Schools Reopening in 2021: ಹೊಸ ವರ್ಷದಲ್ಲಿ ಶಾಲಾ-ಕಾಲೇಜು ತೆರೆಯಲು ಸಜ್ಜಾಗಿರುವ ರಾಜ್ಯಗಳಿವು

ಇಡೀ ಜಗತ್ತನ್ನೇ ತತ್ತರಗೊಳಿಸಿರುವ ಕೊರೊನಾವೈರಸ್‌ನಿಂದಾಗಿ 2020 ರಲ್ಲಿ ಶಾಲಾ-ಕಾಲೇಜುಗಳನ್ನು ಮುಚ್ಚಲಾಗಿದೆ. ಆದಾಗ್ಯೂ ಅನೇಕ ರಾಜ್ಯಗಳು ಹೊಸ ವರ್ಷದಲ್ಲಿ ಶಾಲಾ-ಕಾಲೇಜುಗಳನ್ನು ತೆರೆಯಲು ಸಿದ್ಧತೆ ನಡೆಸಿವೆ.

Written by - Yashaswini V | Last Updated : Dec 30, 2020, 02:25 PM IST
Schools Reopening in 2021: ಹೊಸ ವರ್ಷದಲ್ಲಿ ಶಾಲಾ-ಕಾಲೇಜು ತೆರೆಯಲು ಸಜ್ಜಾಗಿರುವ ರಾಜ್ಯಗಳಿವು  title=
File Image

ನವದೆಹಲಿ: ಕೊರೊನಾವೈರಸ್ ಒಂದೆಡೆ ಜನರನ್ನು ಆರ್ಥಿಕ ಸಂಕಷ್ಟಕ್ಕೆ ದೂಡಿದೆ. ಇನ್ನೊಂದೆಡೆ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಡಕಾಗಿದೆ. ಮಹಾಮಾರಿ ಕರೋನಾವೈರಸ್ ಕಾರಣದಿಂದಾಗಿ  ಮಾರ್ಚ್ 2020 ರಿಂದ ದೇಶಾದ್ಯಂತ ಎಲ್ಲಾ ಶಾಲೆಗಳು, ಕಾಲೇಜುಗಳು ಮತ್ತು ಇತರ ಶಿಕ್ಷಣ ಸಂಸ್ಥೆಗಳನ್ನು  ಮುಚ್ಚಲಾಗಿದೆ. ಆದಾಗ್ಯೂ 2021ರಲ್ಲಿ ಶಾಲೆಗಳನ್ನು ಪುನಃ ತೆರೆಯುವ ಬಗ್ಗೆ ಹಲವು ರಾಜ್ಯಗಳು ಚಿಂತನೆ ನಡೆಸಿವೆ.  

ಈ ರಾಜ್ಯಗಳಲ್ಲಿ ಹೊಸ ವರ್ಷದಲ್ಲಿ ಶಾಲೆಗಳನ್ನು ತೆರೆಯಲು ನಡೆದಿದೆ ಸಿದ್ಧತೆ:
ಅನೇಕ ರಾಜ್ಯಗಳಲ್ಲಿ ಹೊಸ ವರ್ಷ 2021 (New Year 2021) ರಲ್ಲಿ ಶಾಲೆಗಳನ್ನು ತೆರೆಯಲು ಅಗತ್ಯ ಸಿದ್ಧತೆ ಕೈಗೊಳ್ಳಲಾಗುತ್ತಿದೆ ಮತ್ತು ಕೆಲವು ರಾಜ್ಯಗಳಲ್ಲಿ ಮುಂದಿನ ವರ್ಷದಲ್ಲಿ ಶಾಲೆಗಳನ್ನು ತೆರೆಯುವ ಬಗ್ಗೆ ಸಾಧಕ-ಭಾದಕಗಳನ್ನೂ ಲೆಕ್ಕಹಾಕಲಾಗುತ್ತಿದೆ. ಯಾವ ರಾಜ್ಯಗಳಲ್ಲಿ ಯಾವಾಗ ಶಾಲೆಗಳು ಪುನರಾರಂಭ (School Reopen)ಗೊಳ್ಳಲಿವೆ ಎಂಬುದನ್ನು ತಿಳಿಯಿರಿ...

ಈ ದಿನದಿಂದ ದೆಹಲಿಯಲ್ಲಿ ಶಾಲೆಗಳು ತೆರೆಯಲಿವೆ:
ಕರೋನಾ ಲಸಿಕೆ (Corona Vaccine) ಬರುವವರೆಗೂ ದೆಹಲಿಯಲ್ಲಿ ಶಾಲೆಗಳನ್ನು ತೆರೆಯಲಾಗುವುದಿಲ್ಲ ಎಂದು ದೆಹಲಿ ಸರ್ಕಾರ ಹೇಳಿದೆ. ದೆಹಲಿ ಶಿಕ್ಷಣ ಇಲಾಖೆ ಪ್ರಕಾರ ಜನವರಿ 15 ರವರೆಗೆ ಚಳಿಗಾಲದ ರಜೆ ಇರುತ್ತದೆ. ಈ ಸಮಯದಲ್ಲಿ ಆನ್‌ಲೈನ್ ತರಗತಿಗಳು (Online Classes) ಸಹ ನಡೆಯುವುದಿಲ್ಲ. ಆದರೆ ಪರೀಕ್ಷೆಯ ವಿಷಯದಲ್ಲಿ ಅಧ್ಯಯನಗಳತ್ತ ಗಮನ ಹರಿಸಬೇಕಾದ ಅವಶ್ಯಕತೆಯಿದೆ ಎಂದು ಶಾಲೆಯು ಭಾವಿಸಿದರೆ 9 ರಿಂದ 12 ರವರೆಗೆ ವಿದ್ಯಾರ್ಥಿಗಳು ಮತ್ತು ಆ ವಿಷಯದ ಶಿಕ್ಷಕರನ್ನು ಶಾಲೆಗೆ ಕರೆಯಬಹುದು ಎಂದು ಹೇಳಿದೆ.

ಇದನ್ನೂ ಓದಿ: ಹಳ್ಳಿಗಳಲ್ಲಿ ಕರೆಂಟ್ ಸಿಗೋದೇ ಡೌಟು: ಹೈ ಸ್ಪೀಡ್ ಇಂಟರ್‌ನೆಟ್‌ ಕೊಡ್ತಾರಂತೆ ಶಿಕ್ಷಣ ಸಚಿವ ಸುರೇಶ್ ಕುಮಾರ್‌

ಉತ್ತರಪ್ರದೇಶದಲ್ಲಿ ಶಾಲೆ ತೆರೆಯಲು ಸಿದ್ಧತೆ :
ಉತ್ತರ ಪ್ರದೇಶದಲ್ಲಿ ಶಿಕ್ಷಣ ಮಂಡಳಿಯು 6 ರಿಂದ 8ನೇ ತರಗತಿವರೆಗೆ ಶಾಲೆಗಳನ್ನು ತೆರೆಯಲು ಯೋಜಿಸುತ್ತಿದೆ. ಆದರೆ ಹೆಚ್ಚಿನ ಶಾಲೆಗಳ ಮುಖ್ಯೋಪಾಧ್ಯಾಯರು ಈ ಪರಿಸ್ಥಿತಿಗಳಲ್ಲಿ ಶಾಲೆಯನ್ನು ತೆರೆಯಲು ನಿರಾಕರಿಸಿದ್ದಾರೆ. ಪ್ರಾಂಶುಪಾಲರು ಜಿಲ್ಲಾ ಶಾಲಾ ಇನ್ಸ್‌ಪೆಕ್ಟರ್‌ಗೆ ವರದಿಯನ್ನು ಕಳುಹಿಸಿದ್ದು 9 ರಿಂದ 12ನೇ ತರಗತಿವರೆಗೆ ಶಾಲೆಗಳು ತೆರೆದಿರುತ್ತವೆ, ಇದರಲ್ಲಿ ಹಾಜರಾಗುವ ವಿದ್ಯಾರ್ಥಿಗಳ ಸಂಖ್ಯೆ ತೀರಾ ಕಡಿಮೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜನವರಿ 1 ರಿಂದ ಕರ್ನಾಟಕದಲ್ಲಿ ಶಾಲೆಗಳು ತೆರೆಯಲಿವೆ:
ಕರ್ನಾಟಕದಲ್ಲಿ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ (S Sureshkumar) ಅವರು 10 ಮತ್ತು 12 ನೇ ತರಗತಿಗಳು ಜನವರಿ 1 ರಿಂದ ಪ್ರಾರಂಭವಾಗಲಿದೆ ಎಂದು ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ. ಆದಾಗ್ಯೂ ಪ್ರಾಥಮಿಕ ಶಾಲೆಗಳನ್ನು ತೆರೆಯುವ ಬಗ್ಗೆ ಈವರೆಗೆ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ.

ಇದನ್ನೂ ಓದಿ: ಜ.1ರಿಂದ ಶಾಲೆ ಪುನರಾರಂಭ, ಆದರೆ ಕಂಡೀಷನ್ ಅಪ್ಲೇ!

ಜನವರಿ 4 ರಿಂದ ಮಹಾರಾಷ್ಟ್ರದಲ್ಲಿ ಶಾಲೆಗಳು ತೆರೆಯಲಿವೆ:
ಮಹಾರಾಷ್ಟ್ರ (Maharashtra) ದಲ್ಲಿ 20 ಜನವರಿ 2021 ರಿಂದ ಶಾಲೆಗಳು ಪ್ರಾರಂಭವಾಗುತ್ತಿವೆ. ಪ್ರಸ್ತುತ 9 ರಿಂದ 12 ರವರೆಗೆ ತರಗತಿಗಳನ್ನು ಪ್ರಾರಂಭಿಸಲಾಗುವುದು. ರಾಜ್ಯದ ಅನೇಕ ನಗರಗಳಲ್ಲಿ ಶಾಲೆಗಳನ್ನು ತೆರೆಯಲು ಸಿದ್ಧತೆಗಳು ನಡೆಯುತ್ತಿವೆ. ನಾಸಿಕ್ ಜಿಲ್ಲೆಯಲ್ಲಿ 9 ರಿಂದ 12ನೇ ತರಗತಿವರೆಗೆ ಶಾಲೆಗಳು ಜನವರಿ 4 ರಿಂದ ಪ್ರಾರಂಭವಾಗಲಿವೆ.

ರಾಜಸ್ಥಾನ ಸರ್ಕಾರವೂ ಶಾಲಾ ಪುನರಾರಂಭಕ್ಕೆ ನಡೆಸಿದೆ ತಯಾರಿ:
ಜನವರಿ 4 ರಿಂದ 6 ನೇ ತರಗತಿಯಿಂದ 12 ನೇ ತರಗತಿ ಶಾಲೆಗಳನ್ನು ತೆರೆಯಲು ರಾಜಸ್ಥಾನ ಸರ್ಕಾರ ಸಿದ್ಧತೆ ನಡೆಸಿದೆ. ಶಾಲೆ ತೆರೆದಾಗ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಕರೋನಾ ಮಾರ್ಗಸೂಚಿಯನ್ನು ಅನುಸರಿಸಬೇಕು ಎಂದು ಸರ್ಕಾರ ನಿರ್ದೇಶನ ನೀಡಿದೆ.

ಇದನ್ನೂ ಓದಿ: Schools Reopen: 'ಜನವರಿ 1ರಿಂದಲೇ ರಾಜ್ಯದಲ್ಲಿ ಶಾಲೆಗಳ ಆರಂಭ ಖಚಿತ'

ಜನವರಿ 4 ರಿಂದ ಬಿಹಾರದಲ್ಲಿ ಶಾಲಾ-ಕಾಲೇಜುಗಳು ತೆರೆಯಲಿವೆ:
ಜನವರಿ 4 ರಿಂದ ಶಿಕ್ಷಣ ಸಂಸ್ಥೆಗಳನ್ನು ತೆರೆಯಲು ಬಿಹಾರ (Bihar) ಸರ್ಕಾರ ನಿರ್ಧರಿಸಿದೆ. ಪ್ರಸ್ತುತ 9 ರಿಂದ 12ನೇ ತರಗತಿವರೆಗೆ ತರಗತಿಗಳು ಮಾತ್ರ ಪ್ರಾರಂಭವಾಗುತ್ತವೆ. ಇದರ ನಂತರ ಜನವರಿ 18 ರಿಂದ ಎಲ್ಲಾ ಶಾಲಾ-ಕಾಲೇಜುಗಳನ್ನು ತೆರೆಯಲಾಗುವುದು. ಆದಾಗ್ಯೂ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಕರೋನಾಗೆ ಸಂಬಂಧಿಸಿದ ಪ್ರತಿಯೊಂದು ಕರೋನವೈರಸ್ ಮಾರ್ಗಸೂಚಿಯನ್ನು ಅನುಸರಿಸಬೇಕು ಎಂದು ಸೂಚಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News