School Reopening News : ಈ ರಾಜ್ಯದಲ್ಲಿ ಆಗಸ್ಟ್ 16ರಿಂದ ಆರಂಭವಾಗಲಿದೆ ಶಾಲೆ, ಸರ್ಕಾರದ ಮಹತ್ವದ ನಿರ್ಧಾರ

School Reopening News :ಆಗಸ್ಟ್ 16 ರಿಂದ ರಾಜ್ಯದಲ್ಲಿ ಶಾಲೆಗಳನ್ನು ತೆರೆಯಲು ಉತ್ತರ ಪ್ರದೇಶ ಸರ್ಕಾರ  ನಿರ್ಧರಿಸಿದೆ. ಕರೋನಾ ಮಾರ್ಗಸೂಚಿಗಳನ್ನು  ಅನುಸರಿಸಿ ರಾಜ್ಯದಲ್ಲಿ ಎಲ್ಲಾ ಶಾಲೆಗಳನ್ನು ತೆರೆಯಲಾಗುವುದು.

Written by - Ranjitha R K | Last Updated : Aug 2, 2021, 02:48 PM IST
  • ಆಗಸ್ಟ್ 16 ರಿಂದ ರಾಜ್ಯದಲ್ಲಿ ಶಾಲೆಗಳನ್ನು ತೆರೆಯಲು ಉತ್ತರ ಪ್ರದೇಶ ಸರ್ಕಾರ ನಿರ್ಧಾರ
  • ಕರೋನಾ ಮಾರ್ಗಸೂಚಿಗಳನ್ನುಅನುಸರಿಸಿ ಕಾರ್ಯ ನಿರ್ವಹಣೆ
  • ಶಾಲೆಗೇ ಬರಬೇಕಾದರೆ ಪೋಷಕರ ಅನುಮತಿ ಅವಶ್ಯಕ
School Reopening News : ಈ ರಾಜ್ಯದಲ್ಲಿ ಆಗಸ್ಟ್ 16ರಿಂದ ಆರಂಭವಾಗಲಿದೆ ಶಾಲೆ, ಸರ್ಕಾರದ ಮಹತ್ವದ ನಿರ್ಧಾರ   title=
ಆಗಸ್ಟ್ 16 ರಿಂದ ರಾಜ್ಯದಲ್ಲಿ ಶಾಲೆಗಳನ್ನು ತೆರೆಯಲು ಉತ್ತರ ಪ್ರದೇಶ ಸರ್ಕಾರ ನಿರ್ಧಾರ (phptp india.com)

ನವದೆಹಲಿ : School Reopening News :ಆಗಸ್ಟ್ 16 ರಿಂದ ರಾಜ್ಯದಲ್ಲಿ ಶಾಲೆಗಳನ್ನು ತೆರೆಯಲು ಉತ್ತರ ಪ್ರದೇಶ ಸರ್ಕಾರ (UP Government) ನಿರ್ಧರಿಸಿದೆ. ಕರೋನಾ ಮಾರ್ಗಸೂಚಿಗಳನ್ನು(Covid guidelines) ಅನುಸರಿಸಿ ರಾಜ್ಯದಲ್ಲಿ ಎಲ್ಲಾ ಶಾಲೆಗಳನ್ನು ತೆರೆಯಲಾಗುವುದು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ  ಅವರೊಂದಿಗಿನ ಸಭೆಯಲ್ಲಿ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಾಗಿದೆ.

ವರದಿಯ ಪ್ರಕಾರ, ಆರಂಭದಲ್ಲಿ ಕೇವಲ 50 ಪ್ರತಿಶತ ಮಕ್ಕಳು ಮಾತ್ರ ಶಾಲೆಗೆ (School Reopening News )ಹಾಜರಾಗಲಿದ್ದಾರೆ. ಅಂದರೆ, ಮಕ್ಕಳು ಪರ್ಯಾಯ ದಿನದಲ್ಲಿ ಶಾಲೆಗೆ ಹೋಗಬೇಕಾಗುತ್ತದೆ. ಈ ಬಗ್ಗೆ ಅಧಿಕೃತ ಘೋಷಣೆಯನ್ನು ಉಪಮುಖ್ಯಮಂತ್ರಿ ಮತ್ತು ಶಿಕ್ಷಣ ಸಚಿವ ದಿನೇಶ್ ಶರ್ಮಾ (Dinesh Sharma) ಮಾಡಲಿದ್ದಾರೆ. 

ಇದನ್ನೂ ಓದಿ : e-RUPI Launch: ಇಂದು ಲಾಂಚ್ ಆಗಲಿದೆ ಡಿಜಿಟಲ್ ಪೇಮೆಂಟ್ ಸಲ್ಯೂಶನ್ e-RUPI, ಇದರಿಂದ ಏನು ಪ್ರಯೋಜನ ಗೊತ್ತೇ?

ವರದಿಯ ಪ್ರಕಾರ, ಶಾಲೆಗೆ ಹೋಗುವ ಮಕ್ಕಳು covid ಮಾರ್ಗಸೂಚಿಯನ್ನು ಕಡ್ಡಾಯವಾಗಿ ಅನುಸರಿಬೇಕು. ಅಂದರೆ ಎಲ್ಲಾ ವಿದ್ಯಾರ್ಥಿಗಳು ಮಾಸ್ಕ್ (Mask) ಧರಿಸುವುದು ಕಡ್ಡಾಯವಾಗಿರುತ್ತದೆ. ಆದರೆ ಇದಕ್ಕೂ ಮೊದಲು, ಶಾಲೆಗೇ ಬರಲು ಪೋಷಕರು ಅನುಮತಿ ನೀಡಬೇಕು. ಪೋಷಕರು ಒಪ್ಪಿಗೆ ನೀಡಿದ ನಂತರವೇ ಮಕ್ಕಳು ಶಾಲೆಗೆ ಬಂದು ತರಗತಿಗಳಿಗೆ ಹಾಜರಾಗಬಹುದು. 

ಆರಂಭದಲ್ಲಿ, ಒಂದು ದಿನದಲ್ಲಿ ಶಾಲೆಯ ಅರ್ಧದಷ್ಟು ಮಕ್ಕಳು ಮಾತ್ರ ಬರುತ್ತಾರೆ. ಇನ್ನೊಂದು ಮುಖ್ಯವಾದ ವಿಚಾರ ಎಂದರೆ,  ಶಾಲೆಗಳು ಆರಂಭವಾದರೂ ಆನ್‌ಲೈನ್ (Online class) ಮತ್ತು ಆಫ್‌ಲೈನ್ (offline class) ಎರಡೂ ತರಗತಿಗಳು ನಡೆಯುತ್ತವೆ. 

ಇದನ್ನೂ ಓದಿ : Jobs in Paytm: ಕೊರೊನಾ ಕಾಲದಲ್ಲಿ ನೌಕರಿ ಕಳೆದುಕೊಂಡಿದ್ದೀರಾ? Paytm ನಿಂದ 20,000 ಹುದ್ದೆಗಳಿಗಾಗಿ ನೇಮಕಾತಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News