ದೇಶದ ಈ ಭಾಗದಲ್ಲಿ ಸದ್ಯಕ್ಕೆ ತೆರೆಯುವುದಿಲ್ಲ ಶಾಲೆ, ಈ ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಧಾರ

ಉಪಮುಖ್ಯಮಂತ್ರಿ ಕಚೇರಿಯ ಅಧಿಕಾರಿಯೊಬ್ಬರು ಶಾಲೆಗಳನ್ನು ಅಕ್ಟೋಬರ್ 31ರವರೆಗೆ ಮುಚ್ಚುವ ನಿರ್ಧಾರವನ್ನು ವಿಸ್ತರಿಸಲು ಶಿಕ್ಷಣ ನಿರ್ದೇಶನಾಲಯಕ್ಕೆ ನಿರ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.

Last Updated : Oct 4, 2020, 03:40 PM IST
  • ದೆಹಲಿಯ ಎಲ್ಲಾ ಶಾಲೆಗಳು ಅಕ್ಟೋಬರ್ 31 ರವರೆಗೆ ಮುಚ್ಚಲ್ಪಡುತ್ತವೆ
  • ಮೊದಲು ಶಾಲಾ ಮುಚ್ಚುವ ಅವಧಿಯನ್ನು ಅಕ್ಟೋಬರ್ 5 ರವರೆಗೆ ವಿಸ್ತರಿಸಿತ್ತು
  • ದೆಹಲಿ ಉಪ ಮುಖ್ಯಮಂತ್ರಿ ಕಚೇರಿಯಿಂದ ಸೂಚನೆಗಳನ್ನು ನೀಡಲಾಗಿದೆ
ದೇಶದ ಈ ಭಾಗದಲ್ಲಿ ಸದ್ಯಕ್ಕೆ ತೆರೆಯುವುದಿಲ್ಲ ಶಾಲೆ, ಈ ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಧಾರ title=
File Image

ನವದೆಹಲಿ: ಕರೋನಾವೈರಸ್ ಸಾಂಕ್ರಾಮಿಕ ದೃಷ್ಟಿಯಿಂದ ದೆಹಲಿಯ ಎಲ್ಲಾ ಶಾಲೆಗಳು ಅಕ್ಟೋಬರ್ 31ರವರೆಗೆ ಮುಚ್ಚಲ್ಪಡುತ್ತವೆ. ಒಂಬತ್ತನೇ ತರಗತಿಯಿಂದ 12ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್ 21 ರಿಂದ ಸ್ವಯಂಪ್ರೇರಿತ ಆಧಾರದ ಮೇಲೆ ಶಾಲೆಗಳಿಗೆ (Schools) ಹಾಜರಾಗಲು ಕೇಂದ್ರ ಸರ್ಕಾರ ಅವಕಾಶ ನೀಡಿದ್ದರೂ ದೆಹಲಿ ಸರ್ಕಾರ ಈ ಹಿಂದೆ ಅಕ್ಟೋಬರ್ 5 ರವರೆಗೆ ಶಾಲಾ ಮುಚ್ಚುವ ಅವಧಿಯನ್ನು ವಿಸ್ತರಿಸಿತ್ತು.

ಉಪ ಮುಖ್ಯಮಂತ್ರಿ ಕಚೇರಿಯಿಂದ ಪತ್ರ ಹೊರಡಿಸಲಾಗಿದೆ:
ಉಪಮುಖ್ಯಮಂತ್ರಿ ಕಚೇರಿಯ ಅಧಿಕಾರಿಯೊಬ್ಬರು ಶಾಲೆಗಳನ್ನು ಅಕ್ಟೋಬರ್ 31 ರವರೆಗೆ ಮುಚ್ಚುವ ನಿರ್ಧಾರವನ್ನು ವಿಸ್ತರಿಸಲು ಶಿಕ್ಷಣ ನಿರ್ದೇಶನಾಲಯಕ್ಕೆ ನಿರ್ದೇಶಿಸಲಾಗಿದೆ. ಈ ಕುರಿತು ಔಪಚಾರಿಕ ಆದೇಶಗಳನ್ನು ನಾಳೆ ನಿರ್ದೇಶನಾಲಯ ಹೊರಡಿಸಲಿದೆ ಎಂದು ಮಾಹಿತಿ ನೀಡಿದ್ದಾರೆ. ಗಮನಾರ್ಹವಾಗಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ (Manish Sisodia) ಶಿಕ್ಷಣ ಇಲಾಖೆಯ ಶಿಕ್ಷಕರೂ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸಾರ್ವಜನಿಕರೇ ಎಚ್ಚರ! ಇನ್ಮುಂದೆ ಮಾಸ್ಕ್ ಧರಿಸದಿದ್ದರೆ ಬೀಳಲಿದೆ ಭಾರೀ ದಂಡ

ಅನ್ಲಾಕ್ 5.0 ನಲ್ಲಿ ಸೂಚನೆ:-
ಅನ್ಲಾಕ್ 5.0 (Unlock 5.0) ಮಾರ್ಗಸೂಚಿಗಳ ಪ್ರಕಾರ, ಕಂಟೋನ್ಮೆಂಟ್ ವಲಯದ ಹೊರಗೆ ಇರುವ ಶಾಲೆಗಳು, ಕಾಲೇಜುಗಳು ಮತ್ತು ಇತರ ಶಿಕ್ಷಣ ಸಂಸ್ಥೆಗಳು ಅಕ್ಟೋಬರ್ 15ರ ನಂತರ ಮತ್ತೆ ತೆರೆಯಬಹುದು. ಆದಾಗ್ಯೂ ಶಿಕ್ಷಣ ಸಂಸ್ಥೆಗಳನ್ನು ಮತ್ತೆ ತೆರೆಯುವ ನಿರ್ಧಾರವನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಬಿಡಲಾಗಿದೆ.

ದೇಶಾದ್ಯಂತ ಕೋವಿಡ್- 19 (Covid 19) ವೈರಸ್ ಹರಡುವುದನ್ನು ತಡೆಯಲು ಕೇಂದ್ರ ಸರ್ಕಾರ ಮಾರ್ಚ್ 25 ರಂದು ರಾಷ್ಟ್ರವ್ಯಾಪಿ ಲಾಕ್ ಡೌನ್ ಘೋಷಿಸಿತು. ಕರೋನಾವೈರಸ್ ಹರಡುವುದನ್ನು ತಡೆಗಟ್ಟುವ ಕ್ರಮಗಳ ಭಾಗವಾಗಿ ಕೇಂದ್ರ ಸರ್ಕಾರವು ದೇಶಾದ್ಯಂತ ಶಿಕ್ಷಣ ಸಂಸ್ಥೆಗಳನ್ನು ಮುಚ್ಚುವುದಾಗಿ ಘೋಷಿಸಿತು. ಈ ಹಿನ್ನಲೆಯಲ್ಲಿ ಮಾರ್ಚ್ 16 ರಿಂದ ದೇಶಾದ್ಯಂತ ವಿಶ್ವವಿದ್ಯಾಲಯಗಳು ಮತ್ತು ಶಾಲೆಗಳನ್ನು ಮುಚ್ಚಲಾಗಿದೆ.

ಸದ್ಯಕ್ಕಿಲ್ಲ ಶಾಲಾ-ಕಾಲೇಜುಗಳ ಆರಂಭ: ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ

Trending News