ನವದೆಹಲಿ: ಮುಂಬೈ ಮೆಟ್ರೋ ಯೋಜನೆಗಾಗಿ 2,500 ಕ್ಕೂ ಹೆಚ್ಚು ಮರಗಳನ್ನು ಕಡಿದುಹಾಕಲು ನ್ಯಾಯಾಲಯವು ಅನುಮತಿ ನೀಡಿದ ಒಂದು ದಿನದ ನಂತರ, ಪ್ರತಿಭಟನಾಕಾರರು ತಮ್ಮ ಹೋರಾಟವನ್ನು ಹೆಚ್ಚಿಸಿದ್ದರಿಂದಾಗಿ ಮುಂಬೈ ಪೊಲೀಸರು ಆರೆ ಕಾಲೋನಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೆಕ್ಷನ್ 144 ಅಡಿ ನಿಷೇದಾಜ್ಞೆ ಜಾರಿಗೊಳಿಸಿದ್ದಾರೆ.
ಈಗ ಹೋರಾಟಗಾರರನ್ನು ಬಂಧಿಸಿರುವುದಕ್ಕೆ ಪ್ರತಿಕ್ರಿಯಿಸಿದ ಶಿವಸೇನೆ ಮುಖಂಡ ಆದಿತ್ಯ ಠಾಕ್ರೆ,'ಮುಂಬೈ ಮೆಟ್ರೋ 3 ಮೋಸದಿಂದ ಮತ್ತು ವೇಗವಾಗಿ ಆರೆ ಯಲ್ಲಿ ಪರಿಸರ ವ್ಯವಸ್ಥೆಯನ್ನು ಹಾಳುಮಾಡುವ ಕಾರ್ಯ ಅವಮಾನಕರ ಮತ್ತು ಅಸಹ್ಯಕರವಾಗಿದೆ. ಈ ಅಧಿಕಾರಿಗಳನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಕಳಿಸಿ ಅಲ್ಲಿ ಅವರಿಗೆ ಮರಗಳ ಬದಲು ಉಗ್ರರನ್ನು ನಾಶಮಾಡುವ ಜವಾಬ್ದಾರಿ ನೀಡಿದರೆ ಹೇಗೆ ? ಎಂದು ಅವರು ಪ್ರಶ್ನಿಸಿಸಿದ್ದಾರೆ.
ಈಗ ಬುಡಕಟ್ಟು ಸಮುದಾಯ ಮತ್ತು ಸಾಮಾಜಿಕ ಕಾರ್ಯಕರ್ತರು ಆರೆಯ ಪರಿಸ್ಥಿತಿಯನ್ನು ಕಾಶ್ಮೀರದಲ್ಲಿನ ಸ್ಥಿತಿಗೆ ಹೋಲಿಸಿದ್ದಾರೆ. ಬಂಧಿಸಲ್ಪಟ್ಟ ಎಲ್ಲರನ್ನೂ ಜಾಮೀನು ರಹಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ, ಅದು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಸುಮಾರು 1,800 ಮರಗಳನ್ನು ಈಗಾಗಲೇ ಕತ್ತರಿಸಲಾಗಿದೆ ಎಂದು ತಿಳಿದು ಬಂದಿದೆ.