ನವದೆಹಲಿ: ಪರ್ಯಾಯ ಪರ್ಯಾಯ ರಂಗದಿಂದ ಕಾಂಗ್ರೆಸ್ ಪಕ್ಷವನ್ನು ಹೊರಗೆ ಇಡುವುದು ಅಸಾಧ್ಯ ಎಂದು ಶರದ್ ಪವಾರ್ ಹೇಳಿದ್ದಾರೆ.ಇಂದು ದೆಹಲಿಯಲ್ಲಿ ತಮ್ಮ ಮನೆಯಲ್ಲಿ ನಡೆದ ಸಭೆಯ ನಂತರ 2024 ಚುನಾವಣೆಗೂ ಮುನ್ನ ತೃತೀಯ ರಂಗದ ರಚನೆಯಾಗುವ ಬಗ್ಗೆ ಸುಳಿವು ನೀಡಿದರು.
'ರಾಷ್ಟ್ರ ಮಂಚ್ ಸಭೆಯಲ್ಲಿ ಮೈತ್ರಿ ಬಗ್ಗೆ ಚರ್ಚಿಸಲಾಗಿಲ್ಲ, ಆದರೆ ಪರ್ಯಾಯ ಬಲವನ್ನು ಬೆಳೆಸಬೇಕಾದರೆ ಅದು ಕಾಂಗ್ರೆಸ್ ಅನ್ನು ಒಟ್ಟಿಗೆ ಸೇರಿಸುವುದರ ಮೂಲಕ ಮಾತ್ರ ನಡೆಯುತ್ತದೆ. ನಮಗೆ ಆ ರೀತಿಯ ಅಧಿಕಾರ ಬೇಕು ಮತ್ತು ನಾನು ಆ ಸಭೆಯಲ್ಲಿ ಇದನ್ನು ಹೇಳಿದ್ದೇನೆ" ಎಂದು ಶರದ್ ಪವಾರ್ (Sharad Pawar) ಹೇಳಿದ್ದಾರೆ.
ಇದನ್ನೂ ಓದಿ: ನಾವು ತೃತೀಯ ರಂಗದ ಸಭೆ ನಡೆಸುತ್ತಿಲ್ಲ -ಶರದ್ ಪವಾರ್ ಸ್ಪಷ್ಟನೆ
ಮಾಜಿ ಮಂತ್ರಿ ಯಶ್ವಂತ್ ಸಿನ್ಹಾ ಅವರು ಸ್ಥಾಪಿಸಿದ ವೇದಿಕೆ ರಾಷ್ಟ್ರ ಮಂಚ್ ಆಯೋಜಿಸಿದ ಸಭೆಯಲ್ಲಿ ಭಾಗವಹಿಸಿ ಶರದ್ ಪವಾರ್ ತೃತೀಯ ರಂಗದ ಸಾದ್ಯತೆ ಬಗ್ಗೆ ಹೇಳಿದ್ದಾರೆ.ಎಂಟು ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಪ್ರಸಿದ್ಧ ಕಾನೂನು ತಜ್ಞರು ಮತ್ತು ಪತ್ರಕರ್ತರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಸಭೆಯಲ್ಲಿ ರಾಜಕೀಯ ಬಗ್ಗೆ ಅಂತಹ ಯಾವುದೇ ಚರ್ಚೆ ನಡೆದಿಲ್ಲ, ಆದರೆ ಇದು ವರ್ತಮಾನ ವಿಚಾರಗಳ ಕುರಿತಾಗಿ ಈ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಸಂಘಟಕರು ಹೇಳಿದ್ದಾರೆ.
ಈ ಸಭೆಯಲ್ಲಿ ಮೂವರು ಕಾಂಗ್ರೆಸ್ ಪಕ್ಷದ ನಾಯಕರನ್ನು ಆಹ್ವಾನಿಸಿದ್ದರು, ಆದರೆ ಆವರು ಯಾರು ಕೂಡ ಹಾಜರಾಗಿರಲಿಲ್ಲ. ಮಂಗಳವಾರ ನಡೆದ ಸಭೆಯಲ್ಲಿ ರಾಜಕೀಯ ಮುಂಚೂಣಿಯ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಒಕ್ಕೂಟದ ಅನುಭವಿ, ನುರಿತ ಸಮಾಲೋಚಕ ಮತ್ತು ಸರ್ಕಾರದ ಅಪಾರ ಅನುಭವ ಹೊಂದಿರುವ ಭಾರತದ ಅತ್ಯಂತ ಅನುಭವಿ ರಾಜಕಾರಣಿಗಳಲ್ಲಿ ಒಬ್ಬರಾದ ಪವಾರ್ ಹೇಳಿದರು.
ಇದನ್ನೂ ಓದಿ: 2024ರ ಮಹಾಚನಾವಣೆಯಲ್ಲಿ ಬಿಜೆಪಿಗೆ ಸೆಡ್ಡು ಹೊಡೆಯಲಿದೆಯಾ ತೃತೀಯ ರಂಗ.? ಪ್ರಶಾಂತ್ ಕಿಶೋರ್ ಹೇಳಿದ್ದೇನು..?
ಇನ್ನೊಂದೆಡೆಗೆ ಈ ರೀತಿಯ ಸಭೆಗಳು ಕಾಂಗ್ರೆಸ್ಸೇತರ ಹಾಗೂ ಬಿಜೆಪಿಯೇತರ ಶಕ್ತಿಗಳ ಬಗ್ಗೆ ಮಾತನಾಡಿದರು ಕೂಡ ಬಿಜೆಪಿಯನ್ನು ಎದುರಿಸಲು ಪ್ಯಾನ್ ಇಂಡಿಯಾ ಅಸ್ತಿತ್ವ ಹೊಂದಿರುವ ಕಾಂಗ್ರೆಸ್ ಪಕ್ಷದ ಅಗತ್ಯವಿರುತ್ತದೆ ಎಂದು ಕೆಲವು ಪಕ್ಷಗಳು ಹೇಳಿವೆ
2024 ರಲ್ಲಿ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸುವ ತೃತೀಯ ರಂಗದ ಅಗತ್ಯವಿದೆ ಎಂದು ಅವರು ಹೇಳಿದರು: "ನಾವು ಚರ್ಚಿಸಿಲ್ಲ ಆದರೆ ಸಾಮೂಹಿಕ ನಾಯಕತ್ವದ ಪಾತ್ರವನ್ನು ವಹಿಸುವ ಮೂಲಕ ನಾವು ಮುಂದುವರಿಯಬೇಕಾಗಿದೆ ಎಂದು ನಾನು ಭಾವಿಸುತ್ತೇನೆ. ನಾನು ಇದನ್ನು ವರ್ಷಗಳಿಂದ ಮಾಡಿದ್ದೇನೆ, ಆದರೆ ಇದೀಗ ನಾನು ಎಲ್ಲರನ್ನೂ ಒಟ್ಟಿಗೆ ಇರಿಸಲು, ಮಾರ್ಗದರ್ಶನ ಮಾಡಲು ಮತ್ತು ಬಲಪಡಿಸಲು ಕೆಲಸ ಮಾಡುತ್ತೇನೆ"ಎಂದು ಹೇಳಿದರು.
ಇದನ್ನೂ ಓದಿ: ಸಚಿನ್ ತೆಂಡೂಲ್ಕರ್ ಗೆ ಶರದ್ ಪವಾರ್ ನೀಡಿದ ಆ ಸಲಹೆ ಏನು ಗೊತ್ತೇ?
ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರೊಂದಿಗಿನ ಶರದ್ ಪವಾರ್ ಅವರ ಸಭೆಗಳು ಕಳೆದ ಕೆಲವು ವಾರಗಳಲ್ಲಿ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದ್ದವು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.