ಸುರಕ್ಷಿತ ಆನ್‌ಲೈನ್ ಬ್ಯಾಂಕಿಂಗ್‌ಗಾಗಿ SBI ನೀಡಿರುವ ಈ ಟಿಪ್ಸ್ ಅನುಸರಿಸಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಯಾವುದೇ ಗ್ರಾಹಕರಿಂದ ಫೋನ್, ಸಂದೇಶ ಅಥವಾ ಮೇಲ್ ಮೂಲಕ ಯಾವುದೇ ವೈಯಕ್ತಿಕ ಮಾಹಿತಿಯನ್ನು ಕೇಳುವುದಿಲ್ಲ ಎಂದು ಬ್ಯಾಂಕ್ ತಿಳಿಸಿದೆ.

Written by - Yashaswini V | Last Updated : May 6, 2020, 03:25 PM IST
ಸುರಕ್ಷಿತ ಆನ್‌ಲೈನ್ ಬ್ಯಾಂಕಿಂಗ್‌ಗಾಗಿ SBI ನೀಡಿರುವ ಈ ಟಿಪ್ಸ್ ಅನುಸರಿಸಿ

ನವದೆಹಲಿ: ಕರೋನಾ ವೈರಸ್‌ನಿಂದಾಗಿ ಜನರು ಹೆಚ್ಚಾಗಿ ಬ್ಯಾಂಕುಗಳಿಗೆ ಬರದಂತೆ ಮತ್ತು ಸಾಧ್ಯವಾದಷ್ಟು ಆನ್ಲೈನ್ ವಹಿವಾಟುಗಳನ್ನು ನಡೆಸುವಂತೆ ಸರ್ಕಾರ ಹಾಗೂ ಬಂಕುಗಳು ಜಾಗೃತಿ ಮೂಡಿಸುತ್ತಲೇ ಇವೆ.  ಇಂತಹ ಪರಿಸ್ಥಿತಿಯಲ್ಲಿ ಹೆಚ್ಚಿನ ಸಂಖ್ಯೆಯ ಜನರು ಆನ್‌ಲೈನ್ ಬ್ಯಾಂಕಿಂಗ್ ಮೂಲಕ ಬ್ಯಾಂಕಿಂಗ್ ವಹಿವಾಟು ನಡೆಸುತ್ತಿದ್ದಾರೆ. ಆದರೆ ಆನ್ಲೈನ್ ವಹಿವಾಟಿನ ವಂಚನೆಗಳೂ ಸಹ ಕಡಿಮೆ ಆಗದ ಕಾರಣ ಗ್ರಾಹಕರನ್ನು ವಂಚನೆಯಿಂದ ರಕ್ಷಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಕೆಲವು ಸಲಹೆಗಳನ್ನು ನೀಡಿದೆ. ಈ ಸಲಹೆಗಳನ್ನು ಗಮನದಲ್ಲಿಟ್ಟುಕೊಂಡು ವಹಿವಾಟು ನಡೆಸುವುದರಿಂದ ನೀವು ಮೋಸ ಮಾಡುವುದನ್ನು ತಪ್ಪಿಸಬಹುದು.

ಈ ವಿಷಯಗಳನ್ನು ನೆನಪಿನಲ್ಲಿಡಿ: 

  • ನಿಮ್ಮ ಬ್ಯಾಂಕಿನ ವೆಬ್‌ಸೈಟ್‌ಗೆ ಹೋಗಲು, ಬ್ಯಾಂಕಿನ ವೆಬ್‌ಸೈಟ್‌ನ URL ಅನ್ನು ನೇರವಾಗಿ ವಿಳಾಸ ಪಟ್ಟಿಯಲ್ಲಿ ಟೈಪ್ ಮಾಡಿ.
  • ಮೊಬೈಲ್ ಪ್ಲೇಸ್ಟೋರ್, ಆಪಲ್ ಆಪ್ ಸ್ಟೋರ್, ಬ್ಲ್ಯಾಕ್ಬೆರಿ ಆಪ್ ವರ್ಲ್ಡ್, ಒವಿ ಸ್ಟೋರ್, ವಿಂಡೋಸ್ ಮಾರ್ಕೆಟ್‌ಪ್ಲೇಸ್‌ನಿಂದ (Google Playstore, Apple App Store, Blackberry App World, Ovi Store, Windows Marketplace) ಮೊಬೈಲ್‌ನಲ್ಲಿ ಯಾವುದೇ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವಾಗ ಜಾಗರೂಕರಾಗಿರಿ. ಇವೆಲ್ಲವೂ ಅನೇಕ ರೀತಿಯ ಆನ್‌ಲೈನ್ ಬ್ಯಾಂಕಿಂಗ್ ಅಪ್ಲಿಕೇಶನ್‌ಗಳನ್ನು ನೀಡುತ್ತವೆ. ಅಪ್ಲಿಕೇಶನ್ ಡೌನ್‌ಲೋಡ್ ಮಾಡಿದ ನಂತರ ನೀವು ಮೂಲ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿದ್ದೀರಾ ಅಥವಾ ಇಲ್ಲವೇ ಎಂಬುದನ್ನು ಸಂಪೂರ್ಣವಾಗಿ ಪರಿಶೀಲಿಸಿ.

ಇಂತಹ SMSಗಳಿಂದ ಜಾಗರೂಕರಾಗಿರುವಂತೆ ತನ್ನ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ SBI

  • ಯಾರಾದರೂ ನಿಮಗೆ ಇ-ಮೇಲ್ ಅಥವಾ ಸಂದೇಶದ ಮೂಲಕ ಬ್ಯಾಂಕಿನ ಲಿಂಕ್ ಕಳುಹಿಸಿದ್ದರೆ, ಅದರ ಮೇಲೆ ಎಂದಿಗೂ ಕ್ಲಿಕ್ ಮಾಡಬೇಡಿ. ಲಿಂಕ್ ಅನ್ನು ಕ್ಲಿಕ್ ಮಾಡುವುದರ ಮೂಲಕ ನಿಮ್ಮ ಫೋನ್ ಅಥವಾ ಸಿಸ್ಟಮ್ ಅನ್ನು ಹ್ಯಾಕ್ ಮಾಡಬಹುದು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಯಾವುದೇ ಗ್ರಾಹಕರಿಂದ ಫೋನ್, ಸಂದೇಶ ಅಥವಾ ಮೇಲ್ ಮೂಲಕ ಯಾವುದೇ ವೈಯಕ್ತಿಕ ಮಾಹಿತಿಯನ್ನು ಕೇಳುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ನೀವು ಅಂತಹ ಯಾವುದೇ ಮೇಲ್, ಸಂದೇಶ ಅಥವಾ ಫೋನ್ ಅನ್ನು ಸ್ವೀಕರಿಸಿದ್ದರೆ, ನೀವು ಅದಕ್ಕೆ ಉತ್ತರಿಸಬಾರದು. Report.phishing@sbi.co.in ನಲ್ಲಿ ನೀವು ತಕ್ಷಣ ಅದರ ಬಗ್ಗೆ ದೂರು ನೀಡಬೇಕು.
  • ನೀವು ಯಾವುದೇ ಬಹುಮಾನವನ್ನು ಗೆದ್ದಿದ್ದೀರಿ ಎಂದು ಮೇಲ್ ಮೂಲಕ ಅಥವಾ ಎಸ್ಎಂಎಸ್ ಮೂಲಕ ನಿಮಗೆ ಸಂದೇಶ ಬಂದರೆ ಅದರಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕೇಳಿದರೆ ಅದನ್ನು ಎಂದಿಗೂ ನೀಡಬೇಡಿ. ಈ ಮೂಲಕ ನೀವು ಮೋಸ ಹೋಗುವ ಸಾಧ್ಯತೆ ಇರುತ್ತದೆ.
  • ನಿಮ್ಮ ಸಿಸ್ಟಂನಲ್ಲಿ ಫೈರ್ ವಾಲ್ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ನೆನಪಿನಲ್ಲಿಡಿ. ನಿಮ್ಮ ಆಂಟಿವೈರಸ್ ಅನ್ನು ನೀವು ಕಾಲಕಾಲಕ್ಕೆ ನವೀಕರಿಸುತ್ತಲೇ ಇರುತ್ತೀರಿ. ನಿಮ್ಮ ಕಂಪ್ಯೂಟರ್ ಅನ್ನು ನಿಯಮಿತವಾಗಿ ಸ್ಕ್ಯಾನ್ ಮಾಡಿ. ವೈರಸ್ ಕಂಡುಬಂದಲ್ಲಿ ಅದನ್ನು ತಕ್ಷಣ ಸಿಸ್ಟಂನಿಂದ ತೆಗೆದುಹಾಕಿ.

ಕೇವಲ 45 ನಿಮಿಷಗಳಲ್ಲಿ ಅಗ್ಗದ ಸಾಲ ನೀಡಲಿದೆ SBI 6 ತಿಂಗಳವರೆಗೆ EMI ಬಗ್ಗೆ ಚಿಂತಿಸಬೇಕಿಲ್ಲ

  • ನಿಮ್ಮ ಇಂಟರ್ನೆಟ್ ಬ್ಯಾಂಕಿಂಗ್ ಪಾಸ್ವರ್ಡ್ ಅನ್ನು ನಿಯಮಿತ ಸಮಯ ಮಧ್ಯಂತರದಲ್ಲಿ ಬದಲಾಯಿಸಿ. ನೀವು ಲಾಗಿನ್ ಮಾಡಲು ಹೋದಾಗಲೆಲ್ಲಾ ನೀವು ಕೊನೆಯ ಬಾರಿಗೆ ಲಾಗಿನ್ ಆಗಿರುವ ವಿವರವನ್ನು ಪರಿಶೀಲಿಸಿ. ಯಾವುದೇ ಸೈಬರ್ ಕೆಫೆ ಅಥವಾ ಅನೇಕ ಜನರು ಬಳಸುವ ಯಾವುದೇ ಕಂಪ್ಯೂಟರ್‌ನಿಂದ ನೆಟ್ ಬ್ಯಾಂಕಿಂಗ್ ಮಾಡದಿರಲು ಪ್ರಯತ್ನಿಸಿ.

More Stories

Trending News