲು ಭಾರತ ಸರ್ಕಾರ ಸಕಲ ಸಿದ್ಧತೆ ಮಾಡಿಕೊಂಡಿದೆ
  • ನಮ್ಮನ್ನು ರಕ್ಷಿಸಿ ಎಂದು ಕೇಳಿಕೊಳ್ಳುತ್ತಿದ್ದ ಜಾಗ್ವಾರ್ ಕುಮಾರ್ ಈಗ ಬರುವುದಿಲ್ಲವೆಂದು ಹೇಳುತ್ತಿದ್ದಾನೆ
Russia-Ukraine Crisis: ಬನ್ನಿ.. ನಮ್ಮನ್ನು ರಕ್ಷಿಸಿ ಎಂದಿದ್ದ‘ಜಾಗ್ವಾರ್’ ಕುಮಾರ್ ಈಗ ಬರೋಲ್ಲ ಅಂತಿದ್ದಾನೆ! title=
ಭಾರತಕ್ಕೆ ಬರುವುದಿಲ್ಲವೆಂದು ಹೇಳುತ್ತಿರುವ ಜಾಗ್ವಾರ್ ಕುಮಾರ್

ನವದೆಹಲಿ: ಭಾರತ ಸರ್ಕಾರ ಏನ್‌ ಮಾಡುತ್ತಿದೆ? ಕೂಡಲೇ ನಮ್ಮನ್ನು ಬಚಾವ್‌ ಮಾಡೋದಕ್ಕೆ ಬನ್ನಿ ಎಂದು ವಿಡಿಯೋ ಮಾಡಿದ್ದ, ಇಲ್ಲಿನ ಪರಿಸ್ಥಿತಿ ಸರಿ ಇಲ್ಲ. ಎಲ್ಲರೂ ಉಕ್ರೇನ್‌ ಬಿಟ್ಟು ಹೋಗಿ ಎಂದು ಹೇಳುತ್ತಿದ್ದ ಜಾಗ್ವಾರ್‌ ಕುಮಾರ್‌(Jaguar Kumar) ಈಗ ಮರಳಿ ಭಾರತಕ್ಕೆ ಬರುವುದಿಲ್ಲವೆಂದು ಹೇಳುತ್ತಿದ್ದಾನೆ. ಏನಿದು ವಿಪರ್ಯಾಸ..? ‘ಬೆಕ್ಕಿಗೆ ಆಟ ಇಲಿಗೆ ಪ್ರಾಣ ಸಂಕಟ’ ಅಂತಾರಲ್ಲ ಹಾಗಾಯ್ತು ಈ ಜಾಗ್ವಾರ್‌ ಕುಮಾರನ ಕಥೆ.

‘Jaguar Kumar Telugu’ ಎಂಬ ಯೂಟ್ಯೂಬ್‌ ಚಾನೆಲ್‌ ಹೊಂದಿರುವ ಡಾ.ಕುಮಾರ್‌ ಬಂಧಿ ಈಗ ಉಕ್ರೇನ್‌ ಬಿಟ್ಟು ಬರೋದಿಲ್ಲವೆಂದು ಹೇಳುತ್ತಿದ್ದಾನೆ. MBBS ಓದಲು ತೆಲಂಗಾಣದಿಂದ ಉಕ್ರೇನ್ ಗೆ ಹೋದ ಈತ ಅಲ್ಲಿಯೇ ಠೀಕಾಣಿ ಹೂಡಿದ್ದಾನೆ. ಸಾಲದ್ದಕ್ಕೆ ಪ್ರಾಣಿಪ್ರಿಯ ಕುಮಾರ್ ಕೆಲವು ಪ್ರಾಣಿಗಳನ್ನು ಸಾಕುತ್ತಿದ್ದಾನೆ. ಉಕ್ರೇನ್ ಮೇಲೆ ರಷ್ಯಾ ಯಾವಾಗ ದಾಳಿ(Russia-Ukraine War) ಪ್ರಾರಂಭಿಸಿತೋ ಅಂದಿನಿಂದಲೇ ನನ್ನನ್ನು ರಕ್ಷಿಸಿ… ರಕ್ಷಿಸಿ ಎನ್ನುತ್ತಿದ್ದ ಡಾ.ಕುಮಾರ್ ಪ್ರತಿದಿನ ವಿಡಿಯೋ ಮಾಡಿ ತನ್ನ ಯೂಟ್ಯೂಬ್ ಚಾನಲ್ ನಲ್ಲಿ ಹಂಚಿಕೊಳ್ಳುತ್ತಿದ್ದ.

ಇದನ್ನೂ ಓದಿ: ಪ್ರಿಯಕರನೊಂದಿಗೆ ತಮಿಳುನಾಡಿನ ಮಂತ್ರಿ ಮಗಳು ಎಸ್ಕೇಪ್; ಕರ್ನಾಟಕದಲ್ಲಿ ಮದುವೆ..!

ನನ್ನ ಜೊತೆಗೆ ನನ್ನ ಪ್ರಾಣಿಗಳನ್ನು ರಕ್ಷಿಸಬೇಕು ಅಂತಾ ಮನವಿ ಮಾಡಿಕೊಂಡಿದ್ದ. ನನ್ನ ಪ್ರಾಣಿಗಳನ್ನು ಬಿಟ್ಟು ನಾನು ಬರೋದಿಲ್ಲ. ಭಾರತೀಯ ರಾಯಭಾರಿ ಕಚೇರಿ ಜೊತೆ ಮಾತನಾಡುತ್ತೇನೆ. ನನ್ನ ಪ್ರಾಣಿಗಳನ್ನು ಜೊತೆಗೆ ಕರೆದುಕೊಂಡು ಬರುತ್ತೇನೆ. ನನ್ನ ಪ್ರಾಣಿಗಳನ್ನು ರಕ್ಷಿಸದಿದ್ದರೆ ಇಲ್ಲೇ ಸಾಯುತ್ತೇನೆ ಅಂತೆಲ್ಲಾ ಹೇಳಿದ್ದ. ಜಾಗ್ವಾರ್ ಕುಮಾರ್(Jaguar Kumar) ತನ್ನ ಯೂಟ್ಯೂಬ್ ಚಾನೆಲ್ ಮೂಲಕ ಪ್ರತಿದಿನ ಯುದ್ಧದ ಅಪ್ಡೇಟ್ ಕೊಡುತ್ತಿದ್ದ. ಯುದ್ಧಪೀಡಿತ ಉಕ್ರೇನ್ ನಲ್ಲಿ ಪರಿಸ್ಥಿತಿ ತುಂಬಾ ಹದಗೆಟ್ಟಿದೆ, ಯಾವಾಗ ಏನು ಆಗುತ್ತೋ ಅನ್ನೋ ಭಯ ನಮ್ಮನ್ನು ಕಾಡುತ್ತಿದೆ. ನಾನು ಸಾವನ್ನಪ್ಪಿದರೂ ಪರವಾಗಿಲ್ಲ. ನಾನು ಪ್ರೀತಿಯಿಂದ ಸಾಕಿದ ಪ್ರಾಣಿಗಳು ಸಾಯಬಾರದು. ದಯವಿಟ್ಟು ರಕ್ಷಿಸಿ ಅಂತಾ ಹೇಳಿಕೊಂಡಿದ್ದ.

ಉಕ್ರೇನ್ ನಲ್ಲಿ ಸದ್ಯದ ಪರಿಸ್ಥಿತಿ ಸರಿಯಿಲ್ಲ. ಎಲ್ಲರೂ ಉಕ್ರೇನ್(Ukraine) ಬಿಟ್ಟು ಹೊರಡಿ. ನಡೆದುಕೊಂಡಾದರೂ ಈ ದೇಶವನ್ನು ಬಿಟ್ಟು ಹೋಗಿ ಅಂತಾ ಮನವಿ ಮಾಡಿಕೊಂಡಿದ್ದ. ಒಟ್ನಲ್ಲಿ ಈ ಜಾಗ್ವಾರ್ ಕುಮಾರ್ ಕಥೆ ‘ಕುಣಿಯೋಕೆ ಬಾರದವರು ನೆಲ ಡೊಂಕು’ ಅಂದಂತಾಗಿದೆ. ಭಾರತ ಸರ್ಕಾರ ಆತನನ್ನು ಕರೆತರಲು ಸಕಲ ವ್ಯವಸ್ಥೆ ಮಾಡಿದರೂ ತಾನು ಉಕ್ರೇನ್ ಬಿಟ್ಟು ಬರುವುದಿಲ್ಲವೆಂದು ಹೇಳುತ್ತಿರುವ ಜಾಗ್ವಾರ್ ಕುಮಾರನಿಗೆ ಏನು ಹೇಳಬೇಕೋ ತಿಳಿಯದಾಗಿದೆ.  

ಇದನ್ನೂ ಓದಿ: CNG Price Hike: ಪೆಟ್ರೋಲ್‌ಗಿಂತ ಮೊದಲು ಸಿಎನ್‌ಜಿ ದರ ಏರಿಕೆ, ನಾಳೆಯಿಂದ ಮತ್ತಷ್ಟು ದುಬಾರಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News