ಇಂತಹ SMSಗಳಿಂದ ಜಾಗರೂಕರಾಗಿರುವಂತೆ ತನ್ನ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ SBI

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಖಾತೆದಾರರಿಗೆ ಸಂದೇಶ ಕಳುಹಿಸುವ ಮೂಲಕ ಎಚ್ಚರಿಸಿದೆ.

Last Updated : May 5, 2020, 04:21 PM IST
ಇಂತಹ SMSಗಳಿಂದ ಜಾಗರೂಕರಾಗಿರುವಂತೆ ತನ್ನ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ SBI  title=

ನವದೆಹಲಿ: ಕೊರೊನಾವೈರಸ್ ಕಾರಣದಿಂದಾಗಿ ದೇಶಾದ್ಯಂತ ಲಾಕ್‌ಡೌನ್ ಜಾರಿಯಲ್ಲಿದೆ. ಲಾಕ್‌ಡೌನ್ ಕಾರಣ ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚಾಗಿ ಮೊಬೈಲ್ ಬ್ಯಾಂಕಿಂಗ್ ಬಳಸುತ್ತಿದ್ದಾರೆ. ದೇಶದ ಅತಿದೊಡ್ಡ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಖಾತೆದಾರರಿಗೆ ಸಂದೇಶ ಕಳುಹಿಸುವ ಮೂಲಕ ಎಚ್ಚರಿಸಿದೆ. ಬ್ಯಾಂಕ್ ನೀಡಿದ ಮಾಹಿತಿಯ ಪ್ರಕಾರ ವಂಚಕರು ಆದಾಯ ತೆರಿಗೆ ಮರುಪಾವತಿಯ ಸಂದೇಶವನ್ನು ಕಳುಹಿಸುವ ಮೂಲಕ ಮೋಸ ಮಾಡಲು ಪ್ರಯತ್ನಿಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಗ್ರಾಹಕರನ್ನು ಎಚ್ಚರಿಸಿರುವ ಎಸ್‌ಬಿಐ ಆದಾಯ ತೆರಿಗೆ ಇಲಾಖೆ ಹೆಸರಿನಿಂದ ನಿಮ್ಮ ಆದಾಯ ತೆರಿಗೆ ಮರುಪಾವತಿಗಾಗಿ ಈ ಪ್ರಕ್ರಿಯೆಯನ್ನು ಅನುಸರಿಸಿ ಎಂಬ ಸಂದೇಶವನ್ನು ಸ್ವೀಕರಿಸಿದರೆ ಅಂತಹ ಸಂದೇಶಗಳ ಮೇಲೆ ಗಮನ ಹರಿಸಬೇಡಿ ಎಂದು ಟ್ವೀಟ್ ಮಾಡುವ ಮೂಲಕ ಗ್ರಾಹಕರಿಗೆ ಮಾಹಿತಿ ನೀಡಿದೆ.

ಇಂತಹ ಸಂದೇಶಗಳಲ್ಲಿ ಕಳುಹಿಸಲಾಗುವ ಅನುಮಾನಾಸ್ಪದ  ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ ಅಥವಾ ಯಾವುದೇ ವೈಯಕ್ತಿಕ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ ಎಂದು ಎಸ್‌ಬಿಐ ಗ್ರಾಹಕರನ್ನು ಕೇಳಿದೆ.

ಆದಾಯ ತೆರಿಗೆ ಇಲಾಖೆಯಿಂದಲೂ ಎಚ್ಚರಿಕೆ:
ನಕಲಿ ಲಿಂಕ್ ಅನ್ನು ಕ್ಲಿಕ್ ಮಾಡುವುದರ ಮೂಲಕ ತ್ವರಿತ ಮರುಪಾವತಿ ಪಡೆಯುವ ಬಲೆಗೆ ಇಳಿಯದಂತೆ ತೆರಿಗೆ ಪಾವತಿದಾರರಿಗೆ ಆದಾಯ ತೆರಿಗೆ ಇಲಾಖೆ ಮತ್ತು  ಕೇಂದ್ರ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ (ಸಿಬಿಐಸಿ) ಎಚ್ಚರಿಕೆ ನೀಡಿವೆ. ಲಾಕ್ ಡೌನ್ ಕಷ್ಟದ ಸಮಯದಲ್ಲಿ ವ್ಯವಹಾರಗಳಿಗೆ ಸಹಾಯ ಮಾಡಲು ತೆರಿಗೆ ಮರುಪಾವತಿ ತೆಗೆದುಕೊಳ್ಳಲು ಸರ್ಕಾರ ನಿರ್ಧರಿಸಿದಾಗಿನಿಂದ ಇಂತಹ ನಕಲಿ ಸಂದೇಶಗಳು ಬರುತ್ತಿವೆ ಎಂದು ತೆರಿಗೆ ಇಲಾಖೆ ಹೇಳಿದೆ.

ಸಿಬಿಐಸಿ (CBIC) ತನ್ನ ಒಂದು ಟ್ವೀಟ್‌ನಲ್ಲಿ "ತೆರಿಗೆದಾರರು ಹುಷಾರಾಗಿರು !!! ದಯವಿಟ್ಟು ಮರುಪಾವತಿ ನೀಡುವ ಯಾವುದೇ ಲಿಂಕ್ ಅನ್ನು ಕ್ಲಿಕ್ ಮಾಡಬೇಡಿ. ಇವು ನಕಲಿ ಸಂದೇಶಗಳು ಮತ್ತು ಸಿಬಿಐಸಿಯಿಂದ ಅಂತಹ ಯಾವುದೇ ಲಿಂಕ್ ಗಳನ್ನೂ ಕಳುಹಿಸಲಾಗಿಲ್ಲ ಮತ್ತು ಜಿಎಸ್‌ಟಿ ಸಂಬಂಧಿತ ಫೈಲಿಂಗ್‌ಗಾಗಿ gst.gov.in ಗೆ ಹೋಗಿ" ಎಂದು ತಿಳಿಸಿದೆ.

ಜಿಎಸ್ಟಿಎನ್ ನೆಟ್ವರ್ಕ್ ಸಹ ತೆರಿಗೆ ಪಾವತಿದಾರರಿಗಾಗಿ ಟ್ವೀಟ್ ಮಾಡಿದ್ದು ತೆರಿಗೆದಾರರಿಂದ ಖಾಸಗಿ ಮಾಹಿತಿಯನ್ನು ಪಡೆಯಲು ಪ್ರಸಾರವಾಗುತ್ತಿರುವ ಆನ್‌ಲೈನ್ಫೈಲಿಂಗ್ ಇಂಡಿಯಾ.ಇನ್ ವೆಬ್‌ಸೈಟ್‌ಗೆ ಚಂದಾದಾರರಾಗಬೇಡಿ ಎಂದು ಹೇಳಿದೆ.

ಜಿಎಸ್‌ಟಿಎನ್ ಸಿದ್ಧಪಡಿಸಿದ ಪೋರ್ಟಲ್ ಮೂಲಕ ತೆರಿಗೆದಾರರ ವಿವರಗಳನ್ನು ತಕ್ಷಣವೇ ಪ್ರಕ್ರಿಯೆಗೊಳಿಸುವುದಾಗಿ ಕೆಲವು ನಕಲಿ ಜಾಲಗಳು ಹೇಳಿಕೊಳ್ಳುತ್ತಿರುವ ವಂಚನೆಗಳು ಕಂಡುಬಂದಿವೆ ಎಂದು ಜಿಎಸ್‌ಟಿಎನ್ ಹೇಳಿದೆ. ಇದು ವೈಯಕ್ತಿಕ ಮಾಹಿತಿ ಮತ್ತು ಬ್ಯಾಂಕ್ ವಿವರಗಳನ್ನು ಪಡೆಯಲು ತೆರಿಗೆದಾರರಿಗೆ ಆಮಿಷ ಒಡ್ಡಲು ಪ್ರಯತ್ನಿಸುತ್ತಿದೆ. ನಿಮ್ಮ ವೈಯಕ್ತಿಕ ವಿವರಗಳನ್ನು ಕೇಳುವ ಯಾವುದೇ ಸಂದೇಶ, ಮೇಲ್ ಮತ್ತು ವೆಬ್‌ಸೈಟ್‌ಗೆ ಪ್ರತ್ಯುತ್ತರ ನೀಡಬೇಡಿ ಎಂದು ಎಚ್ಚರಿಸಲಾಗಿದೆ.

Trending News