VIDEO: ಅಕ್ರಮವಾಗಿ ಗೋವು ಸಾಗಿಸುತ್ತಿದ್ದವರಿಗೆ ಗ್ರಾಮಸ್ಥರು ನೀಡಿದ ಶಿಕ್ಷೆ ಏನು ಗೊತ್ತಾ?

ಗೋವುಗಳ ಕಳ್ಳಸಾಗಣೆ ಮಾಡುತ್ತಿದ್ದರೆನ್ನಲಾದ 20 ಕ್ಕೂ ಅಧಿಕ ಮಂದಿಯನ್ನು ಕಟ್ಟಿಹಾಕಿ ಗೋಮಾತೆಗೆ ಜೈ ಎಂದು ಘೋಷಣೆ ಹೇಳಿಸಿರುವ ಘಟನೆ ಮಧ್ಯಪ್ರದೇಶದ ಖಂಡ್ವಾ ಜಿಲ್ಲೆಯಲ್ಲಿ ನಡೆದಿದೆ.

Last Updated : Jul 8, 2019, 09:24 AM IST
VIDEO: ಅಕ್ರಮವಾಗಿ ಗೋವು ಸಾಗಿಸುತ್ತಿದ್ದವರಿಗೆ ಗ್ರಾಮಸ್ಥರು ನೀಡಿದ ಶಿಕ್ಷೆ ಏನು ಗೊತ್ತಾ? title=
Pic Courtesy: ANI

ಖಂಡ್ವಾ: ಮಧ್ಯಪ್ರದೇಶದ ಖಂಡ್ವಾ ಜಿಲ್ಲೆಯಲ್ಲಿ ಅಕ್ರಮವಾಗಿ ಗೋವು ಸಾಗಿಸುತ್ತಿದ್ದರೆನ್ನಲಾದ 20 ಕ್ಕೂ ಅಧಿಕ ಮಂದಿಯನ್ನು ಕಟ್ಟಿಹಾಕಿದ ಗ್ರಾಮಸ್ಥರು  'ಗೋಮಾತೆಗೆ ಜೈ' ಎಂಬ ಘೋಷಣೆ ಹೇಳಿಸಿದ್ದಾರೆ.

ಗೋವುಗಳ ಕಳ್ಳಸಾಗಣೆ ಮಾಡುತ್ತಿದ್ದವರನ್ನು ಸನ್ವಾಲಿಖೆಡ ಗ್ರಾಮಸ್ಥರು ಎಂದು ಗುರುತಿಸಲಾಗಿದ್ದು, ಅವರು ವಾಹನಗಳಲ್ಲಿ ಜಾನುವಾರುಗಳನ್ನು ಸಾಗಿಸುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದಾರೆ. ಗೋವುಗಳ ಕಳ್ಳಸಾಗಣೆ ವೇಳೆ ಸಿಕ್ಕವರನ್ನು ಗ್ರಾಮಸ್ಥರೇ ಹಿಡಿದು, ಹಗ್ಗದಲ್ಲಿ ಕಟ್ಟಿಹಾಕಿ 'ಗೋಮಾತೆಗೆ ಜೈ' ಘೋಷಣೆ ಹೇಳಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಪೊಲೀಸರು ಈ ಬಗ್ಗೆ ದೂರು ದಾಖಲಿಸಿಕೊಂಡಿದ್ದು ತನಿಖೆ ಆರಂಭಿಸಿದ್ದಾರೆ.

Trending News